ಸಿರವಾರ: ಪಟ್ಟಣದ ೬ ನೇ ವಾರ್ಡಿನಲ್ಲಿ ಬಹಳ ದಿನಗಳಿಂದ ಕಾಡುತ್ತಿದ್ದ ಆಸ್ವಚ್ಛತೆಯು
ಸಮಸ್ಯೆಯನ್ನು ಪಟ್ಟಣ ಪಂಚಾಯಿತಿ ನೂತನ ಸದಸ್ಯ ಹಾಜಿ ಚೌದ್ರಿ ಸ್ವಚ್ಛತೆಗೊಳಿಸಿ ಸಮಸ್ಯೆಯನ್ನು ನಿವಾರಿಸಿದ್ದಾರೆ.
೬ ನೇ ವಾರ್ಡಿನ ರಾಜೀವ್ ನಗರದಲ್ಲಿ ರಸ್ತೆ ಬದಿಗಳು ಸೇರಿದಂತೆ ಅಲ್ಲಲ್ಲಿ ಕಸ ಗುಂಪುಗೂಡಿ ತಿಪ್ಪೆಗಳು ನಿರ್ಮಾಣಗೊಂಡಿದ್ದವು. ಕಸಕಡ್ಡಿಗಳ ರಾಶಿ ಅಸ್ವಚ್ಛತೆಗೆ
ಕಾರಣವಾಗಿತ್ತು. ಇದರಿಂದಾಗಿ ನಿವಾಸಿಗಳು ಸಮಸ್ಯೆ ಎದುರಿಸುವಂತಾಗಿತ್ತು. ವಾರ್ಡಿನ ಸಮಸ್ಯೆಯನ್ನು ಮನಗಂಡ ನೂತನ ಸದಸ್ಯ ಹಾಜಿ ಚೌದ್ರಿ ಸೋಮವಾರ ಸ್ವಚ್ಛತೆ ಮಾಡಿಸಿ ತಮ್ಮ ಜವಬ್ದಾರಿ ಮೆರೆದಿದ್ದಾರೆ. ಪಟ್ಟಣ ಪಂಚಾಯಿತಿಂತು ಸಿಬ್ಬಂದಿ, ಟ್ರ್ಯಾಕ್ಟರ್, ಜೆಸಿಬಿಯನ್ನು ತಂದು ರಸ್ತೆ ಬದಿಗಳಲ್ಲಿ ಶೇಖರಣೆಗೊಂಡ ಕಸದ ರಾಶಿ, ತಿಪ್ಪೆಗಳನ್ನು ತೆಗೆಸಿ ಜನರಿಗೆ ಅನುಕೂಲ ಮಾಡಿಕೊಟ್ಟಿದ್ದಾರೆ.