ಬೀಕರ್ ರಸ್ತೆ ಅಪಘಾತ, ಐದು ಜನ ದುರ್ಮಣ..!
Voice of Janata News
ಬಳ್ಳಾರಿ: ನಗರದ ಬಸವನ ಕುಂಟೆಯ ಏಳು ಜನ ಹೈದರಾಬಾದ್‌ಗೆ ಪ್ರಯಾಣ ಮಾಡುವ ವೇಳೆ ರಸ್ತೆ ಅಪಘಾತವಾಗಿದ್ದು, ಐದು ಜನ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ತೀವ್ರವಾಗಿ ಗಾಯಗೊಂಡ ಇಬ್ಬರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಮೂಲತಃ ದೇವಿನಗರದ ಬಸವನ ಕುಂಟೆ
ನಿವಾಸಿಗಳಾದ ಅಬ್ದುಲ್ ರೆಹಮಾನ್ ಅವರ ಕುಟುಂಬ ಸದಸ್ಯರ ಬಳ್ಳಾರಿಯಿಂದ ಹೈದರಾಬಾದ್ ಕಡೆಗೆ ಹೋಗುತ್ತಿದ್ದಾಗ ಮೆಹಬೂಬ್ ನಗರ್ ಜಿಲ್ಲೆಯ ಕೊತಕೋಟ ಬೈಪಾಸ್‌ನ ತೆಕ್ಕಲಯ್ಯ ದರ್ಗಾ ಬಳಿ ರಾಷ್ಟ್ರೀಯ ಹೆದ್ದಾರಿ 44 ರಲ್ಲಿ ಭೀಕರ ರಸ್ತೆ ಅಪಘಾತವಾಗಿದೆ. ರೆಹಮಾನ್ ಅವರ ಹರಿಟಿಗಾ ಕಾರು ನಿಯಂತ್ರಣ ತಪ್ಪಿ ಮರಕ್ಕೆ ಡಿಕ್ಕಿ ಹೊಡೆದ ಪರಿಣಾಮವಾಗಿ ನಾಲ್ವರು ಸ್ಥಳದಲ್ಲೇಸಾವನ್ನಪ್ಪಿದ್ದಾರೆ ಮತ್ತೊಂದು ಮಗು ಆಸ್ಪತ್ರೆಗೆ ಸಾಗಿಸುವ ವೇಳೆ ಸಾವನ್ನಪ್ಪಿದೆ. ಇಬ್ಬರಿಗೂ ಗಂಭೀರವಾಗಿ ಗಾಯಗೊಂಡಿದ್ದು, ಗಾಯಾಳುಗಳನ್ನು ಮೆಹಬೂಬ್ ನಗರ್ ಜಿಲ್ಲೆಗೆ ಸ್ಥಳಾಂತರಿಸಲಾಗಿದೆ. ಮೂವರ స్థితి ಗಂಭೀರವಾಗಿದೆ.
ಒಟ್ಟು ಐದು ಜನ ಮೃತರಲ್ಲಿ ಇಬ್ಬರು ವಯಸ್ಕರು ಮತ್ತು ಮೂವರು ಮಕ್ಕಳು ಸೇರಿದ್ದಾರೆ. ಅಪಘಾತಕ್ಕೆ ಅತಿಯಾದ ವೇಗ ಕಾರಣ ಜಾವಾರಾಯ ತನ್ನ ಅಟ್ಟಹಾಸವನ್ನು ತೋರಿಸಿದ್ದಾನೆ. ಗಾಯಗೊಂಡ ಶಫಿ, ಅಸ್ಸಾ ನ್, ಖದೀರ್, ಅಲಿ, ಅಬೀಬ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮೃತರ ವಿವರಗಳಾದ (1) ವಾಸಿ (02), ಮಾರಿಯಾ, ಫಾತಿಮಾ (50), ಅಬ್ದುಲ್ ರಹಮಾನ್ (30) ಸಾವನ್ನಪ್ಪಿದ್ದಾರೆ.