29 ರಂದು ಗೋಳಸಾರದಲ್ಲಿ ಸಾಮೂಹಿಕ ವಿವಾಹ
ಇಂಡಿ : ಶ್ರೀ ಸದ್ಗುರು ಚಿನ್ಮಯಮೂರ್ತಿ ಮಹಾಶಿವಯೋಗಿಗಳ 30 ನೇ ಪುಣ್ಯಾರಾಧನೆ ನಿಮಿತ್ಯ ಗೋಳಸಾರದ ಶ್ರೀ ಪುಂಡಲಿಂಗೇಶ್ವರ ಮಹಾಶಿವಯೋಗಿ – ಗಳ ಮಠದಲ್ಲಿ ಜ. 29 ರಂದು ಸಾಮೂಹಿಕ ವಿವಾಹ ನಡೆಯಲಿದೆ ಎಂದು ದೇವಸ್ಥಾನ ಸಮಿತಿ ಪ್ರಕಟಣೆಯಲ್ಲಿ ತಿಳಿಸಿದೆ.
ಜ.25 ರಿಂದ 29 ರ ವರೆಗೆ ಪ್ರತಿದಿನ ಮುಂಜಾನೆ 6
ಗಂಟೆಯಿಂದ ಶ್ರೀ ಸದ್ಗುರು ಚಿನ್ಮಯಮೂರ್ತಿ ತ್ರಿಮೂರ್ತಿ ಮಹಾಶಿವಯೋಗಿಗಳ ಗದ್ದುಗೆಗೆ ರುದ್ರಾಭಿಷೇಕ, ಪುಷ್ಪಾರ್ಚನೆ, ಪ್ರತಿದಿನ ಸಾಯಂಕಾಲ 6 ಗಂಟೆಯಿಂದ ಆದ್ಯಾತ್ಮ ಪ್ರವಚನ ಜರುಗುವದು. ಜ.25 ರಂದು ಬೆಳಗ್ಗೆ 9 ಗಂಟೆಗೆ ಡೊಳ್ಳಿನ ಗಾಯನ ಸ್ಪರ್ಧೆ ವಿವಿಧ ಗ್ರಾಮದ ಡೊಳ್ಳಿನ ಕಲಾವಿಧರಿಂದ, 26 ರಂದು ರಾತ್ರಿ 7 ಗಂಟೆಗೆ
ಜತೆಗಿರುವನು ಚಂದಿರ ನಾಟಕ ಶಿವಸಂಚಾರ
ಕಲಾಬಳಗ ಸಾಣೆಹಳ್ಳಿ ಇವರಿಂದ, 27 ರಂದು ಬೆಳಗ್ಗೆ
ಡಾ|| ಮಂಜುನಾಥ ಕೊಟೆನ್ನವರ ಇವರ ನೇತೃತ್ವದಲ್ಲಿ ಬಿಎಲ್‍ಡಿಈ ಆಸ್ಪತ್ರೆಯ ವಿವಿಧ ತಜ್ಞರಿಂದ ಉಚಿತ ಆರೋಗ್ಯ ತಪಾಸಣೆ ಶಿಬಿರ ನಡೆಯಲಿದೆ. ನಂತರ ರಾತ್ರಿ 7 ಗಂಟೆಗೆ ತಾಳಿಯ ತಕರಾರು ನಾಟಕ, 28 ರಂದು ರಾತ್ರಿ 7 ಗಂಟೆಗೆ ಕಲ್ಯಾಣದ ಬಾಗಿಲು ನಾಟಕ, ಜ. 29 ರಂದು ಸೋಮವಾರ ಮುಂಜಾನೆ ಸುಮಂಗಲೆಯರ ಕುಂಭದೊಂದಿಗೆ ಶ್ರೀ ಪ್ರಭು ಸಿದ್ಧರಾಯ ದೇವರ ಪಲ್ಲಕ್ಕಿ ಉತ್ಸವ ನಂತರ 11 ಗಂಟೆಗೆ ನಾಡಿನ ಶರಣರಿಂದ
ಹಿತೋಪದೇಶ ಹಾಗೂ ಸಾಮೂಹಿಕ ವಿವಾಹ
ನಡೆಯಲಿದೆ. ಸಾಮೂಹಿಕ ವಿವಾಹಕ್ಕಾಗಿ
9482630441,9901658866 ಗೆ ಸಂಪರ್ಕಿಸಲು
ಪ್ರಕಟಣೆಯಲ್ಲಿ ಕೋರಿದ್ದಾರೆ.