ರಾಯಚೂರು : ಸ್ಟಾರ್ ಮೇಕರ್,ಬೆಸ್ಟ್ ಸ್ಟಾರ್ ಸಿಂಗರ ಫ್ಯಾಮಿಲಿ ಉದ್ಘಾಟನೆ, ಸ್ಟಾರ್ ಸಿಂಗರ ಗ್ರೂಪ್ ಕರ್ನಾಟಕ ವತಿಯಿಂದ ಗಾನ ಸಂಭ್ರಮ ಸಂಗೀತ ರಸಮಂಜರಿ ಕಾರ್ಯಕ್ರಮವನ್ನು ನಾಳೆ ನಗರದ ರಂಗಮಂದಿರದಲ್ಲಿ ಆಯೋಜಿಸಲಾಗಿದೆ.
ನಗರದ ಪತ್ರಿಕಾ ಭವನದಲ್ಲಿ ಮಾಧ್ಯಮ ಗೋಷ್ಟಿ ಮಾಡುವ ಮೂಲಕ ಗಾನ ಸಂಭ್ರಮ ಸಂಗೀತ ರಸಮಂಜರಿ ಪಂಡಿತ್ ಜಂಬಲದಿನ್ನಿ ರಂಗಮಂದಿರದಲ್ಲಿ ಆಯೋಜಿಸಲಾಗಿದೆ ಎಂದು ಟಿ ರಾಮಯ್ಯ ನಾಯಕ್ ತಿಳಿಸಿದರು. ನಮ್ಮ ರಾಜ್ಯದ ಸಾಂಸ್ಕೃತಿಕ ಹಾಗೂ ಸಂಗೀತ ಕ್ಷೇತ್ರದ ಬದುಕನ್ನು ಇನ್ನಷ್ಟು ಎತ್ತರಕ್ಕೆ ಬೆಳೆಸುವ ಉದ್ದೇಶದಿಂದ ಕರ್ನಾಟಕ ರಾಜ್ಯದ ಎಲ್ಲಾ ಜಿಲ್ಲೆಯ ಗಾಯಕರಿಂದ ರಚಿಸಿದ ಸ್ಟಾರ್ ಮೇಕರ್ ಸಹಾಯದೊಂದಿಗೆ ಸ್ಟಾರ್ ಸಿಂಗರ ಗ್ರೂಪನ್ನು ಕರ್ನಾಟಕದಲ್ಲಿ ಪ್ರಾರಂಭ ಮಾಡಲಾಗಿದೆ. ಪ್ರತಿ ತಿಂಗಳು ಕೊಡುವ ರಾಜ್ಯಮಟ್ಟದ ಬೆಸ್ಟ್ ಸ್ಟಾರ್ ಸಿಂಗರ್ ಪ್ರಶಸ್ತಿ ನೀಡಿ ಗೌರವಿಸಲಾಗುತ್ತದೆ. ನಮ್ಮ ನಾಡಿನ ಹೆಮ್ಮೆಯ ಕವಿಗಳ ಭಾವಗೀತೆಗಳನ್ನು ನಾಡಗೀತೆಗಳನ್ನು, ಜಾನಪದಗೀತೆಗಳನ್ನು, ರಂಗ ಗೀತೆಗಳನ್ನು, ಚಲನಚಿತ್ರದ ಗೀತೆಗಳನ್ನು, ಹಾಡಿ ಶೋತೃಗಳಲ್ಲಿ ಕನ್ನಡದ ಕಂಪು, ಇಂದು ಮತ್ತು ಕೆಚ್ಚನ್ನು ಮೂಡಿಸಲು ಸ್ಟಾರ್ ಸಿಂಗರ ಗ್ರೂಪ್ ಕರ್ನಾಟಕ ಸದಾ ಸಿದ್ಧವಾಗಿದೆ. ಮತ್ತು ಹಿಂದಿ ಹಾಡುಗಳನ್ನು ಹಾಡಿ ಪ್ರಸ್ತುತಪಡಿಸಿ, ರಾಜ್ಯದ ಮತ್ತು ದೇಶಾದ್ಯಂತ ಶೋತ್ತುಗಳಿಗೆ ಮನೋರಂಜನೆ ನೀಡಿ ಅವರ ಮೆಚ್ಚುಗೆಗೆ ಮತ್ತು ಪ್ರೋತ್ಸಾಹಕ್ಕೆ ಪಾತ್ರವಾಗಿದೆ ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ಕೆ. ಕರಿಯಪ್ಪ ಮಾಸ್ತರ್, ಟಿ. ರಾಮಯ್ಯ ನಾಯಕ ವಕೀಲರು, ಆ ತಿಮ್ಮಯ್ಯಸುರೇಶ ಹೇಮಕೋಟೆ, ನರೇಂದ್ರ, ಉಪಸ್ಥಿತರಿದ್ದರು.