ರಕ್ತದಾನ ನಿಸ್ವಾರ್ಥ ಸೇವೆ : ಡಾ.ಪಿ.ಕೆ. ರಾಠೋಡ
ಇಂಡಿ : ವಿಶ್ವ ರಕ್ತದಾನಿಗಳ ದಿನದ ಜಾಗತಿಕ ಧ್ಯೇಯವು ಪ್ರತಿ ವರ್ಷವೂ ತಮ್ಮ ರಕ್ತವನ್ನು ತಮಗೆ ತಿಳಿದಿಲ್ಲದ ಜನರಿಗಾಗಿ ದಾನ ಮಾಡುವ ನಿಸ್ವಾರ್ಥ ವ್ಯಕ್ತಿಗಳನ್ನು ಗುರುತಿಸುತ್ತದೆ ಎಂದು ಡಾ. ಪಿ.ಕೆ. .ರಾಠೋಡ ಹೇಳಿದರು.
ಪಟ್ಟಣದ ಜಿ.ಆರ್.ಗಾಂಧಿ ಕಲಾ, ವಾಯ್.ಎ.ಪಾಟೀಲ ವಾಣ ಜ್ಯ ಹಾಗೂ ಎಮ್.ಪಿ. ದೋಶಿ ವಿಜ್ಞಾನ ಪದವಿ ಮಹಾವಿದ್ಯಾಲಯದಲ್ಲಿ ರೆಡ್ ಕ್ರಾಸ್, ಸ್ಕೌಟ್ಸ್ ಗೈಡ್ಸ್, ಎನೆಸ್ಸೆಸ್ ಮತ್ತು ಜೀವಶಾಸ್ತç ವಿಭಾಗ ಅಡಿದಲ್ಲಿ ‘ವಿಶ್ವ ರಕ್ತದಾನಿಗಳ ದಿನಾಚರಣೆ’ ಕಾರ್ಯಕ್ರಮದಲ್ಲಿ ಮಾತನಾಡಿದರು.
ಪ್ರತಿ ವರ್ಷ ಪ್ರಪಂಚದಾದ್ಯಂತದ ದೇಶಗಳು ಜೂನ್ ೧೪ ರಂದು ವಿಶ್ವ ರಕ್ತದಾನಿಗಳ ದಿನವನ್ನು ಆಚರಿಸುತ್ತವೆ. ಸುರಕ್ಷಿತ ರಕ್ತ ಮತ್ತು ರಕ್ತದ ಉತ್ಪನ್ನಗಳ ಅಗತ್ಯತೆಯ ಅರಿವು ಮೂಡಿಸಲು ಮತ್ತು ಸ್ವಯಂಪ್ರೇರಿತ, ಪಾವತಿಸದ ರಕ್ತದ ದಾನಿಗಳಿಗೆ ತಮ್ಮ ಜೀವ ಉಳಿಸುವ ರಕ್ತಕ್ಕಾಗಿ ಧನ್ಯವಾದಗಳನ್ನು ನೀಡಲು ಈವೆಂಟ್ ಕಾರ್ಯನಿರ್ವಹಿಸುತ್ತದೆ. ರೋಗಿಗಳಿಗೆ ಸುರಕ್ಷಿತ ರಕ್ತ ಮತ್ತು ರಕ್ತದ ಉತ್ಪನ್ನಗಳಿಗೆ ಸಾಕಷ್ಟು ಪ್ರಮಾಣದಲ್ಲಿ ಪ್ರವೇಶವನ್ನು ನೀಡುವ ರಕ್ತದ ಸೇವೆಯು ಪರಿಣಾಮಕಾರಿ ಆರೋಗ್ಯ ವ್ಯವಸ್ಥೆಯ ಪ್ರಮುಖ ಅಂಶವಾಗಿದೆ ಎಂದರು.
ಶ್ವೇತಾ ಕಾಂತ, ಮಲ್ಲಿಕಾರ್ಜುನ ಕೊಣದೆ, ಡಾ. ಶ್ರೀಕಾಂತ ರಾಠೋಡ ಅವರು ಮಾತನಾಡಿದರು. ಡಾ.ಆನಂದ ಸಿ. ನಡವಿನಮನಿ, .ಶ್ರೀಶೈಲ, ಡಾ.ಸಿ.ಎಸ್.ಬಿರಾದಾರ, ಶೃತಿ ಪಾಟೀಲ, ಪಂಕಜಾ ಕುಲಕಣ ð, ಶೃತಿ ಬಿರಾದಾರ ಬಲರಾಮ ವಡ್ಡರ ಮತ್ತಿತರಿದ್ದರು.
ಇಂಡಿ ಪಟ್ಟಣದ ಜಿ.ಆರ್.ಗಾಂಧಿ ಪದವಿ ಮಹಾವಿದ್ಯಾಲಯದಲ್ಲಿ ‘ವಿಶ್ವ ರಕ್ತದಾನಿಗಳ ದಿನಾಚರಣೆ’ ಕಾರ್ಯಕ್ರಮದಲ್ಲಿ ರಾಠೋಡ ಮಾತನಾಡಿದರು.