ಲೋಕಸಭಾ ಚುನಾವಣೆ 2024 : ಇಂಡಿಯಲ್ಲಿ ಏ-11 ರಂದು ಜೆಡಿಎಸ್ ಕಾರ್ಯಕರ್ತರ ಸಭೆ
ಇಂಡಿ : ಜೆಡಿಎಸ್ ಹಾಗೂ ಬಿಜೆಪಿ ಮೈತ್ರಿಯ ಸಮನ್ವಯ ಸಮಿತಿಯ ಹಾಗೂ ವಿಶೇಷವಾಗಿ ಜೆಡಿಎಸ್ ಕಾರ್ಯಕರ್ತರ ಸಭೆಯನ್ನು 11 ಎಪ್ರಿಲ್ ಬೆಳಿಗ್ಗೆ 11 ಘಂಟೆಗೆ ಅಯೋಜಿಸಲಾಗಿದೆ ಜೆಡಿಎಸ್ ತಾಲ್ಲೂಕು ಅಧ್ಯಕ್ಷ ಬಿ.ಡಿ ಪಾಟೀಲ ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ನೀಡಿದ್ದಾರೆ.
ಪಟ್ಟಣದ ಶಾಂತೇಶ್ವರ ಮಂಗಲ್ ಕಾರ್ಯಾಲಯದಲ್ಲಿ ಆಯೋಜಿಸಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಕರ್ತರು ಹಾಗೂ ಮುಖಂಡರು ಉಪಸ್ಥಿತರಿರಲು ತಿಳಿಸಿದ್ದಾರೆ.