ಜ- 16 ರಿಂದ ಮಹಾತಪಸ್ವಿ ಗುರುಲಿಂಗೇಶ್ವರ ಶಿವಾಚಾರ್ಯರ 80 ನೇ ಪುಣ್ಯಾರಾಧನೆಯ ಜಾತ್ರಾ ಮಹೋತ್ಸವ..!
ಇಂಡಿ: ಜನೇವರಿ 16 ಮಂಗಳವಾರದಿಂದ ಜ. 21 ರವಿವಾರವರೆಗೆ ತಾಲೂಕಿನ ತಡವಲಗಾ ಗ್ರಾಮದ ಮಹಾತಪಸ್ವಿ ಗುರುಲಿಂಗೇಶ್ವರ ಶಿವಾಚಾರ್ಯರ 80 ನೇ
ಪುಣ್ಯಾರಾಧನೆಯ ಜಾತ್ರಾ ಮಹೋತ್ಸವ ಅದ್ದೂರಿಯಾಗಿ
ನಡೆಯಲಿದೆ ಎಂದು ತಡವಲಗಾ ಸಂಸ್ಥಾನ ಹಿರೇಮಠದ
ಅಭಿನವ ಶಿವಯೋಗೇಂದ್ರ ದೇವರು ತಿಳಿಸಿದರು.
ಸೋಮವಾರ ಶ್ರೀ ಮಠದಲ್ಲಿ ಸುದ್ದಿಗಾರರೊಂದಿಗೆ
ಮಾತನಾಡಿದ ಅವರು, ಜನೇವರಿ 16 ರಿಂದ 21 ರವರೆಗೆ
ಪ್ರತೀದಿನ ಬೆಳಿಗ್ಗೆ 5:00 ಘಂಟೆಗೆ ಮಹಾತಪಸ್ವಿ
ಗುರುಲಿಂಗೇಶ್ವರ ಶಿವಾಚಾರ್ಯರ ಕರ್ತೃ ಗದ್ದುಗೆಗೆ
ಮಹಾ ರುದ್ರಾಭಿಷೇಕ ಜರುಗುವುದು. ತದನಂತರ
ಪ್ರತಿದಿನ ಸಾಯಂಕಾಲ 7:30 ರಿಂದ 9 ಗಂಟೆಯವರೆಗೆ ಶ್ರೀ ರಂಭಾಪುರಿಶ್ವರ ಬೆಳಗು ವೀರಗಂಗಾಧರ
ಜಗದ್ಗುರುಗಳವರ ಮಹಾಪುರಾಣ ಜರುಗಲಿದೆ.
ಜ. 19 ಶುಕ್ರವಾರರಂದು ಬೆಳಿಗ್ಗೆ 8:00 ಘಂಟೆಯಿಂದ
ಸಾಯಂಕಾಲ 8:00 ಘಂಟೆ ವರೆಗೆ ರಾಮದುರ್ಗದ
ವೀರಮಾರುತೇಶ್ವರ ಹಾಘೂ ಬಾಳಿಗೆರೆಯ ಲಕ್ಷ್ಮೀಬಾಯಿ
ಅವರಿಂದ ಗೀಗಿ ಪದಗಳು ಪದಗಳು ಜರುಗುವು.
ಜ. 20 ಶನಿವಾರರಂದು ರಾತ್ರಿ 9:00 ಘಂಟೆಗೆ
ಅಕ್ಕಮಹಾದೇವಿ ಭಜನಾ ಮಂಡಳಿ ಶಿರಕನಹಳ್ಳಿ ಇವರಿಂದ ಭಜನಾ ಕಾರ್ಯಕ್ರಮ. ಜ. 21ರಂದು ಬೆಳಿಗ್ಗೆ 8 ಘಂಟೆಗೆ ಲಿಂ. ಶಿವಯೋಗೇಂದ್ರ ಶಿವಾಚಾರ್ಯರ ಭಾವಚಿತ್ರ ಅಡ್ಡ ಪಲ್ಲಕ್ಕಿ ಮಹೋತ್ಸವ ಸಕಲ ಕಳಸ, ಕನ್ನಡಿವಾದ್ಯ, ವೈಭವಗಳೊಂದಿಗೆ ಸಕಲ ಶರಣರು, ಶರಣೆಯರು ಪಾಲ್ಗೊಂಡು ನಡೆಸಿಕೊಡಲಿದ್ದಾರೆ. ತದನಂತರ ಮುತ್ತೈದೆಯರಿಗೆ ಉಡಿ ತುಂಬುವ ಕಾರ್ಯಕ್ರಮ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಜರುಗಲಿವೆ ಎಂದು ಶ್ರೀಗಳು ತಿಳಿಸಿದರು.
ಇಂಡಿ: ಅಭಿನವ ಶಿವಯೋಗೇಂದ್ರ ದೇವರು ಭಾವಚಿತ್ರ.