ಮಾದೇಶ್ವರ ಬೆಟ್ಟದಲ್ಲಿ 25 ದಿನಗಳಲ್ಲಿ 3,13,00,931.00 ರೂ ಸಂಗ್ರಹ
ಹನೂರು: ಶ್ರೀ ಮಲೈ ಮಹದೇಶ್ವರ ಸ್ವಾಮಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದಲ್ಲಿ ಈ ದಿನ ಬೆಳಿಗ್ಗೆ 7.00 ಗಂಟೆಯಿಂದ ಶ್ರೀ ಶ್ರೀ ಶಾಂತಮಲ್ಲಿಕಾರ್ಜುನಸ್ವಾಮಿಗಳು, ಶ್ರೀ ಸಾಲೂರು ಬೃಹನ್ಮಠಾಧ್ಯಕ್ಷರು ರವರ ದಿವ್ಯಸಾನಿದ್ಯದಲ್ಲಿ ಶ್ರೀ ರಘು, ಎ. ಈ, ಕ.ಆ.ಸೇ, (ಹಿ.ಶ್ರೇಣಿ) ಮಾನ್ಯ ಕಾರ್ಯದರ್ಶಿಗಳು ರವರ ನೇತೃತ್ವದಲ್ಲಿ ಹುಂಡಿ ಎಣಿಕೆ ಕಾರ್ಯ ಮುಕ್ತಾಯಗೊಂಡಿದ್ದು 25 ದಿನಗಳಲ್ಲಿ ದಾಖಲೆಯ ಮೊತ್ತ ಒಟ್ಟು ರೂ.3,13,00,931.00ಗಳು ಹಾಗೂ ಚಿನ್ನ 47 ಗ್ರಾಂ, ಬೆಳ್ಳಿ 2.309 ಕೆ.ಜಿ. ಹುಂಡಿಯಲ್ಲಿ ದೊರೆತಿದೆ. ಎಣಿಕೆ ಕಾರ್ಯದಲ್ಲಿ ಪ್ರಾಧಿಕಾರದ ಉಪ ಕಾರ್ಯದರ್ಶಿ ಶ್ರೀ ಚಂದ್ರಶೇಖರ.ಜಿ.ಎಲ್, ಹಣಕಾಸು ಮತ್ತು ಲೆಕ್ಕ ಪತ್ರ ಸಲಹೆಗಾರರು ಶ್ರೀ ನಾಗೇಶ್ ಹಾಗೂ ಚಾಮರಾಜನಗರ ಜಿಲ್ಲಾಡಳಿತ ಕಛೇರಿ ಮುಜರಾಯಿ ಶಾಖೆಯ ಕು. ಶ್ವೇತಾ ಹಾಗೂ ಪ್ರಾಧಿಕಾರದ ಸಿಬ್ಬಂದಿಗಳು, ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಹಾಗೂ ಬ್ಯಾಂಕ್ ಆಪ್ ಬರೋಡ ಮುಖ್ಯ ವ್ಯವಸ್ಥಾಪಕರು, ಸಿಬ್ಬಂದಿಗಳು ಹಾಜರಿದ್ದರು.
ವರದಿ : ಚೇತನ ಕುಮಾರ್ ಎಲ್, ಹನೂರ ತಾಲ್ಲೂಕು, ಚಾಮರಾಜನಗರ ಜಿಲ್ಲೆ.


















