ಅಫಜಲಪುರ: ತಾಲೂಕಿನ ಮಹಾರಾಷ್ಟ್ರ ಗಡಿ ಭಾಗದ ಹೊಸೂರ ಗ್ರಾಮದ ಯುವಕರು, ಗ್ರಾಮ ಪಂಚಾಯತ ಸದಸ್ಯರು, ಪ್ರಾಥಮಿಕ ಹಾಗೂ ಪ್ರೌಢ ಶಾಲೆಯ ಶಿಕ್ಷಕರು ಹಾಗೂ ವಿದ್ಯಾರ್ಥಿಗಳ ಸಹಯೋಗದಲ್ಲಿ ಸ್ವಾಮಿ ವಿವೇಕಾನಂದರ 159 ನೇ ಜನ್ಮ ದಿನಾಚರಣೆಯನ್ನು ಆಚರಿಸಲಾಯಿತು. ಈ ಸಂದರ್ಭದಲ್ಲಿ ಶಿಕ್ಷಕರಾದ ಚಿದಾನಂದ ಕಟ್ಟಿಮನಿ, ಹನಮಂತ ನಾಟಿಕಾರ, ಭೀಮಾಶಂಕರ ಮಾನಶೆಟ್ಟಿ, ಶಿವಶರಣಪ್ಪ ಸಂಗೋಳಗಿ,ಲಕ್ಷ್ಮೀಕಾಂತ ಚಿನಮಳ್ಳಿ, ಗ್ರಾಮದ ಪ್ರಮುಖರು ಹಾಗೂ ಯುವಕರು ಷಡಕ್ಷರಿ ತಂಬಾಕೆ, ಲಿಂಗರಾಜ ಗೌಡಗಾವ ಮಹಾಂತೇಶ ಬೊರೆಗಾವ, ಸೈಪನ ನಾದ, ಸಂಗಮೇಶ ಅಂದೇವಾಡಿ, ಅಶೋಕ ಬರಗಾಲೆ, ಬಸವರಾಜ ತಂಬಾಕೆ, ಸಾತಲಿಂಗಪ್ಪ ಹಂಜಗಿ, ಪ್ರಶಾಂತ ಚಿನಮಳ್ಳಿ, ಆನಂದ ಅಂದೇವಾಡಿ, ಮಹಾದೇವ ಬ್ಯಾಗಳ್ಳಿ, ಉಪಸ್ಥಿತರಿದ್ದರು.