ಹಾಳು ಬಿದ್ದ ಕೊಳುವೆ ಬಾವಿ ಮುಚ್ಚಿ..! ಇಲ್ಲವಾದರೆ ಕಠಣ ಕ್ರಮ : ಎಸಿ ಅಬೀದ್ ಗದ್ಯಾಳ
ಇಂಡಿ: ತಾಲೂಕಿನಾದ್ಯಂತ ರೈತರು ಹಾಗೂ ಸಾರ್ವಜನಿಕರು ಪಾಳು ಬಿದ್ದ ಕೊಳವೆ (ಬೋರ್ ವೆಲ್) ಬಾವಿಗಳು ಮುಚ್ಚದೇ ಇದ್ದರೆ ಗ್ರಾಮ ಲೆಕ್ಕಿಗರು ಅಭಿವೃದ್ಧಿ ಅಧಿಕಾರಿಗಳು ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಡಂಗರು ಹೊಡೆದು ಅದನ್ನು ಮುಚ್ಚಿಸಬೇಕು. ಒಂದು ವೇಳೆ ಮುಚ್ಚದೆ ಇದ್ದರೆ ಗ್ರಾಮಲೆಕ್ಕಿಗರು ಹಾಗೂ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ನೇರ ಹೊಣೆಗಾರರು ಆಗುತ್ತಾರೆ. ಅಂತವರ ವಿರುದ್ದ ಶಿಸ್ತು ಕಾನೂನು ಕ್ರಮ ಜರಗಿಸಲಾಗುವುದು ಎಂದು ಕಂದಾಯ ಉಪವಿಭಾಗಾಧಿಕಾರಿ ಅಬೀದ್ ಗದ್ಯಾಳ ಹೇಳಿದರು.
ಮಂಗಳವಾರ ಪಟ್ಟಣದ ಮಿನಿ ವಿಧಾನಸೌಧದ ತಹಸೀಲ್ದಾರ ಕಚೇರಿಯ ಸಭಾಭವನದಲ್ಲಿ ಪಿಡಿಒ, ಗ್ರಾಮ
ಲೆಕ್ಕಾಧಿಕಾರಿಗಳು ಮತ್ತು ತಾಲೂಕಾ ಮಟ್ಟದ ಎಲ್ಲ
ಇಲಾಖೆಯ ಅಧಿಕಾರಿಗಳು ಹಾಗೂ ನೋಡಲ್ ಅಧಿಕಾರಿಗಳ ಕುಡಿಯುವ ನೀರಿನ ಕುರಿತು ನಡೆದ ಟಾಸ್ಕ ಫೋರ್ಸ ಸಭೆಯಲ್ಲಿ ಅವರು ಮಾತನಾಡಿದರು.
ನಮ್ಮ ತಾಲೂಕಿನಲ್ಲಿ ಕೊಳವೆ ಬಾವಿಗಳ ಪ್ರಕರಣಗಳು
ಮರುಕಳಿಸಬಾರದು. ಬೊರವೆಲ್ ಕೊರಿಯವರು
ಕಡ್ಡಾಯವಾಗಿ ಗ್ರಾಪಂ ದಲ್ಲಿ ಎನ್‍ಓಸಿ ತೆಗೆದುಕೊಳ್ಳಬೇಕು. ಒಂದು ವೇಳೆ ತೆಗೆದುಕೊಳ್ಳದಿದ್ದರೆ ಅಂತವರ ವಿರುದ್ದ ಎಫ್‍ಆಯ್‍ಯರ್ ದಾಖಲಿಸಿ ಎಂದರು.
ನೀರಿನ ಕುರಿತು ತಾಲೂಕಾ ಮಟ್ಟದ ಅಧಿಕಾರಿಗಳು ವಾಚ್ ವಾರ್ಡ ಸರಿಯಾಗಿ ಕೆಲಸ ಮಾಡಬೇಕು ಎಂದರು.
ರೈತರು ನೀರನ್ನು ಕುಡಿಯಲಿಕ್ಕೆ ಮಾತ್ರ ಬಳಸಬೇಕು. ಕೃಷಿಗೆ ಉಪಯೋಗಿಸಬಾರದು ಒಂದು ವೇಳೆ ರೈತರು ಅಕ್ರಮವಾಗಿ ಕಾಲುವೆಗಳು ಅಗೆದರೆ ಅಂಥವರ ಮೇಲೆ ಕಾನೂನು ಕ್ರಮ ಜರುಗಿಸಭೆಕು ಎಂದರು.
ವೇದಿಕೆಯ ಮೇಲೆ ತಾಪಂ ಇಒ ನೀಲಗಂಗಾ
ಉಪಸ್ಥಿತರಿದ್ದರು.
ಹೆಸ್ಕಾ ಎಇಇ ಎಸ್.ಆರ್. ಮೆಂಡೆಗಾರ, ಸಹಾಯಕ ಕೃಷಿ
ನಿರ್ದೇಶಕ ಮಹಾದೇವಪ್ಪ ಏವೂರ, ತೋಟಗಾರಿಕೆ
ಸಹಾಯಕ ನಿರ್ದೇಶಕ ಎಚ್.ಎಸ್. ಪಾಟೀಲ, ಪಿಡಬ್ಲ್ಯೂಡಿ ದಯಾನಂದ ಮಠ, ಸಿದ್ದರಾಮ ಮುಜಗೊಂಡ, ಬಿ.ಎಚ್. ಕನ್ನೂರ, ಪಿಡಿಒ ಗಳಾದ ಉಮೇಶ ಹೂಗಾರ, ಬಸವರಾಜ ಬಬಲಾದ, ಜಬ್ಬಾರ ಹಳ್ಳಿ, ಎಚ್.ಎಸ್. ಗುನ್ನಾಪುರ, ವೀಣಾ ಕೆ ಮತ್ತಿತರಿದ್ದರು.
ಇಂಡಿ: ಪಟ್ಟಣದ ಮಿನಿ ವಿಧಾನಸೌಧದಲ್ಲಿ ಕುಡಿಯುವ ನೀರಿನ ಕುರಿತು ನಡೆದ ಟಾಸ್ಕ ಫೋರ್ಸ ಸಭೆಯಲ್ಲಿ ಎಸಿ ಅಬೀದ್ ಗದ್ಯಾಳ ಮಾತನಾಡಿದರು.