ಭೀಮಾನಾಡಿನಲ್ಲಿ ಹನುಮ ರಥಯಾತ್ರೆ ನೋಡುವುದೇ ಸೌಭಾಗ್ಯ : ಅಭಿನವ ರಾಚೋಟೇಶ್ವರ ಶೀವಚಾರ್ಯ
ಇಂಡಿ: ಅಯೋಧ್ಯೆಯಲಿ ಪ್ರಭು ಶ್ರೀರಾಮ ಮಂದಿರ
ಉದ್ಘಾಟನೆ ಪೂರ್ವಭಾವಿಯಾಗಿ ನಮೋ ಬ್ರಿಗೇಡ್ ವತಿಯಿಂದ ನೀನ್ನೆ ಹನುಮ ರಥಯಾತ್ರೆ ಪ್ರಾರಂಭವಾಗಿದ್ದು ಶುಕ್ರವಾರ ರಥ ಯಾತ್ರೆ ತಾಲೂಕಿನ ತಡವಲಗಾ ಗ್ರಾಮಕ್ಕೆ ಬಂದಿತು.
ತಾಲೂಕಿನಲ್ಲಿ ಝಳಕಿ ಗ್ರಾಮದಿಂದ ರಥಯಾತ್ರೆ
ಪ್ರಾರಂಭವಾಗಿದ್ದು ಬಳ್ಳೊಳ್ಳಿ, ತಡವಲಗಾ ಬೋಳೆಗಾಂವ,
ಹಿರೇರೂಗಿ, ಇಂಡಿ, ಅಗರಖೇಡ ಗ್ರಾಮಗಳಿಗೆ ಆಗಮಿಸಿ
ಅಲ್ಲಿನ ಸಾವಿರಾರು ಸಂಖ್ಯೆಯಲ್ಲಿನ ಹಿಂದೂ ಭಾಂಧವರು
ಭಾಗವಹಿಸಿ ರಥಯಾತ್ರೆಯನ್ನು ಅದ್ದೂರಿಯಾಗಿ
ಬರಮಾಡಿಕೊಂಡರು. ತಡವಲಗಾ ಗ್ರಾಮಕ್ಕೆ ರಥಯಾತ್ರೆ
ಆಗಮಿಸುತ್ತಿದ್ದಂತೆ ತಡವಲಗಾ ಹಿರೇಮಠದ ಅಭಿನವ
ರಾಚೋಟೇಶ್ವರ ಶಿವಾಚಾರ್ಯರ ನೇತೃತ್ವದಲ್ಲಿ ನಡೆದ
ಬೈಕ್ ಯಾತ್ರೆ ಅಗರಖೇಡ ಗ್ರಾಮದಲ್ಲಿ
ಮುಕ್ತಾಯವಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಅಭಿನವ ರಾಚೋಟೇಶ್ವರ್ ಶಿವಾಚಾರ್ಯರು, ಅಂದು ಶ್ರೀರಾಮ ಮಂದಿರ ಸಲುವಾಗಿ ನಡೆದ ಹೋರಾಟ ಹಾಗೂ ಕಾರ್ಯಕರ್ತರ ಬಲಿದಾನದ ಫಲ ರಾಮ ಮಂದಿರ ನಿರ್ಮಾಣ ಆಗುತ್ತಿದ್ದು ಸಂತಸದ ವಿಷಯ. ಇಂದು ಹನುಮ, ರಾಮ ಯಾತ್ರೆ ನಮ್ಮ ನಿಮ್ಮ ಗ್ರಾಮಗಳಿಗೆ ಆಗಮಿಸಿದ್ದು ರಥಯಾತ್ರೆ ನೋಡುವುದೇ ನಮ್ಮ ನಿಮೆಲ್ಲರ ಸೌಭಾಗ್ಯವಾಗಿದೆ
ಎಂದರು.