ಲಿಂಬೆಯ ನಾಡಿನ ನಟನ ಚಿತ್ರ ಕ್ರಷ್ ಇಂದು ಬಿಡುಗಡೆ
ಇಂಡಿ : ಬೆಂಗಳೂರ ಸ್ಮೈಲಿ ಕ್ರಿಯೇಷನ್ಸ ಬ್ಯಾನರ್ ದಲ್ಲಿ
ಇಂಡಿಯ ನಾಯಕ ನಟ ಪಂಚಾಕ್ಷರಿ ನಟಿಸಿರುವ ಕ್ರಷ್
ಕನ್ನಡ ಚಲನಚಿತ್ರಫೆ. 2 ರಂದು ರಾಜ್ಯಾದ್ಯಂತ
ತೆರೆ ಕಾಣಲಿದೆ. ಈ ಹಿಂದೆ ರಂಗ ಬಿರಂಗಿ ಮತ್ತು ಇದೇ ಅಂತರಂಗ ಶುದ್ದಿ ಚಿತ್ರಗಳ ಮೂಲಕ ಮನೆ ಮಾತಾಗಿದ್ದ
ಪಂಚಾಕ್ಷರಿ ನಾಯಕನಾಗಿ ನಟಿಸಿದ ಮೂರನೆಯ
ಚಿತ್ರ. ಚಿತ್ರದ ನಾಯಕಿ ಉತ್ತರ ಕರ್ನಾಟಕದ ಬೆಡಗಿ
ಪ್ರತಿಭಾ ಸೊಪ್ಪಿಮಠ ನಾಯಕಿಯಾಗಿ ನಟಿಸಿದ್ದಾರೆ.
ನಿರ್ಮಾಪಕ ಎಸ್.ಚಂದ್ರಮೋಹನ ನಿರ್ಮಾಣದ ಕ್ರಷ್
ಇದೊಂದು ತಂದೆ ಮಗ ಮತ್ತು ತಾಯಿ ಮಗಳ
ಬಾಂದವ್ಯದ ಕಥಾಹಂದರವನ್ನು ಹೊಂದಿದ್ದು ಯುವ ಜನಾಂಗವನ್ನು ಆಕರ್ಷಿಸುವ ಚಿತ್ರ ಸಾಕಷ್ಟು ಅಂಶಗಳನ್ನು ಈ ಸಿನಿಮಾ ಹೊಂದಿದೆ ಎಂದು ನಾಯಕ ನಟ ಪಂಚಾಕ್ಷರಿ ತಿಳಿಸಿದರು. ಇಂಡಿಯ ಶಾಂತೇಶ್ವರ ಮತ್ತು ಅಂಬಾಭವಾನಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ನಂತರ ಪಂಚಾಕ್ಷರಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.