ತಂಬಾಕು ಸೇವನೆಯಿಂದ ಕ್ಯಾನ್ಸರ್ ರೋಗ
ಇಂಡಿ : ತಂಬಾಕು ಸೇವನೆಯಿಂದ ಕ್ಯಾನ್ಸರ ದಂತಹ
ಮಾರಕ ರೋಗಗಳು ತಗಲುತ್ತವೆ. ತಂಬಾಕು ಸೇವನೆ ಆರೋಗ್ಯಕ್ಕೆ ಹಾನಿಕಾರಕ ಎಂದು ಈ ವರ್ಷದ
ಘೋಷಣಾ ವಾಕ್ಯದ ಮೂಲಕ “ತಂಬಾಕು ಉದ್ಯಮದ ಹಸ್ತಕ್ಷೇಪದಿಂದ ಮಕ್ಕಳನ್ನು ರಕ್ಷಿಸುವುದು ಅವಶ್ಯಕತೆ ಇದೆ ಹಿರಿಯ ದಂತ ವೈದ್ಯಾಧಿಕಾರಿ ಡಾ|| ರವಿ ಭತಗುಣಕಿ ಹೇಳಿದರು.
ಪಟ್ಟಣದ ಸಾರ್ವಜನಿಕ ಆಸ್ಪತ್ರೆ ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳ ಸಹಯೋಗದಲ್ಲಿ ತಂಬಾಕು
ಮುಕ್ತ ದಿನದ ಕಾರ್ಯಕ್ರಮ ಹಮ್ಮಿಕೊಂಡಿದ್ದ ವಿಶ್ವ ತಂಬಾಕು ನಿಷೇಧ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು. ಯುವಕರು ಗುಟಕಾ,
ಸಿಗರೇಟ್ ಎಂದು ದುಶ್ಚಟಗಳಿಗೆ ಬಲಿಯಾಗುತ್ತಿದ್ದಾರೆ.
ತಂಬಾಕುಮುಕ್ತ ಸಮಾಜ ನಿರ್ಮಾಣಕ್ಕೆ ನಾಗರಿಕರ
ಸಹಕಾರವೂ ಮುಖ್ಯ ಎಂದರು.
ಡಾ|| ಎಸ್ ಐ ಮೇತ್ರಿ ಮಾತನಾಡಿ, ಸಮಾಜಕ್ಕೆ
ಮಾರಕವಾಗಿರುವತಂಬಾಕು ಸೇವನೆ ಬಗೆಗಿನ
ಅಪಾಯಗಳ ಬಗ್ಗೆ ಜನ ಸಾಮಾನ್ಯರನ್ನು ಜಾಗೃತ
ಮೂಡಿಸಬೇಕಿದೆ. ತಂಬಾಕು ಮುಕ್ತ ಸಮಾಜ
ನಿರ್ಮಾಣಕ್ಕೆ ಪ್ರತಿಯೊಬ್ಬರೂ ಶ್ರಮಿಸಬೇಕು ಎಂದರು.
ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ|| ಐ ಎಸ್
ಧಾರವಾಡಕರ ವೈದ್ಯಾಧಿಕಾರಿಗಳಾದ ಡಾ|| ಜಗದೀಶ್
ಬಿರಾದಾರ. ಡಾ||.ಅಮಿತ್ ಕೊಳೇಕರ. ಡಾ|| ವಿಪುಲ್
ಕೊಳೇಕರ. ಡಾ.ವಿಕಾಸ್ ಸಿಂದಗಿ. ಡಾ.ಪ್ರವೀಣ್
ಗಜಾಕೂಶ. ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳ
ಎಲ್ಲಾ ಶಿಕ್ಷಕರು ಹಾಗೂ ಆಸ್ಪತ್ರೆಯ ಸಿಬ್ಬಂದಿಗಳಾದ. ಶಿವಾಜಿ ಮಾನೆ. ಕೆ ಜಿ ಶೀಲವಂತ. ಬಸವರಾಜ
ಅಹಿರಸಂಗ. ಶಶಿಕಾಂತ ನಾವಿ. ಸವಿತಾ ಕನ್ನಳ.
ಸೋಮನಿಂಗ ಸಜ್ಜನ. ಪುಟ್ಟು ಮೇಡೆದಾರ. ಸಂಜೀವ
ಬಡಿಗೇರ. ಮರಿಯಪ್ಪ ದೊಡ್ಡಮನಿ ಮತ್ತಿತರಿದ್ದರು.
ಇಂಡಿ ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ನಡೆದ ವಿಶ್ವ ತಂಬಾಕು ನಿಷೇಧ ದಿನಾಚರಣೆಯಲ್ಲಿ ಡಾ|| ರವಿ ಭತಗುಣಕಿ ಮಾತನಾಡಿದರು. ಧಾರವಾಡಕರ
ಚಿತ್ರದಲ್ಲಿದ್ದಾರೆ