ಮಾರ್ಚ್ 24ರಂದು ರಾತ್ರಿ ಕಾಮದಹನ : ಹೋಳಿ ಸಂಭ್ರಮ
ಇಂಡಿ : ಶಾಂತಿ ಸುವ್ಯವಸ್ಥಿತೆಗೆ ದಕ್ಕೆ ತರದಂತೆ ಹೋಳಿ ಹಬ್ಬವನ್ನು ಆಚರಿಸಬೇಕು. ಬಣ್ಣಕ್ಕೆ, ಹಬ್ಬಕ್ಕೆ ಜಾತಿ ಇಲ್ಲ. ಬಣ್ಣದ ನೆಪದಲ್ಲಿ ವಿನಾಕಾರಣ ಬೇರೊಬ್ಬರಿಗೆ ತೊಂದರೆ ಕೊಟ್ಟಲ್ಲಿ ಕಾನೂನು ಪ್ರಕಾರ ಕ್ರಮ ಜರುಗಿಸಬೇಕಾಗುತ್ತದೆ ಎಂದು ಡಿವಾಯ್ಎಸ್ಪಿ ಜಗದೀಶ್ ಎಚ್ ಎಸ್ ಶನಿವಾರ ಎಚ್ಚರಿಸಿದರು.
ಪಟ್ಟಣದ ಡಿವಾಯ್ಎಸ್ಪಿ ಕಛೇರಿಯಲ್ಲಿ ಆಯೋಜಿಸಿದ ಹೋಳಿ ಹಬ್ಬ ಹಾಗೂ ರಮಜಾನ್ ಹಬ್ಬದ ನಿಮತ್ಯೆ ಶಾಂತಿಯ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಹಿರಿಯರು ಕಿರಿಯರಿಗೆ ಹಬ್ಬದ ಮತ್ತು ಬಣ್ಣದಾಟದ ಕುರಿತು ತಿಳಿವಳಿಕೆ ನೀಡಬೇಕು. ಪೊಲೀಸ್ ಇಲಾಖೆಯಿಂದಲೂ ಪ್ರಚಾರ ಮಾಡಿ ಜಾಗೃತಿ ಮೂಡಿಸಲಾಗುತ್ತದೆ ಸಭೆಯಲ್ಲಿ ಸಂಘಟನೆಗಳ ಪ್ರತಿನಿಧಿಗಳು ನೀಡಿರುವ ಸಲಹೆಗಳನ್ನು ಸ್ವೀಕರಿಸಿ ಹೋಳಿ ಶಾಂತಿಯುತವಾಗಿ ನಡೆಯಲು ಅಗತ್ಯ ಕ್ರಮ ಕೈಕೊಳ್ಳಲಾಗುತ್ತದೆ. ಅನಪೇಕ್ಷಿತ ಚಟುವಟಿಕೆಗಳು ಕಂಡುಬಂದಲ್ಲಿ ನಿಯಂತ್ರಿಸಲಾಗುತ್ತದೆ, ದಾರ್ಮಿಕ ಆಚರಣೆಗಳು ಸೌಹಾರ್ದಯುತವಾಗಿರಬೇಕು. ಪೊಲೀಸ್ ಇಲಾಖೆ ಜನರ ಜೊತೆಗಿದೆ. ಯಾರಿಗೂ ತೊಂದರೆ ಕೊಡುವ ಉದ್ದೇಶ ಪೊಲೀಸರದ್ದಲ್ಲ ಎಂದರು. 24ರಂದು ರಾತ್ರಿ ಕಾಮದಹನ, ಮತ್ತು ಕಡೆಯ ಪಂಚಮಿ ದಿನ ಬಣ್ಣ ಆಡಲು ಊರಿನ ಹಿರಿಯರು ತೀರ್ಮಾನಿಸಿ ತಿಳಿಸುತ್ತಾರೆ.
ಇನ್ನೂ ಇದೆ ಸಂದರ್ಭದಲ್ಲಿ ಭೀಮಾಶಂಕರ ಸಕ್ಕರೆ ಕಾರ್ಖಾನೆ ನಿರ್ದೇಶಕ ಜಟ್ಟಪ್ಪ ರವಳಿ, ಅನೀಲಗೌಡ ಬಿರಾದಾರ, ಬುದ್ದುಗೌಟ ಪಾಟೀಲ, ರೈಸ್ ಅಷ್ಟೇಕರ, ಅಯೂಬ್ ನಾಟೀಕಾರ ಮಾತಾನಾಡಿದ ಅವರು, ಹಬ್ಬದಲ್ಲಿ ಶಾಂತಿ ಭಂಗವಾಗಿಲ್ಲ. ನಾವೆಲ್ಲರೂ ಸೌಹಾರ್ದವಾಗಿದ್ದೇವೆ. ಎಲ್ಲರೂ ಸೇರಿ ಬಣ್ಣದ ಹಬ್ಬ ಆಡುತ್ತೇವೆ. ಇದು ಹಿಂದೂ-ಮುಸ್ಲಿಮರ ಹಬ್ಬ, ಎಲ್ಲರೂ ಪರಸ್ಪರ ಸಹಕರಿಸುತ್ತೇವೆ. ಇದು ಪರಸ್ಪರ ಬಾಂಧವ್ಯ ಬೆಸೆಯುವ ಹಬ್ಬ. ನಮ್ಮಲ್ಲಿನ ಕಲ್ಮಶ ಸುಟ್ಟು ಹೊಸ ಜೀವನ ಆರಂಭಿಸುವ ಹಬ್ಬ, ಪೊಲೀಸ್ ಇಲಾಖೆಯಿಂದ ಕಿಡಿಗೇಡಿಗಳನ್ನು ಗುರ್ತಿಸಿ ಎಚ್ಚರಿಕೆ ನೀಡಬೇಕು.
ಸಿಪಿಐ ರತನಕುಮಾರ ಜಿರಗ್ಯಾಳ ಮಾತಾನಾಡಿದ ಅವರು, ನೀತಿ ಸಂಹಿತೆ ಜಾರಿಯಲ್ಲಿದೆ ಹಾಗಾಗಿ ಯಾರು ಸರಕಾರದ ನಿಯಮಾನುಸಾರ ಮರೆಯಬಾರದು. ಪ್ಲೆಕ್ಸ, ಕಟೌಟ ಹಾಗೂ ಬ್ಯಾನರ್ ಇತರೆ ತಾವು ಉಪಯೋಗಿಸಿ – ಬೇಕಾದರೆ, ಸಂಬಂಧಿಸಿದ ಇಲಾಖೆಯ ಪರವಾನಗಿ ಪಡೆಯಬೇಕು. ಅದಲ್ಲದೇ ಮಾರ್ಚ್ 25ರಂದು ಎಸ್ಸೆಸ್ಸೆಲ್ಸಿ ಪರೀಕ್ಷೆ ಪ್ರಾರಂಭಗೊಳ್ಳುತ್ತದೆ. ಪಟ್ಟಣ. ಗ್ರಾಮೀಣ ಭಾಗದಿಂದ ಪರೀಕ್ಷಾ ಕೇಂದ್ರಗಳಿಗೆ ಬರುವ ವಿದ್ಯಾರ್ಥಿ, ಪಾಲಕರಿಗೆ ಬಣ್ಣ ಹಚ್ಚುವ ನೆಪದಲ್ಲಿ ತೊಂದರೆ ಕೊಡಬಾರದು. ರಸ್ತೆಗೆ ಕಲ್ಲು, ಕಟ್ಟಿಗೆ ಅಡ್ಡಹಾಕಿ ಹಣ ವಸೂಲಿ ಮಾಡಬಾರದು. ತೊಂದರೆ ಕೊಡುವುದು ಕಂಡುಬಂದಲ್ಲಿ ಕಠಿಣ ಕಾನೂನು ಕ್ರಮ ಕೈಕೊಳ್ಳಬೇಕಾಗುತ್ತದೆ.
ಈ ಸಂದರ್ಭದಲ್ಲಿ ಪುರಸಭೆ ಮಾಜಿ ಅಧ್ಯಕ್ಷ ಹಾಲಿ ಸದಸ್ಯ ದೇವೆಂದ್ರ ಕುಂಬಾರ, ಯಮುನಾಜಿ ಸಾಳಂಕೆ, ಬ್ಲಾಕ್ ಅಧ್ಯಕ್ಷ ಜಾವೀದ ಮೋಮಿನ್, ಸತ್ತಾರ ಬಾಗವಾನ, ತಳವಾರ ಪರಿವಾರ ಸಮಾಜದ ಧರ್ಮರಾಜ ವಾಲಿಕಾರ, ಭೀಮಾಶಂಕರ ಮೂರಮನ, ಎ ಆರ್ ಬಾಗವಾನ, ಹುಚ್ಚಪ್ಪ ತಳವಾರ, ಜಬ್ಬಾರ ಅರಬ, ಭೀಮು ಗುಡ್ಲ , ಸತೀಶ್ ಕುಂಬಾರ, ದತ್ತಾ ಬಂಡೆನವರ,