ಮನನೊಂದ ವ್ಯಕ್ತಿ ನೇಣಿಗೆ ಶರಣಾಗತಿ..! ಯಾವುದಕ್ಕೆ..?
ಇಂಡಿ : ಮಾನಸಿಕವಾಗಿ ಮನನೊಂದ ವ್ಯಕ್ತಿ ನೇಣಿಗೆ ಶರಣಾಗತಿ ಆಗಿರುವ ಘಟನೆ ವಿಜಯಪುರ ಜಿಲ್ಲೆಯ ಇಂಡಿ ತಾಲ್ಲೂಕಿನ ಅಂಜುಟಗಿ ಇಂಡಿ ರಸ್ತೆಯಲ್ಲಿ ನಡೆದಿದೆ. 43 ವರ್ಷದ ಅಡಿವೆಪ್ಪ ಘಾಯಿ ಮೃತಪಟ್ಟಿರುವ ದುರ್ದೈವಿ. ಅಲ್ಲದೇ, ಹಿರಿಯರ ಆಸ್ತಿಯಲ್ಲಿ 39 ಎಕರೆ ಜಮೀನು ಮಾರಿ ಮದ್ಯ ಸೇವನೆ ಮಾಡಿ ಹಾಳು ಮಾಡಿದ್ದೇನೆ ಎಂದು ಮಾನಸಿಕವಾಗಿ ಮನನೊಂದುಕೊಂಡಿದ್ದಾನೆ. ಅದಕ್ಕಾಗಿ ಜಿಗುಪ್ಸೆಗೊಂಡು ಬೇವಿನ ಮರಕ್ಕೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಈ ಕುರಿತು ಝಳಕಿ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.




















