ವಿಜಯಪುರ: ಭೀಮಾತೀರದಲ್ಲಿ ಖತರ್ನಾಕ್ ಕಳ್ಳರ ಗ್ಯಾಂಗ್‌ನ್ನು ಪೊಲೀಸರು ಬಂಧಿಸಿರುವ ಘಟನೆ ವಿಜಯಪುರ ಜಿಲ್ಲೆಯ ಇಂಡಿ ತಾಲ್ಲೂಕಿನ ಅರ್ಜನಾಳನಲ್ಲಿ ನಡೆದಿದೆ.
ಇಮ್ರಾನ ಸುಭಾಸ ಪಟೇಲ್, ಅರುಣಕುಮಾರ ಲಾಲಸಿಂಗ್ ರಾಠೋಡ, ಸೂರಜ ವಿಠ್ಠಲ ಗಾಯಕವಾಡ, ಕರ್ಣ ಶರತ ಪವಾರ, ಸ್ವಪ್ನೀಲ ಶಿವಾಜಿ ಲಕಡೆ ಬಂಧಿತ ಆರೋಪಿಗಳು. ಮೂಲತಃ ಕನಾ೯ಟಕದವರಾಗಿದ್ದು, ಇತ್ತೀಚಿನ ಕೆಲವು ವರ್ಷಗಳಿಂದ ಮಹಾರಾಷ್ಟ್ರದ ಸಾತಾರ ಜಿಲ್ಲೆಯ ಹಾಲಿ ನಿವಾಸಿಗಳಾಗಿದ್ದಾರೆ. ಇನ್ನು ಬಂಧಿತರಿಂದ ಕಬ್ಬಿಣದ 2 ಲಾಂಗ್, 1 ಕಂಟ್ರಿ ಪಿಸ್ತೂಲ್, ಕಾಗದದಲ್ಲಿ ಖಾರದ ಪುಡಿಗಳು ,10 ಫೂಟ್ ನೂಲಿನ ಹಗ್ಗ,2 ದ್ವೀಚಕ್ರ ವಾಹನಗಳನ್ನು ಪೊಲೀಸರು ಜಪ್ತಿಗೈದಿದ್ದಾರೆ. ಈ ಕುರಿತು ಝಳಕಿ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.