ಇಂದು ಮೆಗಾ ಮಾರುಕಟ್ಟೆ ವಾಣಿಜ್ಯ ಮಳಿಗೆ ಬಹಿರಂಗ ಹರಾಜು..
ಇಂಡಿ : ಬಹು ನಿರೀಕ್ಷಿತ ಮೇಗಾ ಮಾರುಕಟ್ಟೆ ವಾಣಿಜ್ಯ ಮಳಿಗೆ ಇಂದು ಹರಾಜು ಪ್ರಕ್ರಿಯೆ ನಡೆಯಲಿದೆ. ಹೌದು ಪಟ್ಟಣದ ಪುರಸಭೆ ವ್ಯಾಪ್ತಿಯ ಸ್ಟೇಶನ್ ರಸ್ತೆ, ಪುರಸಭೆ ಮಾಲಿಕತ್ವದ ಸರ್ವೆ ನಂ.626/ಪಿ-01ರಲ್ಲಿ ನೂತನವಾಗಿ ನಿರ್ಮಿಸಲಾದ ಮೆಗಾ ಮಾರುಕಟ್ಟೆ ಹಂತ-1ರಲ್ಲಿ ಪೂರ್ಣಗೊಂಡ ವಾಣಿಜ್ಯ ಮಳಿಗೆಗಳನ್ನು ಬಹಿರಂಗ ಹರಾಜು 2024 ಜನವರಿ 23 ರಂದು ಬೆಳಿಗ್ಗೆ 11.00 ಗಂಟೆಗೆ ಮೆಗಾ ಮಾರುಕಟ್ಟೆ ಆವರಣದಲ್ಲಿ ಮಳಿಗೆಗಳ ಬಹಿರಂಗ ಹರಾಜು ಪ್ರಕ್ರಿಯೆ ಮುಂದುವರೆದಿರುತ್ತದೆ. ಹರಾಜು ಪ್ರಕಟಣೆ ಕುರಿತು ಹೊರಡಿಸಿದ ಪ್ರಕಟಣೆಯಲ್ಲಿ ಪುರಸಭೆ ಆರ್ಥಿಕ ಹಿತದೃಷ್ಟಿಯಿಂದ ಈ ಹಿಂದಿನ ಪ್ರಕಟಣೆಯಲ್ಲಿ ಭಾಗಶಃ ಮಾರ್ಪಡಿಸಿ ಬಿಡ್‌ನಲ್ಲಿ ಭಾಗವಹಿಸುವವರಿಗೆ ಬಿಡ್ ಸಂದರ್ಭದಲ್ಲಿ ಸಹ ಡಿ.ಡಿ. ಮೂಲಕ ಚಲನ್ ನೀಡಿದಲ್ಲಿ ಹಾಗೂ ಪುರಸಭೆಯಿಂದ ಇ-ಸ್ವೀಕೃತಿ ಮೂಲಕವು ಡಿ.ಡಿ. ಮೊತ್ತ ಪಾವತಿಸಿ ಬಿಡನಲ್ಲಿ ಭಾಗವಹಿಸಲು ಅವಕಾಶ ಕಲ್ಪಿಸಲಾಗಿರುತ್ತದೆ. ಮತ್ತು ಹರಾಜು ಪ್ರಕಟಣೆಯ ಷರತ್ತು 20ನ್ನು ಸಡಿಲಿಕೆಮಾಡಿ 100ರೂ.ಗೆ ಸಿಮಿತಗೊಳಿಸಲಾಗಿರುತ್ತದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.