ಇಂಡಿ – ಬೆಂಗಳೂರ ಬಸ್ಸಿಗೆ ಶಾಸಕರಿಂದ ಚಾಲನೆ
ಇಂಡಿ : ಇಂಡಿಯಿಂದ ಬೆಂಗಳೂರಿಗೆ ಹೋಗುವ ರಾಜ್ಯ
ಕರ್ನಾಟಕ ಸಾರಿಗೆ ಸ್ಲೀಪರ್ ಕೋಚ್ ಬಸ್ಸಿಗೆ ಶಾಸಕ
ಯಶವಂತರಾಯಗೌಡ ಪಾಟೀಲರು ಉದ್ಘಾಟಿಸಿದರು.
ಜಟ್ಟೆಪ್ಪ ರವಳಿ ಮಾತನಾಡಿ ಇಂಡಿಯಿಂದ ಬೆಂಗಳೂರಿಗೆ
ಈ ಮೊದಲು ಸ್ಲೀಪರ್ ಕೋಚ್ ಬಸ್ಸು ಇರಲಿಲ್ಲ. ಇಂದಿನಿಂದ ಪ್ರಾರಂಭವಾಗಿದ್ದು ಸಾರ್ವಜನಿಕರಿಗೆ ಬೆಂಗಳೂರಿಗೆ ಹೋಗಲು ಅನುಕೂಲವಾಗುತ್ತದೆ ಎಂದರು.
ಬಸ್ಸು ಇಂಡಿ ಸಂಜೆ 6.15 ಗಂಟೆಗೆ ಬಿಟ್ಟು ಮರುದಿನ
ಬೆಳಗ್ಗೆ 6.30 ಕ್ಕೆ ಬೆಂಗಳೂರ ತಲುಪುತ್ತದೆ. ಅದರಂತೆ ಬೆಂಗಳೂರು ರಾತ್ರಿ 8 ಗಂಟೆಗೆ ಬಿಟ್ಟು ಮರುದಿನ ಇಂಡಿ ಬೆಳಗ್ಗೆ 8.15 ಕ್ಕೆ ತಲುಪುತ್ತದೆ. ಸೋಮವಾರದಿಂದ ಶನಿವಾರದ ವರೆಗೆ ಬಸ್ಸ ದರ ರೂ 900 ಮತ್ತು ಭಾನುವಾರ ರೂ 1000 ಇರುತ್ತದೆ. ಕಾರ್ಯಕ್ರಮದಲ್ಲಿ ಕಂದಾಯ ಉಪವಿಬಾಗಾಧಿಕಾರಿ ಅಬೀದ್ ಗದ್ಯಾಳ,ಸಾರಿಗೆ ಘಟಕ ವ್ಯವಸ್ಥಾಪಕ ಎಸ್.ಬಿ. ಬಿರಾದಾರ, ಸಾರಿಗೆ ಇಲಾಖೆಯ ವಿಠ್ಠಲ
ನಡುವಿನಮನಿ, ಅರವಿಂದ ಪರಡಿ, ಎಸ್.ಜಿ.ಪಟ್ಟಣಶೆಟ್ಟಿ,
ಜಟ್ಟೆಪ್ಪ ರವಳಿ, ಎಂ.ಆರ್.ಪಾಟೀಲ,ಪ್ರಶಾಂತ ಕಾಳೆ,
ಜಾವೇದ ಮೋಮಿನ್, ಇಲಿಯಾಸ ಬೋರಾಮಣಿ, ಸತೀಶ ಕುಂಬಾರ, ಸಂಜೀವ ಚವ್ಹಾಣ ಮತ್ತಿತರಿದ್ದರು.
ಇಂಡಿ ಬೆಂಗಳೂರ ಬಸ್ಸಿಗೆ ಶಾಸಕ
ಯಶವಂತರಾಯಗೌಡ ಪಾಟೀಲ ಚಾಲನೆ ನೀಡಿದರು.