ಹಾಡು : ಸಂಕ್ರಾಂತಿಯ ಸೊಬಗು
ಸಂಭ್ರಮದಿ ಆಚರಿಸೋಣ ಸಂಕ್ರಾಂತಿಯನ್ನ !
ಎಳ್ಳುಬೆಲ್ಲವತಿಂದು ಒಳ್ಳೆವರಾಗಿ ಇರೋಣ !
ಸಂಕ್ರಾಂತಿಯ ಸಿಹಿಯನ್ನು ಎಲ್ಲರಿಗೂ ಹಂಚೋಣ !
ನಾ ಎಂಬ ಗರ್ವವನು ಮನದಿಂದ ತಗಿಯೋಣ !!ಪ!!
ಸಂಬಂಧಗಳ ಬೆಸುಗೆಯನ್ನ !
ಗಟ್ಟಿಯಾಗಿ ಬೆಳೆಸೋಣ !!
ಒಗ್ಗಟ್ಟಿನಲ್ಲಿ ಬಲವಿದೆ ಎಂದು ತೋರಿಸೋಣ !
ಸಿಹಿಮನಸಿನಿಂದ ಸಹಿಯಾಗಿ ನೋಡಿರಿ ಎಲ್ಲರನ್ನ !! 1!!
ಬಡವ ಬಲ್ಲಿದರೆಂಬ ಬೇಧ ಕಳಿಯೋಣ !
ನಿಂದನೆ ಟೀಕೆ ಎಂಬ ಕಹಿಯ ಅಳಿಯೋಣ !!
ಸಹಾಯ ಸಹಕಾರ ಎಂಬ ಮನವ ಬೆಳೆಸೋಣ !
ಹಳ್ಳಿಯಾದರೇನು ದಿಲ್ಲಿಯಾದರೇನು ಸ್ನೇಹದಿಂದ ಇರೋಣ !!2!!
ಸಂಸಾರವೆಂಬ ಎತ್ತಿನ ಗಾಡಿಯನ್ನ !
ಸರಿಯಾಗಿ ನಡೆಸಲಿ ಕಟುಂಬದೆಜಮಾನ !!
ನೋವು ನಲಿವಿನ ದಾರಿಯಲಿ ಕಾಣಿರಿ ಸಂತಸವನ್ನ !
ಕಹಿಯನ್ನ ಮರೆತು ಸಿಹಿಯನ್ನ ಸವೆಯುತ್ತ ಸಾಗಿಸಿರಿ ಜೀವನ !!3!!
ಹಲವಾರುಕಡೆ ನಡೆಯುವ ಜಾತ್ರೆಯ ಸಂಭ್ರಮವನ್ನ !
ಖುಷಿಯಿಂದ ಕೂಡಿಕೊಂಡು ನೋಡೋಣ !!
ನಮ್ಮ ಹೆಮ್ಮೆಯ ವಿಜಯಪುರದ ಸಿದ್ದೇಶ್ವರನ !
ಭಕ್ತಿಯಿಂದ ನಮಿಸಿ ನಲಿಯೋಣ ಈ ದಿನ !!4!!
ಕಲೆಯ ತವರೂರು ನಮ್ಮ ಗೊರನಾಳವನ್ನ !
ಜಾಹೀರ ಮಾಡಿದ ನಮ್ಮ ದೇವ ಹನುಮಾನ !!
ಗೊರನಾಳ ರಾಗುಗೌಡ ಬರೆದ ಈ ಕವನ !
ಹನುಮದೇವನಿಗೆ ಮಾಡುತ್ತ ವಂದನ !!5!!