ವಿಜಯಪುರ: ವಿಜಯಪುರದ ಶ್ರೀರಾಮನ ಭಕ್ತರು ವಿಶಿಷ್ಠ ಭಕ್ತಿ ಪ್ರದರ್ಶನ ಮಾಡಿದ್ದಾರೆ. ಸ್ಕೈ ಡೈವಿಂಗ್ ಮೂಲಕ 13 ಸಾವಿರ ಅಡಿಯ ಮೇಲಿನಿಂದ ಜೈ ಶ್ರೀರಾಮ್ ಎಂದು ರಾಮ ಭಕ್ತರು ಧುಮುಕಿದ್ದಾರೆ.
ಬ್ಯಾಂಕಾಕ್ ನ ಖೋಯಾಯ್ ಎಂಬ ಪ್ರದೇಶದಿಂದ 13 ಸಾವಿರ ಅಡಿ ಮೇಲಿಂದ ಜೈ ಶ್ರೀರಾಮ ಎಂದು ಬರೆದಿರುವ ಹಾಗೂ ರಾಮ ಮಂದಿರದ ಫೋಟೊ ಇರುವ ಬ್ಯಾನರ್ ಹಿಡಿದು ಸ್ಕೈ ಡೈವಿಂಗ್‌ನ್ನು ವಿಜಯಪುರದ ಉದ್ಯಮಿ ರಾಜಶೇಖರ ಮುತ್ತಿನಪೆಂಡಿಮಠ ನೇತೃತ್ವದಲ್ಲಿ ಅಭಿಮಾನ ಸಮರ್ಪಣೆ ಮಾಡಿದ್ದಾರೆ. ನಮೋ ಸ್ಕೈ ಡೈವರ್ಸ್ ಎಂಬ ನಾಲ್ವರು ಶ್ರೀರಾಮನ ಭಕ್ತರ ತಂಡದಿಂದ ವಿಭಿನ್ನ ಭಕ್ತಿ ಸಮರ್ಪಣೆ ಮಾಡಲಾಗಿದೆ. ರಾಮ ಮಂದಿರ ಫೋಟೊ, ಮೋದಿ ಭಾವಚಿತ್ರ ಹಾಗೂ ಜೈ ಶ್ರೀ ರಾಮ ಎಂದು ಬರೆದಿರುವ ಫಲಕ ಹಿಡಿದು ಡೈವಿಂಗ್ ಮಾಡಿದ್ದಾರೆ. ಬೆಂಗಳೂರಿನ ರಾಹುಲ್ ಡಾಕ್ರೆ, ಅನುಭವ ಅಗರವಾಲ್ ಹಾಗೂ ಮಹಾರಾಷ್ಟ್ರದ ಹಿಮಾನಶೂ ಸಾಬಳೆ ತಂಡದಿಂದ ಭಕ್ತಿ ಸಮರ್ಪಿಸಿದ್ದಾರೆ.