ರಿಪಬ್ಲಿಕ್ ಪಕ್ಷದ ಅಭ್ಯರ್ಥಿ ಘೋಷಣೆ
ಆಲಮಟ್ಟಿ ಆಣೆಕಟ್ಟು ಎತ್ತರ 524 ಮೀ ಹೆಚ್ಚಿಸಲು
ಒತ್ತು..!
ಇಂಡಿ : ಸಧ್ಯ ಆಲಮಟ್ಟಿ ಆಣೆಕಟ್ಟಿನ ಎತ್ತರ 519 ಮೀ.
ಇದ್ದು ನಾನು ಸಂಸದನಾಗಿ ಆಯ್ಕೆ ಯಾದರೆ 524 ಮೀ
ಮಾಡಲು ಪ್ರಾಮಾಣಿಕ ಪ್ರಯತ್ನ ಮಾಡುವೆ
ಎಂದು ರಿಪಬ್ಲಿಕ ಪಕ್ಷದ ಅಭ್ಯರ್ಥಿ ಜಿತೇಂದ್ರ ಕಾಂಬಳೆ
ಹೇಳಿದರು.
ಅವರು ಪಟ್ಟಣದ ಅಮರ ಪಂಕ್ಸನ ಹಾಲ್ ದಲ್ಲಿ
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು. ಇಂಡಿ ತಾಲೂಕು ಮೇಲಿಂದ ಮೇಲೆ ಬರಗಾಲಕ್ಕೆ ತುತ್ತಾಗುತ್ತಿದ್ದು ಈ ಭಾಗದ ಕೆಲವು ಪ್ರದೇಶ ನೀರಾವರಿಯಿಂದ ವಂಚಿತವಾಗಿದೆ. ಈ ಭಾಗದ ರೈತರ ಜೀವನ ಹಸನಾಗಿಸಲು ಆಲಮಟ್ಟಿ ಆಣೆಕಟ್ಟಿನ ಎತ್ತರ 524 ಮೀ ಆಗಲು ಪ್ರಯತ್ನಿಸುವೆ ಎಂದರು.
ಆಲಮಟ್ಟಿ ಆಣೆಕಟ್ಟು ಎತ್ತರ 524 ಮೀ ಆದರೆ ವಿಜಯಪುರ ಭಾಗದ ಗುತ್ತಿ ಬಸವಣ್ಣ, ಮುಳವಾಡ,
ರೇವಣಸಿದ್ದೇಶ್ವರ, ಇಂಡಿ ಶಾಖಾ ಕಾಲುವೆ,ಚಿಮ್ಮಲಗಿ
ಯೋಜನೆ ಎಲ್ಲ ಕಾಲುವೆಗಳಲ್ಲಿ ಮತ್ತು ಇಂಡಿ
ತಾಲೂಕಿನ ಕಾಲುವೆಯ ಕೊನೆಯ ಭಾಗದವರಿಗೂ
ನೀರು ಬರುತ್ತದೆ ಎಂದರು. ನಮ್ಮ ದೇಶವು ಪ್ರಜಾ ಸತ್ತಾತ್ಮಕ ಮತ್ತು ಜಾತ್ಯಾತೀತ ರಾಷ್ಟ್ರವಾಗಿದೆ. ನಮ್ಮ ಸಂವಿಧಾನವನ್ನು ಬದಲಾಯಿಸುವ ಸಂಚು ನಡೆದಿದ್ದು ಹಾಗಾದರೆ ನಾವು ರಕ್ತ ಹರಿಸಲು ಸಿದ್ಧ ಎಂದರು.
ನಮ್ಮ ಸಂವಿಧಾನವು ಎಲ್ಲ ನಾಗರಿಕರಿಗೆ ತಾರತಮ್ಮ
ರಹಿತವಾದ ಸಮಾನ ನ್ಯಾಯ ಖಾತ್ರಿ ಪಡಿಸುತ್ತದೆ. ಆದರೆ ನಮ್ಮ ದೇಶದ ಶೇ. 70 ಜನರು ಇಂದು ಅಭಿವೃದ್ದಿಯಿಂದ ವಂಚಿತರಾಗಿದ್ದಾರೆ. ಸ್ವಾತಂತ್ರ್ಯ ದೊರೆತು 7 ದಶಕ ಕಳೆದರೂ ದಲಿತ ಮತ್ತು ಹಿಂದುಳಿದ ಸಮುದಾಯ ಜೊತೆಗೆ ಧಾರ್ಮಿಕ ಅಲ್ಪ ಸಂಖ್ಯಾತರ ಸಮುದಾಯವು ಸಹ ಅತ್ಯಂತ ಹಿಂದುಳಿದ ಮತ್ತು ದಮನಿಸಲ್ಪಟ್ಟಿದೆ.
ಕಳೆದ ಹತ್ತು ವರ್ಷಗಳಲ್ಲಿ ಈ ಸಮುದಾಯಗಳ ಅಭಿವೃದ್ದಿಗಾಗಿ ಮತ್ತು ಅರ್ಥಿಕಮಟ್ಟ ಸುಧಾರಿಸಿಕೊಳ್ಳಲು ಯಾವುದೇ ಯೋಜನೆಗಳನ್ನು ಜಾರಿಗೆ ತರದೆ ಜನ ವಿರೋಧಿ ಯೋಜನೆಗಳನ್ನು ಜಾರಿಗೆ ತಂದು ದೇಶದಲ್ಲಿ
ವಂಚಿತ ಸಮುದಾಯಗಳಲ್ಲಿ ಭಯದ ವಾತಾವರಣ
ಸೃಷ್ಟಿ ಮಾಡುವ ಜತೆಗೆ ಜಾತಿ ತಾರತಮ್ಯ ಮಾಡಲಾಗುತ್ತಿದೆ ಎಂದರು. ಮೋದಿಯವರು ಕಾರ್ಮಿಕ,ರೈತರ ಪರ ವಿಚಾರ ಮಾಡದೇ ಕೇವಲ ಕಾರ್ಪೋರೇಟರ್ ಅಭಿವೃದ್ದಿ ಮಾಡುತ್ತಿದ್ದಾರೆ. ಅನೇಕ ಕಾರ್ಪೋರೆಟರ್‍ಗಳ ಲಕ್ಷಾಂತರ ಕೋಟಿ ಸಾಲ ಮನ್ನಾ ಮಾಡಿದ್ದಾರೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಆರ್.ಪಿ.ಐ ಜಿಲ್ಲಾ ಉಪಾಧ್ಯಕ್ಷ
ಪರಶುರಾಮ ಚಲವಾದಿ,ಜಿಲ್ಲಾ ಕಾರ್ಯದರ್ಶಿ ಸುಖದೇವ
ಮೇಲಿನಕೇರಿ,ತಾಲೂಕಾ ಅಧ್ಯಕ್ಷ ಚಂದ್ರು ಮೇಲಿನಮನಿ, ತಾಲೂಕಾ ಕಾರ್ಯದರ್ಶಿ ಪರಶುರಾಮ ಉಕ್ಕಲಿ ಮತ್ತಿತರಿದ್ದರು.
ಇಂಡಿ ಪಟ್ಟಣದ ಅಮರ ಪಂಕ್ಸನ್ ಹಾಲ್ ದಲ್ಲಿ ರಿಪಬ್ಲಿಕ್ ಪಕ್ಷದ ಅಭ್ಯರ್ಥಿ ಜಿತೇಂದ್ರ ಕಾಂಬಳೆ
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.