ಶಕ್ತಿ ಇರಲಾರದವರು ಚುನಾವಣೆಗೆ ಸ್ಪರ್ಧೆ..! ಶಾಸಕ ಪಾಟೀಲ್
ಇಂಡಿ : ಪ್ರಜಾಪ್ರಭುತ್ವ ದಾರಿಯಲ್ಲಿ ಚಿಂತನೆ ಮಾಡಬೇಕು. 13 ಜನ ಕೂಡಿಸುವಷ್ಟು, ಸ್ಪರ್ಧಿಸುವಂತಹ ಶಕ್ತಿ ನಿಮ್ಮಲ್ಲಿ ಇಲ್ಲದೆ ಇರುವುದು ನಿಮ್ಮ ಅಶಕ್ತತತೆ ಮತ್ತು ಫ್ಯಾಕ್ಟರಿ ಹಿತಾಸಕ್ತಿ ತೋರಿಸುತ್ತದೆ. ನಿಮಗೆ ಆ ಪ್ಯಾಕ್ಟರಿ ಬಗ್ಗೆ ಕಾಳಜಿ ಇದ್ರೆ ಪೂರ್ಣ ಪ್ರಮಾಣದಲ್ಲಿ 13 ಜನರನ್ನು ಕರೆದುಕೊಂಡು ಸ್ಪರ್ಧೆ ಮಾಡಬೇಕಾಗಿತ್ತು. ಈ ಬರಗಾಲ, ಸಾಲ, ತ್ರಾಸ ಇರುವ ಕೆಟ್ಟ ಪರಿಸ್ಥಿತಿಯಲ್ಲಿ ಸೂಕ್ಷ್ಮ ವಾತಾವರಣ ನಿರ್ಮಾಣ ಮಾಡುವುದಲ್ಲದೇ ಮತ್ತಷ್ಟು ಪ್ಯಾಕ್ಟರಿ ಕಷ್ಟ ಮಾಡಿದಂತಾಗುತ್ತದೆ. 60 ವಯಸ್ಸು ಆದ ನಂತರ ಅರಿವು ಮರಿವು ಹಿಡಿದಂತೆ ಅದು ನಿಜನಾ..! ಎಂದು ಪ್ರಶ್ನೆ ಮಾಡಿ ನಗೆ ಮಾಡಿದರು. ವಯಸ್ಸು ಬಹಳ ಆದ ನಂತರ ನಿರ್ಣಯ ತಪ್ಪು ಮಾಡತ್ತಿರಬಹುದು ಶಾಸಕ ಯಶವಂತರಾಯಗೌಡ ಪಾಟೀಲ್ ವ್ಯಂಗ್ಯ ನುಡಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಕಳೆದ 5 ವರ್ಷಗಳ ಕಾಲ ಕಾರ್ಖಾನೆ ಸಮರ್ಪಕವಾಗಿ ನಡೆಸಿಕೊಂಡು ಬಂದಿದ್ದೇನೆ.
1983 ರಲ್ಲಿ ಶಂಕು ಸ್ಥಾಪನೆ ಹೊಂದಿ 2017 ರ
ವರೆಗೆ ನೆನೆಗುದಿಗೆ ಬಿದಿದ್ದ ಮರಗೂರ ಗ್ರಾಮದ ಶ್ರೀ ಭೀಮಾಶಂಕರ ಸಕ್ಕರೆ ಕಾರ್ಖಾನೆ ಸಮರ್ಪಣೆ ಹೊಂದಿತ್ತು. ಅದಕ್ಕೆ ಮರು ಜೀವ ನೀಡಿ ಸರ್ಕಾರದಿಂದ 45.89 ಕೋಟಿ ಅನುದಾನ ಮಂಜೂರಿ ಪಡೆದುಕೊಂಡು ಕೇವಲ 3 ವರ್ಷಗಳಲ್ಲಿ ಕಾರ್ಖಾನೆ ಕಟ್ಟಿದ್ದೆನೆ ಎಂದು
ಹೇಳಿದರು.
ಪ್ರತೀ ವರ್ಷ ಹೆಚ್ಚಿನ ಕಬ್ಬು ನುರಿಸುತ್ತ ಕಳೆದ ವರ್ಷ 5.29 ಲಕ್ಷ ಮೆಟ್ರಿಕ್ ಟನ್ ಕಬ್ಬು ನುರಿಸಲಾಗಿದೆ. ಈ ಭಾಗದ ರೈತರಿಗೆ ಈ ಕಾರ್ಖಾನೆ ಜೀವನಾಡಿಯಾಗಿ ಕೆಲಸ ಮಾಡುತ್ತಿದೆ. ಈ ಎಲ್ಲಾ ಕೆಲಸಗಳು ಶೇರುದಾರ ರೈತರಿಗೆ
ತೃಪ್ತಿತಂದಿದ್ದರೆ ಮಾತ್ರ ನನಗೆ ಮತ್ತು ಸಹೋದ್ಯೋಗಿಗಳಿಗೆ ಬೆಂಬಲಿಸಿ ಆಯ್ಕೆ ಮಾಡಿ
ಎಂದು ಶಾಸಕ ಯಶವಂತರಾಯಗೌಡ ಪಾಟೀಲ
ಮನವಿ ಮಾಡಿದರು.
ಸಧ್ಯದ ಪರಿಸ್ಥಿತಿಯಲ್ಲಿ ಕಾರಖಾನೆ 450 ಕೋಟಿ
ರೂ ದುಡಿಯುತ್ತಿದ್ದು 200 ಕೋಟಿ ರೂ ಇಥೆನಾಲ್ಗೆ ಹೀಗೆ ಕಾರ್ಖಾನೆ 650 ಕೋಟಿ ರೂ ದ್ದಾಗಿದೆ ಎಂದರು. ಅದಲ್ಲದೆ ನಾವು ಕಬ್ಬು ತೆಗೆದುಕೊಳ್ಳಲು ಮತ್ತು ಸಕ್ಕರೆ ಮಾರಲು ಒಂದೇ ಅಳತೆ ಮಾನ ಬಳುಸುತ್ತಿದ್ದು ಕಬ್ಬಿನ ತೂಕದಲ್ಲಿ
ಮೋಸವಿಲ್ಲ ಎಂದರು. ಕಾರ್ಮಿಕರಿಗೆ ವಿಮೆ ನೀಡುತ್ತಿದ್ದೇವೆ. ಅದು ಅವರ ಕುಟುಂಬಕ್ಕೆ ಅನುಕೂಲ ಎಂದರು. ಕಾರ್ಖಾನೆಗೆ ಈ ಹಿಂದೆ ಸಿದ್ದರಾಮಯ್ಯನವರು
ಮುಖ್ಯ ಮಂತ್ರಿ ಇದ್ದಾಗ 50 ಕೋಟಿ ರೂ ಸೇರಿದಂತೆ ಎಸ್‍ಡಿಎಫ್, ಅಪೆಕ್ಸ ಬ್ಯಾಂಕು, ಬಾಗಲಕೋಟ ಮತ್ತು ವಿಜಯಪುರ ಡಿ ಸಿ ಸಿ ಮತ್ತು ಬೀರಲಿಂಗೇಶ್ವರ ಜೊಲ್ಲೆ ಅವರ ಬ್ಯಾಂಕು ಸಹಕಾರ ನೀಡಿವೆ ಎಂದರು. ಬೆಳಗಾಂವ
ಸಂಸದ ಅಂಗಡಿ ಮತ್ತು ಶಿವಾನಂದ ಪಾಟೀಲ,
ಅಜಯಕುಮಾರ ಸರನಾಯಕ ಸಹಾಯ
ಸ್ಮರಿಸಿದರು.
ಬಳ್ಳೊಳ್ಳಿ ಗ್ರಾಮದ ದಿ. ನಾಕರೆ, ದಿ.ಬಿ.ಕೆ.ಗುಡದಿನ್ನಿ ಮತ್ತು ಶೇರುದಾರ ರೈತರು ಕಂಡಿದ್ದ ಕನಸು ನನಸನ್ನಾಗಿಸಿದ್ದೇನೆ. ಕೇಂದ್ರ ಸರ್ಕಾರದ ನಿತೀಶ ಗಡ್ಕರಿ ಅವರು ಇತ್ತೀಚೆಗೆ ಈ
ಕಾರ್ಖಾನೆಯಲ್ಲಿ ಇಥೆನಾಲ್ ಉತ್ಪಾದನೆಗೆ ಮಂಜೂರಾತಿ ನೀಡಿದ್ದಾರೆ. ಮುಂದಿನ ವರ್ಷದ ಕಬ್ಬು ನುರಿಸುವ ಹಂಗಾಮಿನಲ್ಲಿ ಇಥೆನಾಲ್ ಉತ್ಪಾದನೆ ಮಾಡಲಾಗುವದು. ಅದಕ್ಕಾಗಿ ಅಗತ್ಯ ಕಾಮಗಾರಿಗಳು ನಡೆದಿವೆ ಎಂದ ಅವರು ಇದರಿಂದ ರೈತರ ಕಬ್ಬಿಗೆ ಹೆಚ್ಚಿನ ದರ ನೀಡಲು ಸಾಧ್ಯವಾಗುತ್ತದೆ ಎಂದರು. ಬರುವ ದಿನಾಂಕ 11 ರಂದು ಕಾರ್ಖಾನೆಗೆ ನಿರ್ದೇಶಕ ಮಂಡಳಿಗೆ ಚುನಾವಣೆ ನಡೆಯಲಿದ್ದು, ಸಾಮಾನ್ಯ ಅ ವರ್ಗಕ್ಕೆ 5
ಜನರನ್ನು ಆಯ್ಕೆ ಮಾಡಬೇಕಿದೆ. 8 ಜನ ಕಣದಲ್ಲಿದ್ದಾರೆ. ಇವರಲ್ಲಿ ನನ್ನನ್ನು ಸೇರಿ ಇನ್ನಿತರ ಅಭ್ಯರ್ಥಿಗಳಾದ ಬಸವರಾಜ ಸಿದ್ರಾಮಪ್ಪ ಧನಶ್ರೀ, ಮಲ್ಲನಗೌಡ ರಾಮಚಂದ್ರಗೌಡ ಪಾಟೀಲ, ರೇವಗೊಂಡಪ್ಪ ಅಣ್ಣಾರಾಯ ಪಾಟೀಲಮತ್ತು ಸಿದ್ದಣ್ಣ ರಾಮಣ್ಣ ಬಿರಾದಾರ ಅವರಿಗೆ ಅದರಂತೆ ಮಹಿಳಾ ಮೀಸಲು ಸ್ಥಾನಕ್ಕೆ ಸ್ಪರ್ಧಿಸಿರುವ ಲಲಿತಾ ಅಡಿವೆಪ್ಪ ನಡಗೇರಿ ಮತ್ತು
ಸರೋಜಿನಿ ಸಿದ್ದಾರಾಯ ಪಾಟೀಲ ಅವರಿಗೆ ಪರಿಶಿಷ್ಟ
ಜಾತಿಯ ಮೀಸಲು ಸ್ಥಾನಕ್ಕೆ ಸ್ಪರ್ಧೆ ಮಾಡಿರುವ
ಅಶೋಕ ಅಂಬಾಜಿ ಗಜಾಕೋಶ ಅವರಿಗೆ ತಮ್ಮ
ಅಮೂಲ್ಯವಾದ ಮತ ನೀಡಿ ಆಯ್ಕೆ ಮಾಡಬೇಕೆಂದು ಮನವಿ ಮಾಡಿಕೊಂಡರು. ಮಹಿಳಾ ಮೀಸಲು ಸ್ಥಾನಕ್ಕೆ ಸ್ಪರ್ಧೆ ಮಾಡಿರುವ ಇನ್ನೋರ್ವ ಅಭ್ಯರ್ಥಿ ದಾನಮ್ಮ ಕರಬಸಪ್ಪ ಬಿರಾದಾರ ಈಗಾಗಲೇ ಕಣದಿಂದ ಹಿಂದಕ್ಕೆ
ಸರಿದಿರುವದಾಗಿ ಹೇಳಿಕೆ ನೀಡಿದ್ದಾರೆ. ಅವರಿಗೆ
ಅಭಿನಂದಿಸುವದಾಗಿ ಹೇಳಿದರು.
ಇಂಡಿ: ಪತ್ರಿಕಾಗೋಷ್ಠಿಯಲ್ಲಿ ಶಾಸಕ
ಯಶವಂತ್ರಾಯಗೌಡ ಪಾಟೀಲ
ಮಾತನಾಡಿದರು.