Voice of Janata : ಲೋಕಸಭಾ ಚುನಾವಣೆ : ರಾಜ್ಯದ 14 ಲೋಕಸಭಾ ಕ್ಷೇತ್ರಗಳಿಗೆ ಮಂಗಳವಾರ ಮತದಾನ ನಡೆಯ ಲಿದ್ದು, ಒಟ್ಟು 2.59 ಕೋಟಿ ಮತ ದಾರರು ಒಟ್ಟು 227 ಅಭ್ಯರ್ಥಿಗಳ ಭವಿಷ್ಯವನ್ನು ಬರೆಯಲಿದ್ದಾರೆ.
ಮಾಜಿ ಸಿಎಂಗಳಾದ ಬಸವರಾಜ ಬೊಮ್ಮಾಯಿ (ಹಾವೇರಿ) ಮತ್ತು ಜಗದೀಶ್ ಶೆಟ್ಟರ್ (ಬೆಳಗಾವಿ), ಕೇಂದ್ರ ಸಚಿವರಾದ ಪ್ರಲ್ಹಾದ್ ಜೋಶಿ (ಧಾರವಾಡ) ಮತ್ತು ಭಗವಂತ ಖೂಬಾ (ಬೀದರ್), ಯಡಿಯೂರಪ್ಪ ಅವರ ಪುತ್ರ ರಾಘವೇಂದ್ರ (ಶಿವಮೊಗ್ಗ), ಖರ್ಗೆ ಅವರ ಅಳಿಯ ರಾಧಾಕೃಷ್ಣ (ಗುಲ್ಬರ್ಗಾ ಎಸ್‌ಸಿ), ಮತ್ತು ಮಾಜಿ ಸಚಿವ ಬಿ ಶ್ರೀರಾಮುಲು (ಬಳ್ಳಾರಿ) ಕಣದಲ್ಲಿರುವ ಪ್ರಮುಖರು.