ಫೆ.25 ರಂದು ಬೆಂಗಳೂರಿಗೆ ತೆರಳಲು ಉಚಿತ ಬಸ್
ಇಂಡಿ: ಇದೇ 25-02-2024 ರಂದು ಬೆಂಗಳೂರಲ್ಲಿ ಸಮಾಜ ಕಲ್ಯಾಣ ಇಲಾಖೆ ವತಿಯಿಂದ ಸಂವಿಧಾನ ಜಾಗೃತ ಸಮಾವೇಶವು ಜರುಗಲಿದ್ದು, ಅದರ ಪ್ರಯುಕ್ತ ಇಂಡಿ ಮತ್ತು ಚಡಚಣ ತಾಲೂಕಿನಿಂದ ಸಾರ್ವಜನಿಕರನ್ನು ಸಮಾವೇಶಕ್ಕೆ ಬಸ್ಸುಗಳು
ಕಳುಹಿಸುತ್ತಿದ್ದು, ಚಡಚಣ ತಾಲೂಕಿನಿಂದ ಒಂದು ಬಸ್ ಹಾಗೂ ಇಂಡಿಯಿಂದ ತಾಲೂಕಿನಿಂದ ಒಂದು ಬಸ್ ವ್ಯವಸ್ಥೆ ಇಲಾಖೆಯಿಂದ ಮಾಡಲಾಗಿದ್ದು, ಆಸಕ್ತಿಯುಳ್ಳವರು ದಿನಾಂಕ 23 -02-2024 ರ
ಸಾಯಂಕಾಲದವರೆಗೆ ಸಮಾಜ ಕಲ್ಯಾಣ ಇಲಾಖೆವನ್ನು
ಸಂಪರ್ಕಿಸಬಹುದಾಗಿದೆ ಎಂದು ಸಹಾಯಕ ನಿರ್ದೇಶಕ ಸಮಾಜ ಕಲ್ಯಾಣ ಇವರು ಪ್ರಕಟಣೆ ತಿಳಿಸಿದ್ದಾರೆ.