ಶಿವಯೋಗಿ ಸಿದ್ಧರಾಮ ಪ್ರಥಮ ಶ್ರೇಣಿಯ ವಚನಕಾರರು
ಇಂಡಿ : ಹನ್ನೆರಡನೆಯ ಶತಮಾನದ ಪ್ರಥಮ ಶ್ರೇಣಿಯ ವಚನಕಾರರಲ್ಲಿ ಒಬ್ಬ. ಬಾಲ್ಯದಲ್ಲಿ ಕುರಿಕಾಯುವ ಕಾಯಕ. ಶ್ರೀಶೈಲಕ್ಕೆ ಹೋಗಿ ಮಲ್ಲಿಕಾರ್ಜುನನ ದರ್ಶನ ಪಡೆದ ಸಿದ್ದರಾಮ ಸೋಲಾಪುರಕ್ಕೆ ಬಂದು ದೇವಸ್ಥಾನ ನಿರ್ಮಿಸಿ ಕೆರೆ ಕಟ್ಟೆ ಕಾರ್ಯದಲ್ಲಿ ತೊಡಗಿದ ಕಾಯಕಯೋಗಿ ಎಂದು ಕಂದಾಯ ಉಪ – ವಿಬಾಗಾಧಿಕಾರಿ ಅಬೀದ್ ಗದ್ಯಾಳ ಹೇಳಿದರು.
ಪಟ್ಟಣದ ಮಿನಿ ವಿಧಾನಸೌಧದಲ್ಲಿ ತಾಲೂಕಾ ಆಡಳಿತ
ವತಿಯಿಂದ ನಡೆದ ಶಿವಯೋಗಿ ಸಿದ್ದರಾಮೇಶ್ವರ
ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು.
ಪ್ರಭುದೇವ ಅವರನ್ನು ಕಲ್ಯಾಣಕ್ಕೆ ಕರೆದೊಯ್ದು ಚೆನ್ನ ಬಸವಣ್ಣ ನವರಿಂದ ಇಷ್ಟಲಿಂಗ ದೀಕ್ಷೆ ಕೊಡಿಸಿ ಅನುಭವ ಮಂಟಪ ಗೋಷ್ಠಿಯಲ್ಲಿಪಾಲ್ಗೊಂಡು ಮಹಾಶಿವಯೋಗಿ – ಯಾದರು ಎಂದರು.
ತಹಸೀಲ್ದಾರ ಬಿ.ಎಸ್.ಕಡಕಬಾವಿ, ಸಮಾಜ ಕಲ್ಯಾಣ ಅಧಿಕಾರಿ ಬಿ.ಜೆ.ಇಂಡಿ, ಕಜಾಪ ಅಧ್ಯಕ್ಷ ಆರ್.ವಿ. ಪಾಟೀಲ, ಪಿ.ಎಂ.ಮಠಪತಿ, ಎಂ.ಪಿ.ಕೊಡತೆ, ಎಸ್ಆರ್.ಮುಜಗೊಂದ, ಶಿರಸ್ತೆದಾರ ಬಸವರಾಜ ರಾವೂರ, ಬಸವರಾಜ ಗೊರನಾಳ ಮತ್ತಿತರಿದ್ದರು.
ಇಂಡಿ ಪಟ್ಟಣದ ಮಿನಿವಿಧಾನಸೌಧದಲ್ಲಿ ತಾಲೂಕು ಆಡಳಿತ ವತಿಯಿಂದ ನಡೆದ ಶಿವಯೋಗಿ ಸಿದ್ದರಾಮ ಜಯಂತಿ ಕಾರ್ಯಕ್ರಮದಲ್ಲಿ ಎಸಿ ಅಬೀದ್ ಗದ್ಯಾಳ
ಮಾತನಾಡಿದರು.