ಇಂಡಿ : ಶ್ರೀಗುರು ಬಸವಲಿಂಗ ಗಿರಿಜಾ ಮಾತಾಜಿಯವರ 83ನೇ ಪುಣ್ಯಾರಾಧನೆಯ ನಿಮಿತ್ಯವಾಗಿ ಹಮ್ಮಿಕೊಂಡಿದ್ದ ‘ ಜಂಗಿ ನಿಕಾಲಿ ಕುಸ್ತಿಗಳನ್ನು’ ಕೊವಿಡ್ 19 ಹಿನ್ನಲೆ ರದ್ದು ಮಾಡಲಾಗಿದೆ ಎಂದು ಆಡಳಿತ ಮಂಡಳಿಯ ವ್ಯವಸ್ಥಾಪಕರು ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ತಿಳಿಸಿದ್ದಾರೆ. ಇನ್ನು ಸರ್ಕಾರದ ಕೋವಿಡ್ ನಿಯಮಾವಳಿ ಪ್ರಕಾರ ಜಾತ್ರೆಯ ಜೊತೆಗೆ ವಿವಿಧ ಕಾರ್ಯಕ್ರಮಗಳನ್ನು ಸರಳ ರೀತಿಯಲ್ಲಿ ನೆರೆಯುತ್ತವೆ. ಅಲ್ಲದೇ, ಜಾತ್ರಾ ಆಡಳಿತ ಮಂಡಳಿ ನಿರ್ಧರಿಸಿದ ಕಾರಣ ಎಲ್ಲ ಸದ್ಭಕ್ತರು ಸಹಕರಿಸಬೇಕು ಎಂದು ಮನವಿ ಮಾಡಿಕೊಂಡಿದ್ದಾರೆ. ಹಿರೇರೂಗಿ – ಬೊಳೇಗಾಂವ ಆಡಳಿತ ಮಂಡಳಿಯವರು ಭಕ್ತರು ಹಾಗೂ ಸಾರ್ವಜನಿಕರು ಸಹಕರಿಸಬೇಕು ಎಂದರು.