ಅಫಜಲಪುರ: ತಾಲೂಕಿನ ಮಣ್ಣೂರ ಗ್ರಾಮ ಪಂಚಾಯತಿಯಲ್ಲಿ 2020- 21ನೇ ಸಾಲಿನ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯ ಸಾಮಾಜಿಕ ಪರಿಶೋಧನೆ ಗ್ರಾಮ ಸಭೆ ಜರುಗಿತು. ತಾಲೂಕು ಸಂಯೋಜಕಿ ಚನ್ನಕ್ಕ ಪೂಜಾರಿ ಸಾಮಾಜಿಕ ಪರಿಶೋಧನೆಯಲ್ಲಿ ಅನುಷ್ಠಾನಗೊಂಡ ಕಾಮಗಾರಿಗಳನ್ನು ಮಂಡಿಸಿ ಮಾತನಾಡಿ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ ಗ್ರಾಮೀಣ ಪ್ರದೇಶಗಳ ಸರ್ವತೋಮುಖ ಅಭಿವೃದ್ಧಿಗೆ ಪೂರಕವಾಗಿದ್ದು ಗ್ರಾಮೀಣ ಜನರಿಗೆ ವರ್ಷದ 100 ದಿನಗಳ ಉದ್ಯೋಗ ಸೃಷ್ಟಿಸುವ ಮೂಲಕ ಗ್ರಾಮೀಣ ಪ್ರದೇಶದ ಜನರಿಗೆ ವರದಾನವಾಗಿದೆ. ಉದ್ಯೋಗ ಖಾತ್ರಿ ಯೋಜನೆ ದುಡಿಯುವ ಕೈಗಳಿಗೆ ಉದ್ಯೋಗ ಒದಗಿಸಲು ಜಾರಿಗೆ ಬಂದಿದ್ದು ಸಮಾಜದಲ್ಲಿ ಬಡವರನ್ನು ಅಭಿವೃದ್ಧಿಯತ್ತ ಕರೆದುಕೊಂಡು ಹೋಗಲು ಸೂಕ್ತ
ಮಾರ್ಗಸೂಚಿಯಾಗಿದೆ ಎಂದು ಹೇಳಿದರು. ಅಭಿವೃದ್ಧಿ ಅಧಿಕಾರಿ ಬೋರಮ್ಮ ಕುಂಬಾರ ಮಾತನಾಡಿ, ಉದ್ಯೋಗ ಖಾತ್ರಿ ಯೋಜನೆ ಅಡಿಯಲ್ಲಿ ಪ್ರತಿ ಕುಟುಂಬಕ್ಕೆ ಒಂದು ವರ್ಷದಲ್ಲಿ ಕನಿಷ್ಠ 100 ದಿನಗಳ ಉದ್ಯೋಗ ಒದಗಿಸಿ ಅವರ ಜೀವನಕ್ಕೆ ಭದ್ರತೆ ಒದಗಿಸುವುದು. ಗ್ರಾಮೀಣ ಬಡವರ ಜೀವನೋಪಾಯದ ಮಟ್ಟ ಸುಧಾರಿಸುವುದು ಈ ಯೋಜನೆಯ ಉದ್ದೇಶವಾಗಿದೆ. ಉದ್ಯೋಗ ಚೀಟಿಯಲ್ಲಿ ಹೆಸರಿರುವ ಕುಟುಂಬದ ಎಲ್ಲಾ ವಯಸ್ಕರು,ಕೆಲಸಕ್ಕಾಗಿ ಅರ್ಜಿ ಸಲ್ಲಿಸಬಹುದು. ಆರ್ಥಿಕವಾಗಿ ಸಬಲರಾಗಲು ಒಂದು ಕುಟುಂಬಕ್ಕೆ 100 ಮಾನವ ದಿನಗಳ ಕೆಲಸ ನೀಡಲಾಗುತ್ತದೆ. ಮಹಿಳೆಯರಿಗೆ ಮತ್ತು ಪುರುಷರಿಗೆ ಸಮಾನ ಕೂಲಿ ದಿನವೊಂದಕ್ಕೆ 289 ರುಪಾಯಿ ನೀಡಲಾಗುವುದು ನಮೂನೆ -6 ರಲ್ಲಿ ಕೆಲಸಕ್ಕಾಗಿ ಬೇಡಿಕೆ ಸಲ್ಲಿಸಿದ ನಂತರ ಸೂಚಿಸಿದ ಸ್ಥಳದಲ್ಲಿ ಕೆಲಸಕ್ಕೆ ಹಾಜರಾಗಿ ನಿಗದಿಪಡಿಸಿದ ಕೆಲಸ ನಿರ್ವಹಿಸಬೇಕು. ಕೂಲಿ ಹಣ ನೇರವಾಗಿ ನಿಮ್ಮ ಖಾತೆಗೆ ಜಮಾ ಮಾಡಲಾಗುವುದು. ಪ್ರತಿಯೊಬ್ಬರೂ ಈ ಯೋಜನೆಯ ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಹೇಳಿದರು. ಈ ಸಂದರ್ಭದಲ್ಲಿ ಗ್ರಾಮ ಪಂಚಾಯತಿ ಅಧ್ಯಕ್ಷೆ ರೇಷ್ಮಾ ಮಾಂಗ ಉಪಾಧ್ಯಕ್ಷ ಬಿ,ರಾಜು ಬೆನಕನಹಳ್ಳಿ ಅಭಿವೃದ್ಧಿ ಅಧಿಕಾರಿ ಬೋರಮ್ಮ ಕುಂಬಾರ ಸದಸ್ಯರಾದ ಬಸವರಾಜ ವಾಯಿ ಶಿವಪ್ಪ ಕರೂಟಿ, ಮಹಾಂತೇಶ ಬೋರೆಗಾಂವ ಸಂತೋಷ ಅವಟೆ, ಶ್ರೀಶೈಲ ಚಾಂಬರ ಮುಖಂಡರಾದ ಕಲ್ಲಪ್ಪ ಅಲ್ಲಾಪೂರ ಚಂದು ಹಿರೇಕುರುಬರ, ಅಪ್ಪಾಸಾಬ ಹೊಸೂರಕರ, ಮಲಕಣ್ಣ ಹೊಸೂರಕರ ಶರಣಪ್ಪ ಸುತಾರ, ಮಹಾದೇವ ಪ್ಯಾಟಿ, ಶರಣಪ್ಪ ನಾವದಗಿ, ಮಲ್ಲಿಕಾರ್ಜುನ ಭತಗುಣಕಿ ಸುಭಾಷ ಚಿಕ್ಕಮಣೂರ ಬಸವರಾಜ ಜನ್ನಾ, ರಮೇಶ ಮಾಂಗ ಶರಣು ತಾರಾಪೂರ ಶಿವಾನಂದ ಕಲಶೆಟ್ಟಿ, ಕಾಶೀನಾಥ ಜೇವೂರ,ಗುಳುರಾಯ ಬುರುಡ, ಖಾಜಪ್ಪ ಜಾಬಾದಿ, ಮಹಾಂತೇಶ ಚಕ್ರವರ್ತಿ ಸೇರಿದಂತೆ ಅಂಗನವಾಡಿ ಕಾರ್ಯಕರ್ತೆಯರು ಆಶಾ ಕಾರ್ಯಕರ್ತೆಯರು ಗ್ರಾ.ಪಂ, ಸಿಬ್ಬಂದಿಗಳು ಗ್ರಾಮಸ್ಥರು ಉಪಸ್ಥಿತರಿದ್ದರು.



















