ಮತ ಚಲಾಯಿಸಿ ಪ್ರಜಾಪ್ರಭುತ್ವ ಗಟ್ಟಿಗೊಳಿಸಿ ಕರೆ :ಎಸಿ ಅಬೀದ್ ಗದ್ಯಾಳ
ಇಂಡಿ : 2024 ರ ಲೋಕಸಭಾ ಸಾರ್ವತ್ರಿಕ ಚುನಾವಣೆ ಹಿನ್ನೆಲೆಯಲ್ಲಿ ಮತದಾನ ಪ್ರಮಾಣ ಹೆಚ್ಚಿಸುವ ನಿಟ್ಟಿನಲ್ಲಿ ತಾಲ್ಲೂಕು ಆಡಳಿತ, ತಾಲ್ಲೂಕು ಪಂಚಾಯಿತ್, ಸ್ವೀಪ್ ಸಮಿತಿ, ಪುರಸಭೆ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಿಂದ ಮಂಗಳವಾರ ಸಂಜೆ ತಾಲ್ಲೂಕು ಆಡಳಿತ ಸೌಧದಿಂದ ಪಟ್ಟಣದ ಹೃದಯ ಭಾಗದ ಬಸವೇಶ್ವರ ವೃತ್ತದವರೆಗೆ ಕ್ಯಾಂಡಲ್ ಮಾರ್ಚ್ ನಡೆದು ತದನಂತರ ಪ್ರತಿಜ್ಞಾವಿಧಿ ಬೋದಿಸಲಾಯಿತು .
ಮೆರವಣಿಗೆಯುದ್ದಕ್ಕೂ ‘ನಮ್ಮ ಮತ ನಮ್ಮ ಶಕ್ತಿ’, ‘ಮತದಾನ ಮಾಡಲು ನಿರ್ಲಕ್ಷ್ಯವೇಕೆ’, ‘ನಾಗರಿಕರ ಒಂದೇ ಕರೆ-ಅದು ಮತದಾನದ ಕರೆ’, ‘ಮತದಾನ ಪ್ರತಿಯೊಬ್ಬರ ಹಕ್ಕು’, ‘ನಾನು ಮತದಾರ ನನಗೆ ಹೆಮ್ಮೆ’ ಎಂಬಿತ್ಯಾದಿ ಭಿತ್ತಿಪತ್ರ ಹಿಡಿದುಕೊಂಡು ಘೋಷಣೆ ಕೂಗುತ್ತ ಮತದಾರರಲ್ಲಿ ಜಾಗೃತಿ ಮೂಡಿಸಿದರು.
ಈ ಸಂದರ್ಭದಲ್ಲಿ ಉಪವಿಭಾಗ ಅಧಿಕಾರಿ ಅಬೀದ್ ಗದ್ಯಾಳ ಮಾತನಾಡಿದ ಅವರು, ಜಿಲ್ಲೆಯಲ್ಲಿ
ಮತದಾನ ಪ್ರಮಾಣದ ನೂರಕ್ಕೆ ನೂರರಷ್ಟು ಏರಿಸಲು ಸ್ವೀಪ್ ಸಮಿತಿಯಿಂದ ಜಾಗೃತಿ ಮೂಡಿಸಲು ವಿವಿಧ ಚಟುವಟಿಕೆಗಳನ್ನು ಆಯೋಜಿಸಿದೆ. ಇದರಲ್ಲಿ ಮೇಣದಬತ್ತಿ ಮೆರವಣಿಗೆ ಸಹ ಒಂದಾಗಿದೆ’ ಎಂದರು. ಪ್ರತಿಯೊಬ್ಬರು ಬರುವ ಮೇ 7 ರಂದು ಕಡ್ಡಾಯವಾಗಿ ಮತ ಚಲಾಯಿಸಿ ಪ್ರಜಾಪ್ರಭುತ್ವವನ್ನು ಗಟ್ಟಿಗೊಳಿಸಬೇಕು’ ಎಂದು ಕರೆ ನೀಡಿದರು.
ಈ ಸಂದರ್ಭದಲ್ಲಿ ತಹಶಿಲ್ದಾರ ಮಂಜುಳಾ ನಾಯಿಕ, ಸ್ವಿಪ್ ಸಮಿತಿಯ ಹಾಗೂ ತಾಲ್ಲೂಕು ಪಂಚಾಯತ ಕಾರ್ಯ ನಿರ್ವಾಹಕ ಅಧಿಕಾರಿ ನೀಲಗಂಗಾ ಎಸ್ ಬಿ, ಪುರಸಭೆ ಮುಖ್ಯ ಅಧಿಕಾರಿ ಮಹಾಂತೇಶ ಹಂಗರಗಿ,ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಬಿ.ಜೆ ಇಂಡಿ, ರಾಯಭಾರಿ ಹಾಗೂ ಅಂತರಾಷ್ಟ್ರೀಯ ಕ್ರೀಡಾಪಟು ರಾಜೇಶ ಪವಾರ ಹಾಗೂ ಇನ್ನೂ ಅನೇಕ ಇಲಾಖೆ ಅಧಿಕಾರಿ ಹಾಗೂ ಸಿಬ್ಬಂದಿ ವರ್ಗ, ಅಂಗನವಾಡಿ ಕಾರ್ಯಕರ್ತರು ಉಪಸ್ಥಿತರಿದ್ದರು.