ರೂಗಿ ಸಂತೆ ಕಟ್ಟೆ ರಾಜ್ಯಕ್ಕೆ ಪ್ರಥಮ
ಇಂಡಿ : ತಾಲೂಕಿನ ರೂಗಿ ಗ್ರಾ.ಪಂ ಗ್ರಾಮೀಣ ಸಂತೆ ಕಟ್ಟೆ ರಾಜ್ಯದ ಅತ್ಯುತ್ತಮ ಗ್ರಾ.ಪಂ ಸಂತೆ ಕಟ್ಟೆ ಎಂದು
ರಾಜ್ಯಕ್ಕೆ ಪ್ರಥಮ ಬಹುಮಾನ ಪಡೆದಿದೆ. ಮಾರ್ಚ 1 ರಂದು ಬೆಂಗಳೂರಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಸರಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ ಈ ಪ್ರಶಸ್ತಿ ನೀಡಿ ಗೌರವಿಸಿದ್ದಾರೆ.
ರೂಗಿ ಗ್ರಾ.ಪಂ ಉಪಾಧ್ಯಕ್ಷೆ ಅಂಬವ್ವ ಚನ್ನಪ್ಪ ಕೊಟಗೊಂಡ ಇವರು ಪ್ರಶಸ್ತಿ ಪತ್ರ ಮತ್ತು ಸನ್ಮಾನ ಸ್ವೀಕರಿಸಿದರು.2022 – 23 ನೆಯ ಸಾಲಿನಲ್ಲಿ ರೂಗಿ ಗ್ರಾ.ಪಂ ವತಿಯಿಂದ ಗ್ರಾಮೀಣ ಸಂತೆ ಕಟ್ಟೆಯು ಮಹಾತ್ಮಗಾಂಧಿ ನರೇಗಾ ಯೋಜನೆಯಡಿ ರೂ 25 ಲಕ್ಷ ಮತ್ತು ನಬಾರ್ಡ ವತಿಯಿಂದ 15 ಲಕ್ಷ ರೂ ಅಂದಾಜು 40 ಲಕ್ಷ ರೂ ವೆಚ್ಚದಲ್ಲಿ 11 ಗುಂಟೆ ಜಾಗದಲ್ಲಿ
ಓಗ್ಗುಡಿಸುವಿಕೆ ಮುಖಾಂತರ ಅನುಷ್ಠಾನ ಗೊಳಿಸಲಾಗಿದೆ. ಗ್ರಾಮೀಣ ಸಂತೆ ಕಟ್ಟೆಯಲ್ಲಿ ಕುಡಿಯುವ ನೀರಿನ ವ್ಯವಸ್ಥೆ, ಸುಸಜ್ಜಿತ ಶೌಚಾಲಯ ವ್ಯವಸ್ಥೆ ಮತ್ತು ಸಂಗ್ರಹಣಾ ಕೊಠಡಿ ಹೊಂದಿದೆ. ರೈತರಿಗೆ
ಕುಳಿತು ಕೊಳ್ಳಲು ಒಟ್ಟು 36 ಅಂಗಡಿಗಳನ್ನು ನಿರ್ಮಿಸಿದ್ದು ಸಣ್ಣ ಸ್ಥಳೀಯ ರೈತರು ಬೆಳೆದ
ತರಕಾರಿಗಳನ್ನು ಕುಳಿತು ಮಾರಾಟ ಮಾಡಲು
ವಿಶಾಲವಾದ ಮೈದಾನ ಹೊಂದಿದೆ. ಸರಕಾರದ ಆಶಯದಂತೆ ಮಹಿಳೆಯರ ಸಬಲೀಕರಣಕ್ಕೆ ಒತ್ತು ನೀಡಿ ಸಂತೆ ಕಟ್ಟೆ ನಿರ್ವಹಣೆ ಜವಾಬ್ದಾರಿಯನ್ನು ಗ್ರಾ.ಪಂ ಮಟ್ಟದ ಮಹಿಳಾ ಒಕ್ಕೂಟಕ್ಕೆ ವಹಿಸಲಾಗಿತ್ತು. ಇದರಿಂದ ಗ್ರಾ.ಪಂ ಗೆ ಆದಾಯ ಬರುವದರ ಜೊತೆಗೆ ಮಹಿಳೆಯರಿಗೆ ಉದ್ಯೋಗ ಒದಗಿಸಲಾದ ಹಿನ್ನೆಲೆ ಇವೆಲ್ಲವನ್ನು ಪರಿಗಣಿಸಿ ಸಂತೆ ಕಟ್ಟೆಗೆ ಅತ್ಯುತ್ತಮ ಸಂತೆ
ಕಟ್ಟೆ ಎಂದು ಪ್ರಶಸ್ತಿ ನೀಡಿದ್ದಾರೆ.
ಇಂಡಿ ತಾಲೂಕಿನ ರೂಗಿ ಗ್ರಾ.ಪಂ ಸಂತೆ ಕಟ್ಟೆ ರಾಜ್ಯದ ಅತ್ಯುತ್ತಮ ಸಂತೆ ಕಟ್ಟೆ ಪ್ರಶಸ್ತಿ ಉಪಾಧ್ಯಕ್ಷೆ
ಅಂಬವ್ವ ಕೊಟಗೊಂಡ ಸ್ವೀಕರಿಸಿದರು.