ವಿಜಯಪುರ ಜಿಲ್ಲೆಯ ಉತ್ತಮ ಸಾಧನೆ : ಡಿಸಿಶ್ಲಾಘನೀಯ
ವಿಜಯಪುರ : 2023-24 ನೇ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ವಿಜಯಪುರ ಜಿಲ್ಲೆಯ ವಿಧ್ಯಾರ್ಥಿಗಳು ರಾಜ್ಯ ಮಟ್ಟದಲ್ಲಿ ಅತ್ಯುತ್ತಮ ಫಲಿತಾಂಶ ತಂದಿದ್ದು ಶ್ಲಾಘನೀಯ ಎಂದು ಡಿಸಿ ಟಿ ಬೂಭಾಲನ್ ಹೇಳಿ ಅಭಿನಂದನೆ ತಿಳಿಸಿದರು.
ಈ ಬಾರಿ ಎಸ್ ಎಸ್ ಎಲ್ ಸಿ ಫಲಿತಾಂಶದಲ್ಲಿ ವಿಜಯಪುರ ಶೈಕ್ಷಣಿಕ ಜಿಲ್ಲೆಯು ರಾಜ್ಯದಲ್ಲಿ 11 ನೇ ಸ್ಥಾನ ಹಾಗೂ ಕಳೆದ ಬಾರಿಯೂ 11 ನೇ ಸ್ಥಾನ ಅಲಂಕರಿಸಿದ್ದು, ಶೇಕಡಾ 79.31 ಫಲಿತಾಂಶ ಹೊಂದಿದೆ.
ಫಲಿತಾಂಶ ವೃದ್ದಿಗಾಗಿ ಅನೇಕ ಶೈಕ್ಷಣಿಕ ಚಟುವಟಿಕೆಗಳನ್ನು ಹಮ್ಮಿಕೊಳ್ಳಲಾಗಿತ್ತು. ಅದರಂತೆ ನಿರಂತರವಾಗಿ ಶಿಕ್ಷಣ ಇಲಾಖೆಯಲ್ಲಿ ನಿರಂತರವಾಗಿ ಚಟುವಟಿಕೆಗಳು ಮಾಡುತ್ತಾ ಹಾಗೂ ಇಲಾಖಾ ಅಧಿಕಾರಿಗಳು ಸಭೆ ನಡೆಸಿ ಉತ್ತಮ ಫಲಿತಾಂಶಕ್ಕೆ ಕಾರಣರಾಗಿದ್ದಾರೆ. ಹಾಗಾಗಿ ಪಾಲಕರು, ಶಿಕ್ಷಕರು ಜೊತೆಗೆ ಶಿಕ್ಷಣ ಇಲಾಖೆಗೆ ಅಭಿನಂದನೆ ಸಲ್ಲಿಸಿದರು.
ಜಿಲ್ಲಾಧಿಕಾರಿ ಮತ್ತು ಜಿಲ್ಲಾ ಪಂಚಾಯತ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ಆಗಾಗ ಸಭೆ ನಡೆಸಿ ಅಗತ್ಯ ಸೂಚನೆ ಮತ್ತು ಮಾರ್ಗದರ್ಶನಗಳನ್ನು ನೀಡಿದ್ದು, ಅವುಗಳ ಅನುಸರಣೆ ಜೊತೆಗೆ ಜನಪ್ರತಿನಿಧಿಗಳ ನಿರ್ದೇಶನಗಳ ಪಾಲನೆ, ಸಂಘಟಿತ ಪ್ರಯತ್ನದಿಂದ ಉತ್ತಮ ಫಲಿತಾಂಶ ಸಂದಿದೆ.
ಫಲಿತಾಂಶದಲ್ಲಿ ಜಿಲ್ಲೆಗೆ ಪ್ರಥಮ ಸ್ಥಾನ ಪಡೆದ ಮುದ್ದೇಬಿಹಾಳ ತಾಲೂಕಿನ ಬಿದರಕುಂದಿ ಗ್ರಾಮದ ಸರಕಾರಿ ಆದರ್ಶ ವಿದ್ಯಾಲಯದ ಮೂಲತಃ ಡವಳಗಿ ಗ್ರಾಮದ ವಿದ್ಯಾರ್ಥಿನಿ ಪವಿತ್ರಾ ಮಡಿವಾಳಪ್ಪಗೌಡ ಕೊಣ್ಣೂರ 625 ಅಂಕಗಳಿಗೆ 623, ಶೇ. 99.68, ದ್ವೀತಿಯ ಸ್ಥಾನ ಪಡೆದ ವಿಜಯಪುರ ತಾಲೂಕಿನ ಕಾರಜೋಳ ಗ್ರಾಮದಲ್ಲಿರುವ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಯ ಪ್ರತಿಭಾ ನರುತಿ 622 ಅಂಕ ಶೇ.99.52 ಹಾಗೂ ತೃತೀಯ ಸ್ಥಾನದಲ್ಲಿರುವ ಮುದ್ದೇಬಿಹಾಳ ತಾಲೂಕಿನ ನಾಗರಬೆಟ್ಟ ಖಾಸಗಿ ಶಾಲೆಯ ಭೂಮಿಕಾ ಜುಮನಾಳ 620 ಅಂಕ ಶೇ.99.2 ಪಡೆದಿರುವದಕ್ಕೆ ಜಿಲ್ಲಾಧಿಕಾರಿ ಅಭಿನಂದಿಸಿ, ಮುಂದಿನ ಉಜ್ವಲ ಭವಿಷ್ಯಕ್ಕೆ ಶುಭ ಹಾರೈಸಿದ್ದಾರೆ.
ಇನ್ನೂಳಿದಂತೆ ಪರೀಕ್ಷೆಯಲ್ಲಿ ಅನುತ್ತೀರ್ಣಗೊಂಡ ವಿಧ್ಯಾರ್ಥಿಗಳು ಭಯ ,ಆತಂಕ ಪಡುವ ಅವಶ್ಯತೆಯಿಲ್ಲ. ಮತ್ತೇ ಜೂನ್ ತಿಂಗಳಲ್ಲಿ ಪುನಃ ಪರೀಕ್ಷೆ- 2 ನಡೆಯುತ್ತದೆ. ಹಾಗಾಗಿ ಸರಿಯಾಗಿ ಮತ್ತೊಮ್ಮೆ ಅಧ್ಯಯನ ಮಾಡಿ, ಪರೀಕ್ಷೆ ಬರೆಯಬೇಕು. ಯಾವುದೆ ಕಾರಣಕ್ಕೂ ದೃತಿಗೆಡಬಾರದು ಸರಿಯಾದ ಅಧ್ಯಯನ ಉತ್ತಮ ಫಲಿತಾಂಶ ಸಿಕ್ಕೆ ಸಿಗುತ್ತದೆ ಎಂದು ಹೇಳಿದರು.


















