ವಿಕಲಚೇತನವಿದ್ದರೂ ಕರ್ತವ್ಯ ಪ್ರಜ್ಞೆಯಿಂದ ಕಾಯಕ ಮಾಡುತ್ತಿರುವ ಮುಜಗೊಂಡ ಕಾರ್ಯ ಶ್ಲಾಘನೀಯ.
ಇಂಡಿ : ದೇಶ ನನಗೇನು ಕೊಟ್ಟಿದೆ ಅನ್ನವುದಕ್ಕಿಂತ ದೇಶಕ್ಕೆ ನಾನೇನು ಕೊಟ್ಟೆ ಮಹತ್ವ ಎನ್ನುವ ನಾನ್ನುಡಿ ಭಾರತೀಯರಿಗೆ ಸರ್ವಕಾಲಿಕ ಸತ್ಯ ವಾಗಿರುವ ಮೌಲ್ಯದ ಮಾತು. ಈ ಮಾತಿಗೆ ಅನುಗುಣವಾಗಿ ಇಂಡಿ ಕಂದಾಯ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿರುವ ಶಿರಸ್ತೆದಾರ ಎಸ್ ಆರ್ ಮುಜಗೊಂಡ ಅವರು ಕಾರ್ಯ ಉದಾಹರಣೆಯಾಗಿದೆ.
ಪಟ್ಟಣದ ತಾಲೂಕು ಆಡಳಿತ ಸೌಧದಲ್ಲಿ, 2024 ರ ಲೋಕಸಭಾ ಚುನಾವಣೆ ಹಿನ್ನೆಲೆ ಏಕಗವಾಕ್ಷಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಎಸ್ ಆರ್ ಮುಜಗೊಂಡ ಕಾರಣರಾಗಿದ್ದಾರೆ. ಏಕೆ ಗೊತ್ತಾ..? ಚುನಾವಣೆ ಕಾರ್ಯ ಬಂದಾಗ, ಎಷ್ಟೋ ಜನರು ದೈಹಿಕ ಮಾನಸಿಕ ಸದೃಡವಿದ್ದರೂ ವಿವಿಧ ಕಾರಣಗಳ ನೆಪವೊಡ್ಡಿ ಚುನಾವಣೆ ಕಾರ್ಯದಿಂದ ತಪ್ಪಿಸಕೊಳ್ಳುವ ಪ್ರಯತ್ನ ಮಾಡುತ್ತಾರೆ. ಹಾಗೆ ಶಿಕ್ಷೆಗೆ ಕೂಡಾ ಒಳಗಾಗುವುದು ಸಾಮನ್ಯ..!
ಆದರೆ ಇಂಡಿ ತಹಶಿಲ್ದಾರ ಕಛೇರಿಯಲ್ಲಿ ಶಿರಸ್ತೆದಾರಯಾಗಿ ಸೇವೆ ಸಲ್ಲಿಸುತ್ತಿರುವ ಎಸ್ ಆರ್ ಮುಜಗೊಂಡ ಅವರು ದೈಹಿಕವಾಗಿ ವಿಕಲಚೇತನ ವಿದ್ದರೂ..! ಚುನಾವಣೆ ಆಯೋಗದಿಂದ ವಿನಾಯಿತಿ ಇದ್ದರೂ..! ಸಹ ಕರ್ತವ್ಯ ನಿರ್ವಹಿಸುತ್ತಿದ್ದು, ಅವರ ಸೇವೆ ಕರ್ತವ್ಯ ಹಾಗೂ ರಾಷ್ಟ್ರೀಯ ಪ್ರಜ್ಞೆಗೆ ಕೈಗನ್ನಡಿಯಾಗಿದೆ.
ತಮ್ಮ ಅಸಾಧಾರಣ ಕೌಶಲಗಳಿಂದ ಲೋಕಸಭಾ ಚುನಾವಣೆಗಾಗಿ ಕರ್ತವ್ಯ ನಿರ್ವಹಿಸುತ್ತಿರುವ ಮುಜಗೊಂಡ ಅವರ ಕರ್ತವ್ಯ ಶ್ಲಾಘನೀಯ ಹಾಗೂ ಇತರರೆಗೆ ಮಾದರಿಯ ಕಾರ್ಯ.
ಅಬೀದ್ ಗದ್ಯಾಳ, ಅಸಿಸ್ಟೆಂಟ್ ಕಮಿಷನರ್ ಇಂಡಿ
ಎಸ್ ಆರ್ ಮುಜಗೊಂಡ ಭಾವಚಿತ್ರ