ಇಂಡಿ: ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ನಾದ ಬಿಕೆ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಅನಿವಾರ್ಯವಾಗಿ ಕೆಲವು ತಿಂಗಳುಗಳಿಂದ ಶಾಲಾಭಿವೃದ್ಧಿ SDMC ಸಮಿತಿಯ ಹೊಸ ಆಯ್ಕೆ ಪ್ರಕ್ರಿಯೆ ನಡೆದಿರಲಿಲ್ಲ. ಆದರೆ ಇದಕ್ಕೆ ಸಂಬಂಧಿಸಿದವರ ಅನುಮತಿ ಪಡೆದು ಇಂದು ವಿದ್ಯಾರ್ಥಿಗಳ ಪಾಲಕರು ಹಾಗೂ ಗ್ರಾಮಸ್ಥರ ಸಂಯುಕ್ತಾಶ್ರಯದಲ್ಲಿ ಶಾಲೆಯಲ್ಲಿ sdmc ಸಮಿತಿ ಆಯ್ಕೆ ಕುರಿತು ಸಭೆ ಕರೆಯಲಾಗಿತ್ತು.
ಸಭೆಯಲ್ಲಿ ಶಿಕ್ಷಣ ಪ್ರೇಮಿಯಾದ ಅನುಭವಿ ಗ್ರಾಮದ ಹಿರಿಯರಾದ ದಶರಥ ಗೊಂದಳಿಯವರು ಶಾಂತಿಯಿಂದ ಮಾತನಾಡಿ ಶಾಲೆ ಜೀವಂತವಾಗಿರಬೇಕು, ಮಕ್ಕಳು ಕಲಿಕೆಯಲ್ಲಿ ಪ್ರಗತಿಯಾಗುವ ಮಾರ್ಗದಲ್ಲಿ ಶಾಲೆಯ ಬಗ್ಗೆ ಕಾಳಜಿ ಇರುವ ಪಾಲಕರನ್ನು ಆಯ್ಕೆ ಮಾಡಿರಿ ಎಂದು ಹೇಳಿದರು. ಆದರೆ ಅಲ್ಲಿ ಇಂತಹ ಹಿತೋಪದೇಶಕ್ಕೆ ಗೌರವ ಸಿಗಲಿಲ್ಲ. ಕೆಲವರು ವಿನಃ ಕಾರಣದಿಂದ ಮಾತಿಗೆ ಮಾತು ಬೆಳೆದು ಕೈಗೆ-ಕೈ ಮಿಲಾಯಿಸುವ ಹಂತಕ್ಕೆ ವಾತಾವರಣ ನಿರ್ಮಾಣವಾಯಿತು .ಇದರಿಂದ ಬೇಸತ್ತು ಕೆಲವು ಸಾರ್ವಜನಿಕರು ಸಭೆಯನ್ನು ತೊರೆದು ಹೊರನಡೆದ ಘಟನೆ ನಡೆಯಿತು. ಇದರಿಂದ SDMC ಸಮಿತಿ ರಚನೆ ಶಾಲಾಭಿವೃದ್ಧಿಯಲ್ಲಿ ಮತ್ತು ಮಕ್ಕಳ ಕಲಿಕೆಯಲ್ಲಿ ಗ್ರಾಮಸ್ಥರು ಯಾವಾಗ ಕರುಣೆ ತೋರುತ್ತಾರೆ ಎಂಬುದನ್ನು ಕಾದು ನೋಡಬೇಕಾಗಿದೆ.