ಭೀಮಾತೀರ : ಬಾವಿಯಲ್ಲಿ ಬಿದ್ದ ವ್ಯಕ್ತಿಯ ರಕ್ಷಣೆ
ಇಂಡಿ : 80 ರಿಂದ 100 ಅಡಿ ಬಾವಿಯಲ್ಲಿ ಬಿದ್ದಿದ್ದ ವ್ಯಕ್ತಿಯ ರಕ್ಷಣೆ ಮಾಡಿದ ಘಟನೆ ವಿಜಯಪುರ ಜಿಲ್ಲೆಯ ಅಖಂಡ ಇಂಡಿ ತಾಲ್ಲೂಕಿನ ಜಿರಂಕಲಗಿ ಗ್ರಾಮದಲ್ಲಿ ನಡೆದಿದೆ. ರೇವಪ್ಪ ವಿ ಏಳಗಿ ಎಂಬ ವ್ಯಕ್ತಿ ಕಾಲು ಜಾರಿ ಬಿದ್ದಿದ್ದನು. ಈ ಸಂದರ್ಭದಲ್ಲಿ ಮಾಹಿತಿ ಆಧರಿಸಿ ಇಂಡಿ ಅಗ್ನಿಶಾಮಕ ದಳದ ಸಿಬ್ಬಂದಿ ಗಳಿಂದ 100 ಅಡಿ ಇರುವ ಸ್ವಂತ ಬಾವಿಯಲ್ಲಿ ಬಿದ್ದ ರೇವಪ್ಪನನ್ನು ರಕ್ಷಣೆ ಮಾಡಿದ್ದಾರೆ. ಚಡಚಣ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ.