Editor : Voice Of Janata : ಅಯೋಧ್ಯೆಯ ರಾಮ ಮಂದಿರದಲ್ಲಿ ‘ಇಂದು ನಡೆಯಲಿರುವ ಶ್ರೀರಾಮ ಮಂದಿರದಲ್ಲಿ ದೇವರ ಪ್ರತಿಷ್ಠಾಪನೆ ಕಾರ್ಯಕ್ರಮದಲ್ಲಿ ಭಾಗಿಯಾಗಲು ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರು, ಅವರ ಪತ್ನಿ ಚನ್ನಮ್ಮ, ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಹಾಗೂ ಯುವ ಜನತಾದಳ ರಾಜ್ಯಾಧ್ಯಕ್ಷ నిఖిలా ಕುಮಾರಸ್ವಾಮಿ ಭಾನುವಾರವೇ ಅಯೋಧ್ಯೆಗೆ ತಲುಪಿದರು. ಮಾಜಿ ಪ್ರಧಾನಿ ದೇವೇಗೌಡರ ಕುಟುಂಬ ಅಯೋಧ್ಯೆಗೆ ಪ್ರಯಾಣ ಬೆಳೆಸಿದ ಸಂದರ್ಭ ಎಂದು ಜೆಡಿಎಸ್ ಪಕ್ಷದ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಲಾಗಿದೆ.
ಈ ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಗಲು ದೇಶ-ವಿದೇಶಗಳ ಗಣ್ಯರಿಗೆ ಆಹ್ವಾನ ನೀಡಲಾಗಿದೆ. ಅಯೋಧ್ಯೆ ರಾಮಮಂದಿರ ಪ್ರಾಣಪ್ರತಿಷ್ಠಾಪನೆ ಸಮಾರಂಭಕ್ಕೆ ಮುನ್ನಾದಿನವಾದ ಭಾನುವಾರ ಎಲ್ಲೆಡೆಯ
ಪ್ರಮುಖರು ವಿಶೇಷ ವಾಹನಗಳು, ವಿಮಾನಗಳು ಮೂಲಕ ಗಣ್ಯರು ಅಯೋಧ್ಯೆ ತಲುಪಿದ್ದಾರೆ. ಹಿರಿಯ ಕ್ರಿಕೆಟಿಗ ಅನಿಲ್ ಕುಂಬ್ಳೆ, ಆರೆಸ್ಸೆಸ್ ಮುಖ್ಯಸ್ಥ ಮೋಹನ್ ಭಾಗವತ್, ಖ್ಯಾತ ನಟ ರಜನಿಕಾಂತ್, ಜನಸೇನಾ ಮುಖ್ಯಸ್ಥ, ನಟ ಪವನ್ ಕಲ್ಯಾಣ್, ಗಾಯಕ, ಸಂಯೋಜಕ ಶಂಕರ್ ಮಹಾದೇವನ್, ನಟಿ ಶೆಫಾಲಿ ಶಾ, ಹಿರಿಯ ನಟ ಅನುಪಮ್ ಖೇರ್, ನಟ ವಿವೇಕ್ ಒಬೆರಾಯ್, ನಟ ರಣದೀಪ್ ಹೂಡಾ ಮತ್ತು ಪತ್ನಿ ಲಿನ್ ಲೈಶ್ರಾಮ್ ಸೇರಿದಂತೆ ಹಲವರು ಖ್ಯಾತನಾಮರು ಸಹ ಅಯೋಧ್ಯೆಯತ್ತ ಪ್ರಯಾಣ ಬೆಳೆಸಿದ್ದಾರೆ.