ಗಡಿ ಪ್ರದೇಶದಲ್ಲಿ ಚಿಕಿತ್ಸೆಗಾಗಿ ಪರದಾಡುತ್ತಿರುವ ಸಾರ್ವಜನಿಕರು
ಹನೂರು : ದಿನದ 24 ಗಂಟೆಯೂ ಸಾರ್ವಜನಿಕ ಸೇವೆಗೆ ಸಿಗಬೇಕಾದ ಆಸ್ಪತ್ರೆಯ ಪರಿಸ್ಥಿತಿ ಶೋಚನಿಯವಾಗಿದೆ.
ರಾತ್ರಿ ವೇಳೆ ಬಾಗಿಲು ಮುಚ್ಚಿದ ಪರಿಣಾಮದಿಂದ ಹೊಟ್ಟೆ ನೋವಿನಿಂದ ನರಳಿ ಚಿಕಿತ್ಸೆ ಸಿಗದೇ ಪರದಾಡಿದ ಘಟನೆ ತಾಲೂಕಿನ ಕೂಡ್ಲೂರು ಸರ್ಕಾರಿ ಆಸ್ಪತ್ರೆಯಲ್ಲಿ ಭಾನುವಾರ ರಾತ್ರಿ ಜರುಗಿದೆ. ಕೂಡ್ಲೂರು ಗ್ರಾಮದ ಅಣ್ಣಮಲೈ ಎಂಬ ನಿವಾಸಿ ಹೊಟ್ಟೆ ನೋವಿನಿಂದ ಕೂಡ್ಲೂರು ಸರ್ಕಾರಿ ಆಸ್ಪತ್ರೆಗೆ ಚಿಕಿತ್ಸೆ ಪಡೆಯಲು ಬಂದಾಗ ರಾತ್ರಿ ಬಾಗಿಲು ಮುಚ್ಚಿದ ಪರಿಣಾಮ ಚಿಕಿತ್ಸೆ ಸಿಗದೇ ತುರ್ತು ವಾಹನವು ಇಲ್ಲದೆ ಫೋನಿನ ನೆಟ್ವರ್ಕ್ ಸಮಸ್ಯೆಯಿಂದ ಚಿಕಿತ್ಸೆ ಸಿಗದೇ ಪರದಾಡಿದ್ದಾನೆ.
ಈ ಬಗ್ಗೆ ರೈತ ಮುಖಂಡ ವೆಂಕಟೇಶ್ ಮಾತನಾಡಿ, ಗಡಿಗ್ರಾಮ ಕೂಡೂರು ಪ್ರಾಥಮಿಕ ಆರೋಗ್ಯ ಕೇಂದ್ರ ಸಂಜೆ 5ಕ್ಕೆ ಬಾಗಿಲು ಮುಚ್ಚಿದರೆ ಮರುದಿನ ಬೆಳಗ್ಗೆ 10 ಗಂಟೆಗೆ ಮಾತ್ರ ಬರುತ್ತಾರೆ. ಇಲ್ಲಿ ವೈದ್ಯಾಧಿಕಾರಿಗಳು ಇಲ್ಲ, ಆರೋಗ್ಯ ಸಿಬ್ಬಂದಿ ಸಹ ಇಲ್ಲದೆ ಬಾಗಿಲು ಮುಚ್ಚುತ್ತಿದ್ದು ರಾತ್ರಿ ವೇಳೆ ಈ ಭಾಗದಲ್ಲಿ ಕಾಡುಪ್ರಾಣಿಗಳ
ಹಾವಳಿಯಿಂದ ಇಲ್ಲಿನ ಗ್ರಾಮಸ್ಥರು ತುರ್ತು ಸಂದರ್ಭದಲ್ಲಿ ಪರದಾಡುವಂತ ಪರಿಸ್ಥಿತಿ ಉಂಟಾಗಿದೆ.
ಈ ಕೂಡಲೇ ಸಂಬಂಧಪಟ್ಟ ಹಿರಿಯ ಆರೋಗ್ಯ ಅಧಿಕಾರಿಗಳು ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ವೈದ್ಯಾಧಿಕಾರಿ ಮತ್ತು ಸಿಬ್ಬಂದಿಯನ್ನು ನೇಮಕ ಮಾಡುವ ಮೂಲಕ ಗಡಿ ಗ್ರಾಮದ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಬರುವ ರೋಗಿಗಳಿಗೆ ಸಕಾಲಕ್ಕೆ ಚಿಕಿತ್ಸೆ ಸಿಗುವಂತೆ ಮಾಡಬೇಕು ಎಂದು ಒತ್ತಾಯಿಸಿದ್ದಾರೆ.
ವರದಿ : ಚೇತನ ಕುಮಾರ್ ಎಲ್, ಹನೂರು ತಾಲ್ಲೂಕು, ಚಾಮರಾಜನಗರ ಜಿಲ್ಲೆ.