ರಾಯಚೂರು : ಮುಂಬರುವ ಗೋವಾ ರಾಜ್ಯ ವಿಧಾನಸಭಾ ಚುನಾವಣೆಗೆ ಎಐಸಿಸಿಯ ಸಂಯೋಜನಕರನ್ನಾಗಿ ರಾಯಚೂರು ಜಿಲ್ಲೆಯ ಕಾಂಗ್ರೆಸ್ ಯುವ ಮುಖಂಡ ರವಿ ಬೋಸರಾಜ್ ರನ್ನು ನೇಮಿಸಲಾಗಿದೆ.
ಗೋವಾ ವಿಧಾನಸಭೆ ಚುನಾವಣೆಯಲ್ಲಿ ಮುಂಬರುವ ದಿನಗಳಲ್ಲಿ ಎದುರಾಗಲಿದೆ. ಇದಕ್ಕಾಗಿ ಪೂರ್ವ ತಯಾರಿಗಾಗಿ ಸಿದ್ದತೆ ಮಾಡಿಕೊಳ್ಳುತ್ತಿರುವ ಕಾಂಗ್ರೆಸ್, ಎಐಸಿಸಿ ಸಂಯೋಜಕರನ್ನಾಗಿ 8 ಜನರನ್ನ ನೇಮಕ ಮಾಡಲಾಗಿದೆ. 8 ಜನರ ಪೈಕಿ ರಾಯಚೂರು ಜಿಲ್ಲೆಯ ಯುವ ಮುಖಂಡ ರವಿಬೋಸರಾಜ್, ಎಂಎಲ್ ಸಿ ವಿಜಯಸಿಂಗ್ , ತುಫೀಕ್ ಮುಲ್ಲಾನಿ, ನ್ಯಾಯವಾದಿ ಅಲಿ ಮೆಹದಿ, ವಿಶ್ವಾಸ್ ವೈದ್ಯ, ಲೋಕೇಶ್ ವಿ.ನಾಯಕ, ಸದಾನಂದ ಡಂಗಣ್ಣವರ್, ಚಂದ್ರಶೇಖರ ರಾಥೋಡ್ ಯನ್ನು ಶಾಸಕ ಹಾಗೂ ತಮೀಳುನಾಡು, ಪುದುಚೇರಿ, ಗೋವಾ ಉಸ್ತುವಾರಿ ದಿನೇಶ್ ಗುಂಡುರಾವ್ ಆದೇಶ ಮಾಡಿದ್ದಾರೆ.



















