ಇಂಡಿ: ಸಚಿವ ಖಾತೆ ಇಲ್ಲದೇ ಮಾಜಿ ಸಚಿವ ಎಂಬಿ ಪಾಟೀಲ್ ಹತಾಶೆ ಆಗಿದ್ದಾರೆ ಎಂದು ಬಿಜೆಪಿ ಮುಖಂಡ ಹಣಮಂತರಾಯಗೌಡ ಪಾಟೀಲ್ ಲೇವಡಿ ಮಾಡಿದರು.
ವಿಜಯಪುರ ಜಿಲ್ಲೆಯ ಇಂಡಿಯಲ್ಲಿ ಮಾತನಾಡಿದ ಅವರು, ಸಚಿವ ಗೋವಿಂದ ಕಾರಜೋಳರನ್ನು ಎಂಬಿಪಿ ಟಾರ್ಗೆಟ್ ಮಾಡಿದ್ದಾರೆ. ಅದಕ್ಕಾಗಿ ಸಚಿವ ಕಾರಜೋಳ ವಿರುದ್ಧ ಇಲ್ಲಸಲ್ಲದ ಆರೋಪ ಮಾಡುತ್ತಿದ್ದು ಖಂಡನೀಯ ಎಂದರು. ಅಲ್ಲದೇ, ಟೀಕೆ ಟಿಪ್ಪಣಿ ಮಾಡುವಾಗ ಪ್ರಜಾಪ್ರಭುತ್ವದ ಶಬ್ದಗಳನ್ನು ಬಳಸಿಕೊಂಡು ಪ್ರತಿಕ್ರಿಯೆ ನೀಡಬೇಕು ಎಂದು ಎಂಬಿಪಿಗೆ ಟಾಂಗ್ ನೀಡಿದರು. ಅದಕ್ಕಾಗಿ ತಕ್ಷಣವೇ ಸಚಿವ ಕಾರಜೋಳ ಬಗ್ಗೆ ತುಚ್ಯವಾಗಿ ಹೇಳಿಕೆ ನೀಡುವುದನ್ನು ನಿಲ್ಲಿಸಬೇಕು ಎಂದರು. ದಿನಾಂಕ 9 ರಂದು ಜಲ ಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಅವರಿಗೆ, ಮಾಜಿ ಜಲ ಸಂಪನ್ಮೂ ಸಚಿವ ಎಂ ಬಿ ಪಾಟೀಲ ಅತ್ಯಂತ ಕನಿಷ್ಟ ಪದಗಳನ್ನು ಬಳಸಿ ಮಾತನಾಡಿದ್ದು ಅವರ ವ್ಯಕ್ತಿತ್ವಕ್ಕೆ ದಕ್ಕೆ ತರುವಂತದ್ದು ಎಂದರು. ಜಿಲ್ಲೆಯಲ್ಲಿ ಕಾರಜೋಳ ಅವರ ನೇತೃತ್ವದಲ್ಲಿ ಅನೇಕ ನೀರಾವರಿಯ ಅಭಿವೃದ್ಧಿ ಕೆಲಸಗಳು ಆಗಿವೆ. ಅವು ಎಮ್ ಬಿ ಪಾಟೀಲ್ ರಿಗೆ ಮುಳ್ಳಾಗುತ್ತೆವೆ ಎಂಬ ಆತಕಂದಿಂದ ಈ ರೀತಿಯಾಗಿ ಮಾತಾಡುತ್ತಿದ್ದಾರೆ. ಆದರೆ ಜಿಲ್ಲೆಯ ಹೆಸರಾಂತ ಬಿ ಎಮ್ ಪಾಟೀಲ್ ರ ಹೆಸರಿಗೆ ದಕ್ಕೆ ತರದಂತೆ ವಾಕ್ಯಗಳು ಬಳಸಬೇಕು ಎಂದು ಹೇಳಿದರು. ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾ ಮುಖಂಡ ಅನೀಲ ಜಮಾದಾರ, ಪುಟ್ಟುಗೌಡ ಪಾಟೀಲ್, ರಮೇಶ ಧರೆನವರ, ಸಂಜು ದಶವಂತ ಉಪಸ್ಥಿತರು.