ಶಾಸನಗಳು ಭಾರತೀಯ ಸಂಸ್ಕøತಿಯ ರಾಯಭಾರಿಗಳು
ಇಂಡಿ : ಜಾಗತಿಕ ಇತಿಹಾಸದಲ್ಲಿ ಭಾರತೀಯ ಇತಿಹಾಸ ಅತ್ಯಂತ ಶ್ರೇಷ್ಠವಾಗಿದೆ ಎಂದು ಮುದ್ದೇಬಿಹಾಳ ಎಂ.ಜಿ. ವಿ.ಸಿ ಕಾಲೇಜಿನ ಪ್ರಾಧ್ಯಾಪಕ ಡಾ.ಆರ್. ಎಚ್. ಸಜ್ಜನ ಹೇಳಿದರು.
ಪಟ್ಟಣದ ಸರಕಾರಿ ಪ್ರಥಮ ದರ್ಜೆ ಕಾಲೇಜು ಇತಿಹಾಸ ಮತ್ತು ಐ.ಕ್ಯೂ.ಎ.ಸಿ ವಿಭಾಗದ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ ಭಾರತೀಯ ಶಾಸನಶಾಸ್ತ್ರದ ಮಹತ್ವ ಕುರಿತು ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದರು. ಅಧ್ಯಕ್ಷತೆ ವಹಿಸಿದ ಕಾಲೇಜಿನ ಪ್ರಾಂಶುಪಾಲ ಆರ್.ಎಚ್.ರಮೇಶ ಮಾತನಾಡಿ ಶಾಸನಗಳು ಇಂದಿನ ಆಡಳಿತದ ನೀತಿ ನಿಯಮಗಳಿಗೆ
ಮಾದರಿಯಾಗಿವೆ ಎಂದು ಹೇಳಿದರು. ಇತಿಹಾಸ ವಿಭಾಗದ ಮುಖ್ಯಸ್ಥ ಕಿರಣ ರೇವಣಕರ ಪ್ರಾಸ್ತಾವಿಕವಾಗಿ
ಮಾತನಾಡಿ ಶಾಸನ ಶಾಸ್ತ್ರದ ಅಧ್ಯಯನದ ಮಹತ್ವದ ಕುರಿತು ತಿಳಿಸಿದರು. ಇತಿಹಾಸ ವಿಭಾಗದ ಉಪನ್ಯಾಸಕ ಕಾಶಿನಾಥ ಜಾಧವ ,ಭೀಮರಾಯ ಢವಳೇಶ್ವರ ,ಎಸ್. ಜೆ. ಮಾಡ್ಯಾಳ ಮಾತನಾಡಿದರು.
ಗ್ರಂಥಪಾಲಕ ತಿಪ್ಪಣ್ಣ ವಗ್ದಾಳ, ರಾಜಲಕ್ಷ್ಮಿ ಆರ್, ಡಾ. ರಮೇಶ ಕತ್ತಿ, ಪರಸಪ್ಪ.ಎಸ್.ದೇವರ, ಡಾ. ವಿಜಯಮಹಾಂತೇಶ ದೇವರ, ಡಾ.ಸುರೇಖಾ ವಾರದ, ಪ್ರೊ. ಭಾರತಿ ಹೊನವಾಡ, ಸೋಮಲಿಂಗ ಎಸ್ ಗಂಜಿ, ಸತೀಶಕುಮಾರ ಚುಂಚೂರ ಮತ್ತಿತರಿದ್ದರು.
ಇಂಡಿ ಪಟ್ಟಣದ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಭಾರತೀಯ ಶಾಸನಶಾಸ್ತ್ರದ ಮಹತ್ವ ಕುರಿತು ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಡಾ.ಆರ್.ಎಚ್.ಸಜ್ಜನ ಮಾತನಾಡಿದರು.