ಬಳ್ಳಾರಿ ಮಹಾನಗರ ಪಾಲಿಕೆ ಮೇಯರ್ ಆಗಿ ಬಿ. ಶ್ವೇತಾ
Voice Of Janata : Editor : ತೀವ್ರ ಕೂತೂಹಲ ಕೆರಳಿಸಿದ್ದ ಬಳ್ಳಾರಿ ಮಹಾನಗರ ಪಾಲಿಕೆ ಮೇಯರ್ ಆಗಿ ಬಿ. ಶ್ವೇತಾ ಅವರು ಆಯ್ಕೆಯಾಗಿದ್ದು, ತಿಂಗಳ ಮೇಯರ್ ಡ್ರಾಮಾಗೆ ಕೊನೆಗೆ ತೆರೆಬಿದ್ದಂತಾಗಿದೆ.
ಹೌದು ಕಳೆದ ಎರಡು ತಿಂಗಳಿಂದ ಖಾಲಿ ಇದ್ದ ಬಳ್ಳಾರಿ ಮಹಾನಗರ ಪಾಲಿಕೆಯ ಮೇಯರ್ ಆಯ್ಕೆಯ ವಿಚಾರಕ್ಕೆ ಬುಧವಾರ ತೆರೆ ಬಿದ್ದಿದೆ. ಇಂದು ನಡೆದ ಪಾಲಿಕೆ ಚುನಾವಣೆಯಲ್ಲಿ ನಗರದ 31 ವಾರ್ಡ್‌ನ ಸದಸ್ಯೆ ಶ್ವೇತಾ ಬಿ, ಅವರು ಬಳ್ಳಾರಿ ಮೇಯರ್ ಆಗಿ ಆಯ್ಕೆ ಆಗಿದ್ದಾರೆ.
ಮೇಯರ್ ಸ್ಥಾನಕ್ಕೆ ಶ್ವೇತಾ ಬಿ ಸೇರಿದಂತೆ ಕಾಂಗ್ರೆಸ್‌ನಿಂದ ಮೂವರು ನಾಮಪತ್ರ ಸಲ್ಲಿಸಿದ್ದರು. ಆದರೇ ಕೊನೆ ಗಳಿಗೆಯಲ್ಲಿ ಮಿಂಚು ಶ್ರೀನಿವಾಸ್ ಹಾಗೂ ಕುಬೇರ ನಾಮಪತ್ರ ವಾಪಾಸ್ ಪಡೆದಿದ್ದಾರೆ. ಮೇಯರ್ ಆಗಿ ಆಯ್ಕೆಯಾಗಿರುವ ಶ್ವೇತಾ ಬಿ ಅವರು 29 ಮತಗಳನ್ನ ಪಡೆದಿದ್ದಾರೆ.