ಮೇ 16 ರಂದು ಕೃಷ್ಣಾ ಕಾಲುವೆಗೆ ನೀರು..! 144 ಕಲಂ ಜಾರಿ
ಇಂಡಿ : ತಾಲೂಕಿನಲ್ಲಿ ಹರಿಯುವ ಕೃಷ್ಣಾ ಕಾಲುವೆಗೆ
ನೀರು ಹರಿಯ ಬಿಡಲಾಗಿದ್ದು ಅದು ಮೇ. 16 ರಂದು
ಇಂಡಿ ತಾಲೂಕು ತಲುಪಲಿದೆ ಎಂದು ಕೃಷ್ಣಾ ಬಾಗ್ಯ ಜಲ
ನಿಗಮದ ಅಧಿಕ್ಷಕ ಅಭಿಯಂತರ ಮನೋಜಕುಮಾರ ಗಡಬಳ್ಳಿ ತಿಳಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು
ಈಗಾಗಲೇ ನೀರು ಸಿಂದಗಿ ತಾಲೂಕಿನ ಕಾಲುವೆಗಳಲ್ಲಿ
ಹರಿಯುತ್ತಿದ್ದು ಸಿಂದಗಿ ತಾಲೂಕಿನ ಬಳಗಾನೂರ
ಕೆರೆಯನ್ನು ತುಂಬಲಾಗುತ್ತಿದೆ. ನಂತರ ಮೇ 16 ರಂದು ಇಂಡಿ ತಾಲೂಕಿಗೆ ಸಂಬಂದಿತ ಸಂಗೋಗಿ ಕೆರೆ, ತಾಲೂಕಿನ ಲೋಣಿ ಕೆಡಿ ಕೆರೆ ತುಂಬಿಸಲಾಗುವದು.
ಈ ನೀರು ಕುಡಿಯಲು ಮತ್ತು ಜನ ಜಾನುವಾರುಗಳ ಉಪಯೋಗಕ್ಕೆ ಮಾತ್ರ ಬಳಸಲು ತಿಳಿಸಲಾಗಿದೆ ಎಂದರು.
ಇಂಡಿಯ ಕಂದಾಯ ಉಪ ವಿಬಾಗಾಧಿಕಾರಿ ಅಬೀದ್
ಗದ್ಯಾಳ ಮತ್ತು ಡಿ.ಎಸ್.ಪಿ ಜಗದೀಶ ಮಾತನಾಡಿ ಕೃಷ್ಣಾ
ಕಾಲುವೆ ನೀರು ಕುಡಿಯಲು ಮಾತ್ರ ಬಳಸಬೇಕು.
ಕಾಲುವೆ ಮತ್ತು ಕೆರೆಯ ಮೇಲೆ ವಿದ್ಯುತ್ ಪಂಪ
ಉಪಯೋಗಿಸಿ ನೀರು ಕೃಷಿಗೆ ಪಡೆದುಕೊಂಡರೆ
ಕಾನೂನು ರಿತ್ಯ ಕ್ರಮ ತೆಗೆದುಕೊಳ್ಳಲಾಗುತ್ತಿದೆ. ಮತ್ತು ಕಾಲುವೆ 200ಮೀ ಸುತ್ತಲಿನ ಪ್ರದೇಶದಲ್ಲಿ ಮೋಟಾರು
ಬಳಸದಂತೆ 144 ಕಲಂ ಜಾರಿಗೆ ಯಲ್ಲಿದೆ ಎಂದು
ತಿಳಿಸಿದ್ದಾರೆ.
ಕೃಷ್ಣಾ ಮುಖ್ಯ ಕಾಲುವೆಯಲ್ಲಿ ನೀರು ಹರಿಯುತ್ತಿರುವದು. ಅಧಿಕ್ಷಕ ಅಭಿಯಂತರ ಮನೋಜಕುಮಾರ ಚಿತ್ರದಲ್ಲಿದ್ದಾರೆ.