ಸಿಂಧನೂರು: ತಾಯಿ -ಮಕ್ಕಳ ಆಸ್ಪತ್ರೆ ನಿರ್ಮಾಣ ಸ್ಥಳವನ್ನು ನಾನು ತೋರಿಸುವೆ. ಬಿಡಿಸಿಕೊಳ್ಳುವ ಧೈರ್ಯ ಶಾಸಕ ವೆಂಕಟರಾವ್ ನಾಡಗೌಡಗೆ ಇದೆಯಾ? ಎಂದು ಮಾಜಿ ಸಂಸದ ಕೆ .ವಿರೂಪಾಕ್ಷಪ್ಪ ಸವಾಲು ಹಾಕಿದರು. ತಾಯಿ- ಮಕ್ಕಳ ಆಸ್ಪತ್ರೆಯು ಕಲ್ಲೂರು ಗ್ರಾಮದಲ್ಲಿ ನಿರ್ಮಾಣ ಮಾಡುತ್ತಿರುವುದಕ್ಕೆ ಮಾಜಿ ಸಂಸದ ಕೆ ವಿರೂಪಾಕ್ಷಪ್ಪ ಶಾಸಕರ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಗರ್ಭಿಣಿ ಮಹಿಳೆಯರಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಸರ್ಕಾರ ತಾಯಿ- ಮಕ್ಕಳ ಆಸ್ಪತ್ರೆಯನ್ನು ಮಂಜೂರು ಮಾಡಿದ್ದು, ನಗರದಲ್ಲಿ ನಿರ್ಮಾಣ ಮಾಡಿ ತಾಲೂಕಿನ ಜನರಿಗೆ ಅನುಕೂಲ ಕಲ್ಪಿಸುವ ಬದಲಾಗಿ ನಗರದಲ್ಲಿ 2 ಎಕರೆ ಸರ್ಕಾರಿ ಜಾಗ ಇಲ್ಲ ಎಂದು ಕಲ್ಲೂರು ಗ್ರಾಮದಲ್ಲಿ ನಿರ್ಮಾಣ ಮಾಡುತ್ತಿರುವುದಾಗಿ ಶಾಸಕರಾಗಿ ಹೇಳುವುದು ಸರಿಯಲ್ಲ. ನಗರದಲ್ಲಿ ಸರ್ಕಾರಿ ಜಾಗ ಸಾಕಷ್ಟಿದೆ. ಕಂದಾಯ ಇಲಾಖೆ ಅಧಿಕಾರಿಗಳ ಹಾಗೂ ತಹಶೀಲ್ದಾರರು ಸಭೆಯನ್ನು ಕರೆಯಲಿ ನಾನು ಸಭೆಗೆ ಬರುವೆ ಸಭೆಗೆ ಬಂದು ಸ್ಥಳವನ್ನು ತೋರಿಸುವೆ. ಆಗ ತಾಯಿ – ಮಕ್ಕಳ ಆಸ್ಪತ್ರೆಯನ್ನು ನಗರಲ್ಲಿ ನಿರ್ಮಾಣ ಮಾಡುವ ಧೈರ್ಯ ನಾಡಗೌಡ್ರಿಗೆ ಇದೆಯಾ ಎಂದು ಸವಾಲು ಹಾಕಿದರು.