ರಾಯಚೂರು: ವಾಹನ ತಪಾಸಣೆ ವೇಳೆ ಬೈಕ್ ಕಳ್ಳ ಸೆರೆ ಸಿಕ್ಕಿದ್ದು, ಆರೋಪಿಯನ್ನ ಬಂಧಿಸಿ 6 ಬೈಕ್ ಗಳನ್ನ ವಶಕ್ಕೆ ಪಡೆಯುವಲ್ಲಿ ಸದರಬಜಾರ್ ಠಾಣೆ ಪೊಲೀಸ್ ಯಶ್ವಸಿಯಾಗಿದ್ದಾರೆ. ನಗರದ ಹರಿಜನವಾಡ ಅಯ್ಯಬೌಡಿ ನಿವಾಸಿ ನಾಗರಾಜ ತಿಮ್ಮಯ್ಯ ಬಂಧಿತ ಬೈಕ್ ಕಳ್ಳನಾಗಿದ್ದಾನೆ.
ನಗರದ ಜಾಕೀರ್ ಹುಸೇನ್ ಸರ್ಕಲ್ ನಲ್ಲಿ ಪೊಲೀಸ್ ರು ವಾಹನ ತಪಾಸಣೆ ಮಾಡಲಾಗುತ್ತಿತ್ತು. ಆಗ ನಾಗರಾಜ ಟಿವಿಎಸ್ ಎಕ್ಸ್ ಎಲ್ ಸೂಪರ್ ಬೈಕ್ ತೆಗೆದುಕೊಂಡು ಹೋಗುತ್ತಿದ್ದ. ವಾಹನವನ್ನ ನಿಲ್ಲಿಸಿದ್ದ ಪೊಲೀಸ್ ರು ವಾಹನ ದಾಖಲೆಗಳನ್ನ ಕೇಳಿದ್ದಾರೆ, ಈ ವೇಳೆ ಆತನಿಂದ ಸಮಂಜಸ ಉತ್ತರ ಸಿಗಲಿಲ್ಲ. ಈ ವೇಳೆ ಪಟೇಲ್ ರಸ್ತೆಯಲ್ಲಿ ಕಳೆದ ಎರಡು ತಿಂಗಳ ಹಿಂದೆ ಕೆಎ-36, ಇಹೆಚ್-8685 ವಾಹನ ಕಳ್ಳತನವಾಗಿರುವ ಪ್ರಕರಣ ದಾಖಲಾಗಿತ್ತು. ಇದರ ಆಧಾರದ ಮೇಲೆ ತನಿಖೆ ಕೈಗೊಂಡಾಗ ಎಕ್ಸ್ಎಲ್ ಸೂಪರ್ ವಾಹನ ಜತೆಗೆ ಇನ್ನೂ ವಿವಿಧ ಸ್ಥಳಗಳಲ್ಲಿ 5 ವಾಹನಗಳನ್ನ ಕಳ್ಳತನ ಮಾಡಿರುವುದಾಗಿ ಒಪ್ಪಿಕೊಂಡಿದ್ದು, ಆರೋಪಿಯಿಂದ 1 ಲಕ್ಷ ರೂಪಾಯಿ ಮೌಲ್ಯದ 6 ಬೈಕ್ ಗಳನ್ನ ವಶಕ್ಕೆ ಪಡೆದುಕೊಳ್ಳಲಾಗಿದೆ.
ತನಿಖೆ ತಂಡದಲ್ಲಿ ಸಿಪಿಐ ಎಂ.ಡಿ.ಫಸಿಯುದ್ದೀನ್, ಪಿಎಸ್ ಐಗಳಾದ ನರಸಮ್ಮ, ಬಸವರಾಜೇಶ್ವರಿ, ವಿಜಯ ಪ್ರತಾಪ್ ಹಾಗೂ ಸಿಬ್ಬಂದಿಗಳಾದ ಶ್ರೀನಿವಾಸ್, ಲಾಲೇಸಾಬ್, ಶಿವಕುಮಾರ್, ವೆಂಕಟೇಶ್, ಶಿವರಾಜ್, ಬಸವರಾಜ್, ಚಂದ್ರಕಾಂತ್ ಪತ್ತೆ ಕಾರ್ಯಚರಣೆಯಲ್ಲಿ ಇದ್ದರು.