ಬಳ್ಳೊಳ್ಳಿ ಗ್ರಾಮಸ್ಥರು ಸಹ ಸಾಕಷ್ಟು ಬುದ್ಧಿವಂತರು..ಏಕೆ ಗೊತ್ತಾ..?
ಇಂಡಿ: ಬಳ್ಳೊಳ್ಳಿ ಗ್ರಾಮದ ಜನರ ಅನುಕೂಲಕ್ಕಾಗಿ
ತಮ್ಮ ಭೂಮಿಯನ್ನು ದಾನಮಾಡಿ ಮಂಗಲಕಾರ್ಯ ನಿರ್ಮಿಸಲು ಸಹಕರಿಸಿದ ಪಟ್ಟಣಶೆಟ್ಟಿ ಕುಟುಂಬಸ್ಥರ ಕಾರ್ಯ ಶ್ಲಾಘನೀಯ ಎಂದು ಕತಕನಹಳ್ಳಿ, ಬಬಲಾದ ಮಠದ ಶಿವಯ್ಯ ಮಹಾಸ್ವಾಮಿಗಳು ಹೇಳಿದರು.
ಅವರು ಸೋಮವಾರ ಇಂಡಿ ತಾಲೂಕಿನ ಬಳ್ಳೊಳ್ಳಿ
ಗ್ರಾಮದ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿ ವೀರಭದ್ರೇಶ್ವರ ದೇವಸ್ಥಾನ ಸೇವಾ ಸಮಿತಿಯವರ “ಮಲ್ಲಪ್ಪ ಅಪ್ಪಣ್ಣ ಪಟ್ಟಣಶೆಟ್ಟಿ” ಮಂಗಲ ಕಾರ್ಯಾಲಯದ ಭೂಮಿ ಪೂಜಾ ಹಾಗೂ ಶಿಲಾನ್ಯಾಸ ಕಾರ್ಯಕ್ರಮದ ಪಾವನ ಸಾನಿಧ್ಯವಹಿಸಿ ಆಶೀರ್ವಚನ ನೀಡಿದರು.
ಬಳ್ಳೊಳ್ಳಿ ಗ್ರಾಮದ ಜನರು ಆಯುರ್ವೇದದಲ್ಲಿ ಬೆಳ್ಳುಳ್ಳಿ ಹೇಗೆ ಉಪಯುಕ್ತವಾದ ಪದಾರ್ಥವೋ, ಬಳ್ಳೊಳ್ಳಿ ಸೇವನೆಯಿಂದ ಸಾಕಷ್ಟು ರೋಗರುಜಿನಗಳು ದೂರವಾಗುತ್ತವೆಯೋ ಹಾಗೆ ಬಳ್ಳೊಳ್ಳಿ ಗ್ರಾಮಸ್ಥರು ಸಹ ಸಾಕಷ್ಟು ಬುದ್ಧಿವಂತರು, ಪ್ರಾಮಾಣಿಕರು ಹಾಗೂ
ದಾನಿಗಳಾಗಿದ್ದಾರೆ. ಗ್ರಾಮದ ಎಲ್ಲ ಜನರು ಸೇರಿಕೊಂಡು ತಮ್ಮ ಕೈಲಾದಷ್ಟು ಸಹಾಯ ಮಾಡಿ ಈ ಮಂಗಲ ಕಾರ್ಯಾಲಯ ನಿರ್ಮಿಸಿದ್ದೆ ಆದಲ್ಲಿ ಇಲ್ಲಿ ವಿವಾಹವಾಗುವ ದಂಪತಿಗಳ ಜೀವನ ನೂರಾರು ಕಾಲ
ಸುಖವಾಗಿ ನಡೆಯಲಿದೆ ಎಂದು ಆಶೀರ್ವದಿಸಿದರು.
ಕೋಟ್ಯಂತರ ರೂಪಾಯಿ ಬೆಲೆಬಾಳುವ ಜಮೀನನ್ನು
ದಾನವಾಗಿ ನೀಡಿದ ಈರಣ್ಣ ಪಟ್ಟಣಶೆಟ್ಟಿ ಅವರಿಗೆ ಭಗವಂತ ಒಳಿತು ಕರುಣಿಸಲಿ ಎಂದು ಆಶೀರ್ವದಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆವಹಿಸಿದ್ದ ಇಂಡಿ ಶಾಸಕ
ಯಶವಂತರಾಯಗೌಡ ಪಾಟೀಲ ಮಾತನಾಡಿ,
ಬಳ್ಳೊಳ್ಳಿ ಗ್ರಾಮದಲ್ಲಿ ಮಂಗಲ ಕಾರ್ಯಾಲಯ
ನಿರ್ಮಾಣವಾಗುತ್ತಿರುವುದು ಸಂತಸ ತಂದಿದೆ.
ಮಂಗಲಕಾರ್ಯಾಲಯದ ಭೂಮಿ ಪೂಜೆ ಮಾಡಲು
ಕತಕನಳ್ಳಿಯ ಶಿವಯ್ಯ ಮಹಾಸ್ವಾಮಿಗಳು ಬಂದಿರುವುದು ನಿಜಕ್ಕೂ ಈ ಮಂಗಲ ಕಾರ್ಯಾಲಯ
ಅತಿ ವೇಗವಾಗಿ ನಿರ್ಮಾಣವಾಗಲಿದೆ. ಪೂಜ್ಯರ
ದರ್ಶನಾಶೀರ್ವಾದ ಪಡೆದ ಈ ಗ್ರಾಮದ
ಗ್ರಾಮಸ್ಥರು ಧನ್ಯರು ಎಂದರು.
ವಿಧಾನ ಪರಿಷತ್ ಸದಸ್ಯ ಸುನಿಲ್‍ಗೌಡ ಬಿರಾದಾರ್
ಮಂಗಳಕಾರ್ಯ ನಿರ್ಮಾಣಕ್ಕೆ 5 ಲಕ್ಷ ರೂಪಾಯಿ
ದೇಣಿಗೆ ಘೋಷಿಸಿದರು. ಮಾಜಿ ಸಚಿವ ಅಪ್ಪಾಸಾಹೇಬ ಪಟ್ಟಣಶೆಟ್ಟಿ ಮಾತನಾಡಿ, ಬಳ್ಳೊಳ್ಳಿ ಗ್ರಾಮದ ಬಹುಜನರ ಬಹು ವರ್ಷಗಳ ಕನಸಾಗಿದ್ದ ಮಂಗಲ ಕಾರ್ಯಾಲಯ ನಿರ್ಮಾಣಕ್ಕೆ ಈಗ ಕಾಲ ಕೂಡಿಬಂದಿದ್ದು, ಬಳ್ಳೊಳ್ಳಿ ಜನರು ಮದುವೆ ಮಾಡಿಕೊಳ್ಳಲು ಜೇವೂರ ಅಥವಾ ಹೊರ್ತಿ ಗ್ರಾಮಕ್ಕೆ ಹೋಗಬೇಕಾಗಿತ್ತು. ಗ್ರಾಮಸ್ಥರ
ಸಹಕಾರದಿಂದ ಶೀಘ್ರವೇ ಈ ಮಂಗಲ ಕಾರ್ಯಾಲಯ ಲೋಕಾರ್ಪಣೆಗೊಂಡು ಗ್ರಾಮದ ಜನರ ಶುಭ ಸಮಾರಂಭಗಳಿಗೆ ಸಾಕ್ಷಿ ಆಗಲಿದೆ ಎಂದರು.
ವೇದಿಕೆಯಲ್ಲಿ ಬೀರಲಿಂಗೇಶ್ವರ, ಜಟ್ಟಿಂಗೇಶ್ವರ
ಹಾಗೂ ವೀರಭದ್ರೇಶ್ವರ ದೇವಾಲಯಗಳ ಪೂಜಾರಿಗಳು ಉಪಸ್ಥಿತರಿದ್ದರು. ಭೂದಾನ ಮಾಡಿದ ಈರಣ್ಣ ಪಟ್ಟಣಶೆಟ್ಟಿ ಅವರಿಗೆ ಶ್ರೀಗಳು ಸತ್ಕರಿಸಿ ಗೌರವಿಸಿದರು.
ಕಾರ್ಯಕ್ರಮದಲ್ಲಿ ಜೆಡಿಎಸ್ ತಾಲೂಕಾಧ್ಯಕ್ಷ ಬಿ.ಡಿ.
ಪಾಟೀಲ, ರಾಘವೇಂದ್ರ ಕಾಪಸೆ ಸೇರಿದಂತೆ ಬಳ್ಳೊಳ್ಳಿ
ಗ್ರಾಮದ ಹಿರಿಯರು, ಮಕ್ಕಳು ಭಾಗವಹಿಸಿದ್ದರು.
ಇಂಡಿ: ಮಂಗಲ ಕಾರ್ಯಾಲಯದ ಭೂಮಿ ಪೂಜಾ
ಹಾಗೂ ಶಿಲಾನ್ಯಾಸ ಕಾರ್ಯಕ್ರಮದ ಪಾವನ
ಸಾನಿಧ್ಯವಹಿಸಿ ಕತಕನಹಳ್ಳಿ, ಬಬಲಾದ ಮಠದ
ಶಿವಯ್ಯ ಮಹಾಸ್ವಾಮಿಗಳು ಆಶೀರ್ವಚನ ನೀಡಿದರು.