ಲ್ಯಾಂಡ್ ಆರ್ಮಿ ಇಲಾಖೆಯ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ ಎಸಿ ಅಬೀದ್ ಗದ್ಯಾಳ
ನಿಯೋಜನಗೊಂಡ ವೈದ್ಯಾಧಿಕಾರಿಗಳನ್ನು ಕರೆ
ತರಿಸಿ – ಎಸಿ ಅಬೀದ್ ಗದ್ಯಾಳ
ಇಂಡಿ : ಇಂಡಿಯ ಸರಕಾರಿ ಆಸ್ಪತ್ರೆಯಲ್ಲಿ ಸೇವೆ ಸಲ್ಲಿಸುತ್ತಿರುವ 6 ವೈದ್ಯರನ್ನು ಬೇರೆಯೆಡಗೆ ನಿಯೋಜನೆಗೊಳಿಸಿದ್ದು ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ವೈದ್ಯರ ಕೊರತೆ ಇದ್ದು ಅವರನ್ನು ಕೂಡಲೇ ಕರೆ ತರಲು ಡಿಎಚ್‍ಓ ಪತ್ರ ಬರೆಯಿಸಿ ಎಂದು ಕಂದಾಯ ಉಪ ವಿಬಾಗಾಧಿಕಾರಿ ಅಬೀದ ಗದ್ಯಾಳ ಹೇಳಿದರು.
ಸೋಮವಾರ ಕಂದಾಯ ಉಪವಿಭಾಗಾಧಿಕಾರಿ ಅಬೀದ್ ಗದ್ಯಾಳ್ ಅವರು ಧಿಡೀರನೆ ಪಟ್ಟಣದ ತಾಲೂಕಾ ಸಾರ್ವಜನಿಕ ಆಸ್ಪತ್ರೆಗೆ ಭೇಟಿ ನೀಡಿ, ಪರಿಶೀಲನೆ ನಡೆಸಿದರು. ಎಲ್ಲ ವೈದ್ಯರು ಒಂದೇ ಕೋಣೆಯಲ್ಲಿ ಕುಳಿತುಕೊಳ್ಳುವುದನ್ನು ಬಿಟ್ಟು, ಬೇರೆ ಬೇರೆ ಕೋಣೆಗಳಲ್ಲಿ ಕುಳಿತುಕೊಳ್ಳಲು ಸೂಚಿಸಿದರು. ಅದಲ್ಲದೆ ಆಸ್ಪತ್ರೆಯ ಪ್ರತೀ ವಾರ್ಡಗಳಿಗೂ ಭೇಟಿ ನೀಡಿ ಸಮಗ್ರ ಮಾಹಿತಿ ಪಡೆದುಕೊಂಡರು. ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ಡಾ|| ಈರಣ್ಣ ಧಾರವಾಡಕರ್ ಕಂದಾಯ ಉಪ ವಿಭಾಗಾಧಿಕಾರಿಗಳಿಗೆ ಅಲ್ಲಿನ ವ್ಯವಸ್ಥೆ ಕುರಿತು ವಿವರಿಸಿದರು. ಕಳೆದ 15 ವರ್ಷಗಳಿಂದ ಆಸ್ಪತ್ರೆಯಲ್ಲಿ
ಸಿಜೇರಿಯನ್ ವ್ಯವಸ್ಥೆ ಇರಲಿಲ್ಲ. ಈಗ ವಾರದಲ್ಲಿ ಎರಡು
ದಿನ ಮಂಗಳವಾರ ಮತ್ತು ಶುಕ್ರವಾರ ಸಿಜೇರಿಯನ್ ವ್ಯವಸ್ಥೆ ಕಲ್ಪಿಸಲಾಗಿದೆ ಎಂದರು. ಓಪಿಡಿ ವಿಭಾಗದಲ್ಲಿ ಮೊದಲಿನಂತೆ ಹಾಳೆಯ ಮೇಲೆ ಚೀಟಿ ಬರೆಯುತ್ತಿಲ್ಲ ಬದಲಾಗಿ ಡಿಜಟಲೀಕರಣ ಮಾಡಲಾಗಿದ್ದು ರೋಗಿಯ ಆಧಾರ ಕಾರ್ಡ ನಂಬರ್ ನೀಡಿದರೆ ಕೂಡಲೆ ಓಪಿಡಿ ಚೀಟಿಯ ಪ್ರಿಂಟ್ ಬರುವಂತೆ ವ್ಯವಸ್ಥೆ ಕಲ್ಪಿಸಲಾಗಿದೆ. ತುರ್ತು ಚಿಕಿತ್ಸಾ ವಿಭಾಗದಲ್ಲಿಯೂ ಸಹ ಉನ್ನತ ಮಟ್ಟದ ಮಶೀನಗಗಳನ್ನು ಸ್ಥಾಪಿಸಲಾಗಿದೆ. ರಕ್ತ ಶೇಖರಣಾ ಘಟಕ ಪ್ರಾರಂಭಿಸಲಾಗಿದ್ದು, ಖಾಸಗಿ ವೈದ್ಯರಿಗೂ ಸಹ ರಕ್ತ ನೀಡಲು ಮುಂದಾಗಲೂ ಸೂಚಿಸಿದರು. ಕೆಂದ್ರೀಯ ಪ್ರಯೋಗಾಲಯಕ್ಕೆ ಭೇಟಿ ನೀಡಿ ಅಲ್ಲಿನ ಉನ್ನತ ಮಟ್ಟದ ಟೆಸ್ಟ ಮಾಡುವುದನ್ನು ವೀಕ್ಷಿಸಿ ಅಲ್ಲಿನ ಸಿಬ್ಬಂದಿ ಹಾಗೂ ಮುಖ್ಯ ವೈದ್ಯಾಧಿಕಾರಿಗಳಿಗೆ ಪ್ರಶಂಸಿಸಿದರು.
ಈ ವಾರದಲ್ಲಿ 57 ಟೆಸ್ಟಗಳನ್ನು ಮಾಡಲು ಪ್ರಾರಂಭ ಮಾಡಲಾಗುತ್ತದೆ ಎಂದು ವೈದ್ಯರು ತಿಳಿಸಿದರು.
ಕ್ಷಯರೋಗ ವಿಭಾಗಕ್ಕೆ ಭೇಟಿ ನೀಡಿದ ಕಂದಾಯ
ಉಪವಿಭಾಗಾಧಿಕಾರಿಗಳು ಉನ್ನತ ತಾಂತ್ರಿಕ
ಸಿ.ಬಿ.ಎನ್.ಎ.ಎ.ಟಿ ಮಶೀನ್ ವೀಕ್ಷಿಸಿ ಸಂತಸ ವ್ಯಕ್ತಪಡಿಸಿದರು.
ಎನ್.ಆರ್.ಸಿ ಕೇಂದ್ರದ ಕಟ್ಟಡ ಪೂರ್ಣಗೊಂಡಿದ್ದು
ಇದುವರೆಗೂ ನಮಗೆ ಹಸ್ತಾಂತರವಾಗಿಲ್ಲ ಎಂದು
ಮುಖ್ಯ ವೈದ್ಯಾಧಿಕಾರಿಗಳು ಕಂದಾಯ
ಉಪ ವಿಭಾಗಾಧಿಕಾರಿಗಳಿಗೆ ತಿಳಿಸಿದಾಗ ಕೇಂದ್ರಕ್ಕೆ
ಭೇಟಿ ನೀಡಿದ ಅಬೀದ್ ಗದ್ಯಾಳ ಅಲ್ಲಿನ ಕಟ್ಟಡ
ಬಿರುಕು ಬಿಟ್ಟಿದ್ದನ್ನು ಕಂಡು ಅಸಮಾಧನಾಗೊಂಡು ಲ್ಯಾಂಡ್ ಆರ್ಮಿ ಇಲಾಖೆಯ ಅಧಿಕಾರಿಗಳಿಗೆ ಕರೆ ಮಾಡಿ ಕಟ್ಟಡ ಬಿರುಕು ಬಿಟ್ಟಿದ್ದಲ್ಲದೆ ಇನ್ನಷ್ಟು ಕೆಲಸಗಳು ಬಾಕಿ
ಉಳಿದುಕೊಂಡಿವೆ. ಅವೆಲ್ಲವನ್ನೂ ಕೂಡಲೆ
ಪೂರ್ಣಗೊಳಿಸಿ, ಜೊತೆಗೆ ಮೂಲ ಸೌಲಭ್ಯ ಕಲ್ಪಿಸಿ
ಕೂಡಲೆ ಮುಖ್ಯ ವೈದ್ಯಾಧಿಕಾರಿಗಳಿಗೆ ಕಟ್ಟಡ ಹಸ್ತಾಂತರಿಸಲು ಸೂಚಿಸಿದರು.
ವಿಶ್ವ ದಾದಿಯರ ದಿನದ ಪ್ರಯುಕ್ತ ಎಲ್ಲ
ದಾದಿಯರಿಗೆ ಕಂದಾಯ ಉಪವಿಭಾಗಾಧಿಕಾರಿಗಳು
ಶುಭಾಷಯ ತಿಳಿಸಿ, ನಿಮ್ಮ ಕರ್ತವ್ಯವನ್ನು ಚಾಚೂ
ತಪ್ಪದೆ ಯಾವುದೇ ಫಲಾಪೇಕ್ಷೆ ಇಲ್ಲದೆ ಮಾಡಿ ಎಂದು ತಿಳಿಸಿದರು.
ಡಾ|| ರವಿ ಭತಗುಣಕಿ, ಡಾ|| ಅಮಿತ ಕೋಳೆಕರ್, ಡಾ||
ವಿಪುಲ್ ಕೋಳೆಕರ್ ಸೇರಿದಂತೆ ಸಿಬ್ಬಂದಿಗಳು
ಉಪಸ್ಥಿತರಿದ್ದರು.
ಕಂದಾಯ ಉಪವಿಭಾಗಾಧಿಕಾರಿ ಅಬೀದ್ ಗದ್ಯಾಳ್ ಅವರು ಧಿಡೀರನೆ ಪಟ್ಟಣದ ತಾಲೂಕಾ ಸಾರ್ವಜನಿಕ ಆಸ್ಪತ್ರೆಗೆ ಭೇಟಿ ನೀಡಿ, ಪರಿಶೀಲನೆ ನಡೆಸಿದರು.