IPL 2024 : ಬೆಂಗಳೂರಿನಲ್ಲಿ ವಿಶ್ವ ದಾಖಲೆ
Voice Of Janata :Sports News : IPL 2024:
RCB Vs SRH
Voice Of Janata : ಸನ್‌ರೈಸರ್ಸ್ ಹೈದರಾಬಾದ್ ತಂಡವು ಐಪಿಎಲ್ ಇತಿಹಾಸದಲ್ಲಿ ಅತಿ ಹೆಚ್ಚು ರನ್ ಗಳಿಸಿದ ತಂಡ ಎಂಬ ದಾಖಲೆಯನ್ನು ನಿರ್ಮಿಸಿದೆ. ಈ ಮೂಲಕ 2013ರಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ನಿರ್ಮಿಸಿದ್ದ ದಾಖಲೆಯನ್ನುಹೈದರಾಬಾದ್ ದೂಳಿಪಟ ಮಾಡಿದೆ.
IPL 2024: ಬೆಂಗಳೂರು: ಐಪಿಎಲ್ 2024 ರ 30 ನೇ ಪಂದ್ಯದಲ್ಲಿ ಸನ್‌ರೈಸರ್ಸ್ ತಂಡವು ಹೈದರಾಬಾದ್ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡವನ್ನು 25 ರನ್‌ಗಳಿಂದ ಸೋಲಿಸಿತು.ಈ ಪಂದ್ಯದಲ್ಲಿ ಒಟ್ಟಾಗಿ 549 ರನ್‌ಗಳು ದಾಖಲಾಗಿದ್ದವು.ಅಷ್ಟೇ ಅಲ್ಲದೆ ಈ ಪಂದ್ಯವು ದಾಖಲೆಯ ಸಿಕ್ಸರ್ ಹಾಗೂ ಬೌಂಡರಿಗಳಿಗೆ ಸಾಕ್ಷಿಯಾಯಿತು.
ಪಂದ್ಯದಲ್ಲಿ ಟಾಸ್ ಗೆದ್ದ ಆರ್ಸಿಬಿ ನಾಯಕ ಫಾಫ್ ಡುಪ್ಲೆಸಿಸ್ ಮೊದಲು ಬೌಲಿಂಗ್ ಮಾಡಲು ನಿರ್ಧರಿಸಿದರು. ಇದೆ ವೇಳೆ ಮೊದಲು ಬ್ಯಾಟಿಂಗ್ ಮಾಡಿದ ಸನ್ ರೈಸರ್ಸ್ ಹೈದರಾಬಾದ್ ತಂಡವು 20 ಓವರ್‌ಗಳಲ್ಲಿ 3 ವಿಕೆಟ್‌ಗೆ 287 ರನ್ ಗಳಿಸಿತು.ಇದಕ್ಕೆ ಉತ್ತರವಾಗಿ ಆರ್‌ಸಿಬಿ ತಂಡ ಕೂಡ 20 ಓವರ್‌ಗಳಲ್ಲಿ 7 ವಿಕೆಟ್‌ಗೆ 262 ರನ್ ಗಳಿಸಿತು. ಈ ಪಂದ್ಯದಲ್ಲಿ ಒಟ್ಟಾರೆಯಾಗಿ 43 ಬೌಂಡರಿ ಹಾಗೂ 38 ಸಿಕ್ಸರ್‌ಗಳು ದಾಖಲಾಗಿದ್ದವು.ಆ ಮೂಲಕ ಟಿ20 ಕ್ರಿಕೆಟ್ ಇತಿಹಾಸದಲ್ಲಿ ಎರಡನೇ ಬಾರಿಗೆ ಪಂದ್ಯವೊಂದರಲ್ಲಿ ಇಷ್ಟು ಬೌಂಡರಿಗಳು ದಾಖಲಾಗಿರುವುದಲ್ಲದೆ ಸನ್‌ರೈಸರ್ಸ್ ಮತ್ತು ಆರ್‌ಸಿಬಿ ಪಂದ್ಯವು 2023 ರಲ್ಲಿ ವೆಸ್ಟ್ ಇಂಡೀಸ್ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಪಂದ್ಯದ ಸಂದರ್ಭದಲ್ಲಿ ನಿರ್ಮಾಣವಾಗಿದ್ದ 81 ಬೌಂಡರಿ ಸಿಕ್ಸರ್ ಗಳ ದಾಖಲೆಯನ್ನು ಸರಿಗಟ್ಟಿದೆ.
ಐಪಿಎಲ್ 2024 : ಸ್ಕೋರ್ ಕಾರ್ಡ
ಎಸ್ ಆರ್ ಎಚ್ :287/3/20V
ಆರ್ ಸಿ ಬಿ : ಆರ್ ಸಿ ಬಿ:262/7/20V