ಡಿ.ಎನ್.ಅಕ್ಕಿ ಅವರಿಗೆ ಬೆಂದ್ರೆ ಪ್ರಶಸ್ತಿ
ಇಂಡಿ : ಪಟ್ಟಣದ ಹಿರಿಯ ಸಾಹಿತಿ ಖ್ಯಾತ ಸಂಸೋಧಕ
ಮತ್ತು ವಿದ್ವಾಂಸರಾದ ಡಿ.ಎಲ್. ಅಕ್ಕಿ ಇವರಿಗೆ ಬೇಂದ್ರೆ
ಪ್ರಶಸ್ತಿ ಅಭಿಸಿದೆ. ಪ್ರಶಸ್ತಿಯನ್ನು ಬೆಂಗಳೂರಿನ ಅರಮನೆ
ಮೈದಾನದಲ್ಲಿ ನಡೆದ ಸಮಾರಂಭದಲ್ಲಿ ಕರ್ನಾಟಕ
ಸೇನೆ ಬೆಂಗಳೂರು ಇವರು ಪ್ರಧಾನ ಮಾಡಿದ್ದಾರೆ.
ಸಾಹಿತ್ಯ ಕ್ಷೇತ್ರದಲ್ಲಿ ಗಣನೀಯ ಸೇವೆ ಸಲ್ಲಿಸಿದಕ್ಕಾಗಿ
ಅಕ್ಕಿ ಅವರಿಗೆ ಈ ಪ್ರಶಸ್ತಿ ಲಭಿಸಿದೆ. ಇಂಡಿಯ ನಿವೃತ್ತ ಪ್ರಾಚಾರ್ಯ ಎ.ಎಸ್.ಗಾಣಿಗೇರ, ಖ್ಯಾತ ಸಂಸೋಧಕ ಡಾ. ಎಸ್.ಕೆ.ಕೊಪ್ಪಾ, ಕಸಾಪ ಅಧ್ಯಕ್ಷ ರಾಘವೇಂದ್ರ ಕುಲಕರ್ಣಿ, ಕಜಾಪ ಅಧ್ಯಕ್ಷ ಆರ್.ವಿ.ಪಾಟೀಲ ಸೇರಿದಂತೆ ಅನೇಕರು ಅಭಿನಂದಿಸಿದ್ದಾರೆ.