ಕಾಂಗ್ರೆಸ್ ವಿರುದ್ಧ ಹರಿಹಾಯ್ದ ತೇಜಸ್ವಿ ಸೂರ್ಯ
Voice Of Janata: Editor: ಅಧಿಕಾರಕ್ಕೆ ಬಂದು ಏಳು ತಿಂಗಳು ಕಳೆದರೂ ಸಹ ಕಾಂಗ್ರೆಸ್ ಪಕ್ಷವು ಬಿಎಂಆರ್‌ಸಿಎಲ್‌ಗೆ ಒಬ್ಬರು ಪೂರ್ಣಾವಧಿ ವ್ಯವಸ್ಥಾಪಕ ನಿರ್ದೇಶಕರನ್ನು ನೇಮಕ ಮಾಡಿಲ್ಲ. ಇದರಿಂದಾಗಿ ಮೆಟ್ರೋ ಕಾಮಗಾರಿಗಳು ವಿಳಂಬವಾಗುತ್ತಿದ್ದು, ಜನರ ತೆರಿಗೆ ಹಣ ಪೋಲಾಗುತ್ತಿದೆ ಎಂದು ಸಂಸದ ತೇಜಸ್ವಿ ಸೂರ್ಯ ಆರೋಪಿಸಿದ್ದಾರೆ.
ಮೆಟ್ರೋ ಕಾಮಗಾರಿ ವಿಳಂಬದ ಬಗ್ಗೆ ಗುರುವಾರ ಅವರು ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದರು. ಇದುವರೆಗೂ ಮೆಟ್ರೋ ತನಗೆ ನೀಡಿರುವ ಡೆಡ್‌ಲೈನ್‌ನಲ್ಲಿ ಕಾಮಗಾರಿ ಮುಗಿಸಿಲ್ಲ. ಇದಕ್ಕೆ ಕಾರಣ ಮೆಟ್ರೋಗೆ ಪೂರ್ಣಾವಧಿ ಎಂಡಿ ಇಲ್ಲದಿರುವುದು. ಸಂಚಾರ ದಟ್ಟಣೆ ನಿರ್ವಹಿಸುವಲ್ಲಿ ಮತ್ತು ಮೆಟ್ರೋ ಸಂಪರ್ಕ ಕಾಮಗಾರಿಯನ್ನು ಪೂರ್ಣಗೊಳಿಸುವಲ್ಲಿ ಕಾಂಗ್ರೆಸ್ ಸರ್ಕಾರ ಸಂಪೂರ್ಣ ವಿಫಲವಾಗಿದೆ ಎಂದು ಆರೋಪಿಸಿದ ತೇಜಸ್ವಿ ಸೂರ್ಯ, ಎಂಟು ಲಕ್ಷ ಮಂದಿ ಓಡಾಡುವ ದಿನನಿತ್ಯದ ಸಾರಿಗೆ ಸಂಸ್ಥೆಗೆ ಒಂದು ಸಮರ್ಪಕ ಕಚೇರಿ ಕೂಡ ಇಲ್ಲ ಎಂದು ಟೀಕಿಸಿದರು.
ಕೇಂದ್ರ ಸಚಿವ ಹರ್ದೀಪ್ ಸಿಂಗ್ ಪುರಿ ಅವರನ್ನು ಭೇಟಿಯಾಗಿ ನಾನು ಮನವಿ ಸಲ್ಲಿಸಿದ್ದು, ಸಾಧ್ಯವಾದಷ್ಟೂ ಬೇಗ ಮೆಟ್ರೋ ಪ್ರಧಾನ ನಿರ್ದೇಶಕ ಹಾಗೂ ವ್ಯವಸ್ಥಾಪಕ ನಿರ್ದೇಶಕ ಸ್ಥಾನಗಳನ್ನು ಭರ್ತಿ ಮಾಡಬೇಕೆಂದು ಒತ್ತಾಯಿಸಿದರು.