ಜನರ ವಿಶ್ವಾಸ ಹೆಚ್ಚಿಸುವ ಭರವಸೆಯ ಭಜೆಟ್
ಅಮೃತ ಕಾಲದ ಭಾರತ ನಿರ್ಮಾಣಕ್ಕೆ ಮೋದಿ ಸರ್ಕಾರದಿಂದ ಮಹತ್ವದ ನಿರ್ಧಾರ.
ಇಂಡಿ : ಅಮೃತ ಕಾಲದ ಭಾರತ ನಿರ್ಮಾಣಕ್ಕೆ ಮೋದಿ ಸರ್ಕಾರದಿಂದ ಮಹತ್ವದ ನಿರ್ಧಾರ. ಕೇಂದ್ರ ಸರ್ಕಾರ ಮಂಡಿಸಿದ ಬಜೆಟ ಜನಪ್ರಿಯತೆಯಿಂದ ಕೂಡಿದೆ ಎಂದು ಇಂಡಿಯ ಭಾಜಪ ಯುವ ಮುಖಂಡ ರಾಮಸಿಂಗ ಕನ್ನೊಳ್ಳಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಭಾರತದ ಮೂಲಭೂತ ಅಭಿವೃದ್ಧಿಗೆ ಹೊಸ ಹೆಜ್ಜೆ ಜೊತೆಗೆ ದೇಶದ ಭವ್ಯ ಭಾರತ ಪುನರುತ್ಥಾನವಾಗುತ್ತಿರುವ ಅನುಭವ ಹೊಂದುವಂತೆ ಅನೇಕ ಯೋಜನೆ ಅನುಷ್ಠಾನ ಮಾಡುವ ಮೂಲಕ ಜನರ ವಿಶ್ವಾಸ ಹೆಚ್ಚಿಸುವ ಮೂಲಕ ರೈತರಿಗೆ ಗೊಬ್ಬರ ರಿಯಾಯಿತಿ ದರದಲ್ಲಿ ನೀಡುವದು. ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡುವದು. 7 ಲಕ್ಷ ಆದಾಯದಾರರಿಗೆ ತೆರಿಗೆ ವಿನಾಯಿತಿ. ನೀಡುವ ಮೂಲಕ ಭರವಸೆಯ ಭಜೆಟ್ ಮಂಡಿಸಿದ್ದಾರೆಂದು ಹೇಳಿದರು.