ಸಾವಿತ್ರಿಬಾಯಿ ಪುಲೆ ಜಯಂತಿ, ಪ್ರೇರಕ ಶಕ್ತಿ..! ಯಾವುದಕ್ಕೆ..?
ಇಂಡಿ: ಬ್ರಿಟಿಷರ ಕಾಲದಲ್ಲಿಯೇ ಶಾಲೆಗಳನ್ನು ತೆರೆದು
ಅಕ್ಷರ ದಾಸೋಹ ಆರಂಭಿಸಿದ ಫುಲೆ ದಂಪತಿ
ಮಹಿಳೆಯರು ಮತ್ತು ದಲಿತ ಸಮುದಾಯದ
ವಿಮೋಚನೆಗಾಗಿ ಅವಿರತವಾಗಿ ಶ್ರಮಿಸಿದವರು ಎಂದು
ಸಹಾಯಕ ಪ್ರಾಧ್ಯಾಪಕ ಡಾ. ವಿಶ್ವಾಸ ಕೋರವಾರ
ಹೇಳಿದರು.
ಅವರು ಮಂಗಳವಾರ ಪಟ್ಟಣದ ಶ್ರೀ ಶಾಂತೇಶ್ವರ
ವಿದ್ಯಾವರ್ಧಕ ಸಂಘದ ಜಿ.ಆರ್. ಗಾಂದಿ, ಕಲಾ ಹಾಗೂ
ವಾಯ್.ಎ. ಪಾಟೀಲ ವಾಣಿಜ್ಯ ಮತ್ತು ಎಮ್.ಪಿ. ದೋಶಿ ವಿಜ್ಞಾನ ಪದವಿ ಮಹಾವಿದ್ಯಾಲಯದಲ್ಲಿ ನಡೆದ ಸಾವಿತ್ರಿ ಬಾಯಿ ಫುಲೆರವರ ಜಯಂತಿ ಕಾರ್ಯಕ್ರಮದಲ್ಲಿ
ಮಾತನಾಡಿದರು.
ಪ್ರತಿ ಗಂಡಿನ ಯಶಸ್ಸಿನ ಹಿಂದೆ ಒಬ್ಬ ಮಹಿಳೆ ಇರುತ್ತಾಳೆ
ಎಂಬ ನಾಣ್ನುಡಿಗೆ ವಿರುದ್ದವಾಗಿ ಸಾವಿತ್ರಿಬಾಯಿ ಫುಲೆರವರು ಕೇವಲ ಕೌಟುಂಬಿಕ ಹೆಣ್ಣಾಗಲು ಬಿಡದೆ, ಬಾಳ ಸಂಗಾತಿಯಾಗಿ, ಗುರುವಾಗಿ, ಮಹಿಳಾ ಹಕ್ಕುಗಳ
ಹೋರಾಟಗಾರ್ತಿಯಾಗಿ ಜ್ಯೋತಿಬಾ ಫುಲೆಯಾಗಿ
ರೂಪಿಸಿದರು. ಹೆಣ್ಣೊಂದು ಕಲಿತರೆ ಶಾಲೆಯೊಂದು ತೆರೆದಂತೆ ಎಂಬ ತತ್ವದಡಿ ಅಕ್ಷರಜ್ಞಾನ ಪಡೆದು ಭಾರತದ ಮೊದಲ ಮಹಿಳಾ ಶಿಕ್ಷಕಿಯಾದರು. ಮಹಿಳೆಯರು ಮನೆಯಿಂದ ಹೊರಬಂದು ಸಾಮಾಜಿಕ ಚಳುವಳಿಯಲ್ಲಿ ಪಾಲ್ಗೊಳ್ಳಲು ಹಿಂಜರಿಯುತ್ತಿದ್ದ ಕಾಲದಲ್ಲಿ ಸಾಮಾಜಿಕ ಹಾಗೂ ಮಹಿಳಾ ಹಕ್ಕುಗಳ ಹೋರಾಟಗಾರ್ತಿಯಾಗಿ ಸಮಾಜ ತಿದ್ದುವ ಕಾರ್ಯ ಮಾಡಿದರು. ಈ ಮಹಾನ ಹೋರಾಟಗಾರ್ತಿಯ ಸವಾಲುಗಳನ್ನು ಎದುರಿಸುವ ಛಲ ಎಲ್ಲ ಹೆಣ್ಣು ಮಕ್ಕಳಲ್ಲಿ ಬರಬೇಕು. ಹೆಣ್ಣು ಮಕ್ಕಳು ಇಂದು ಶಿಕ್ಷಣ ಪಡೆದು ಪುರುಷರ ಸಮಾನವಾಗಿ ನಿಲ್ಲಲು ಪ್ರೇರಕ ಶಕ್ತಿಯಾದ ಈ ಮಹಾನ ಚೇತನಕ್ಕೆ ಈ ಜಯಂತಿಯನ್ನುಆಚರಿಸುವ ಮೂಲಕ ಗೌರವ ಸಲ್ಲಿಸೋಣ ಎಂದರು.
ಈ ಕಾರ್ಯಕ್ರಮದ ಅಧ್ಯಕ್ಷತೆವಹಿಸಿ ಮಾತನಾಡಿದ
ಪ್ರಾಂಶುಪಾಲ ಡಾ. ಎಸ್.ಬಿ. ಜಾಧವ, ಮಹಿಳೆಯೊಬ್ಬಳು
ಶಿಕ್ಷಕಿಯಾಗುವುದು, ಧರ್ಮಕ್ಕೂ, ಸಮಾಜಕ್ಕೂ
ದ್ರೋಹ ಬಗೆದಂತೆ ಎಂಬ ಭಾವನೆ ಹೊಂದಿದ್ದ ಸಮಾಜದಲ್ಲಿದಿಟ್ಟತನದಿಂದ ಶಿಕ್ಷಕ ತರಬೇತಿ ಪಡೆದು ಸಾವಿತ್ರಿಬಾಯಿಫುಲೆ ಎಲ್ಲರ ವಿರೋಧದ ನಡುವೆ
ಅಂದುಕೊಂಡಿದ್ದನ್ನು ಸಾಧಿಸಿದ ದಿಟ್ಟ ಮಹಿಳೆ. ಸಾವಿತ್ರಿಬಾಯಿ ಹಾಗೂ ಜ್ಯೋತಿಬಾ ಫುಲೆಯವರ ತತ್ವಾದರ್ಶಗಳು, ಹೋರಾಟದ ಗುಣಗಳನ್ನು ಪ್ರತಿಯೊಬ್ಬ ಹೆಣ್ಣು ಮಕ್ಕಳು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು.
ಕಾರ್ಯಕ್ರಮದಲ್ಲಿ ಸಹಾಯಕ ಪ್ರಾದ್ಯಾಪಕ ಡಾ.
ಆನಂದ ನಡವಿನಮನಿ, ಡಾ. ಪಿ.ಕೆ. ರಾಠೋಡ, ಶ್ರೀಶೈಲ, ಡಾ. ಸಿ.ಎಸ್. ಬಿರಾದಾರ, ಡಾ. ಜಯಪ್ರಸಾದ ಡಿ, ಶ್ರೀಕಾಂತ ರಾಠೋಡ, ಮಲ್ಲಕಾರ್ಜುನ ಕೋಣದೆ, ಆರ್.ಪಿ. ಇಂಗನಾಳ, ಶೃತಿ ಪಾಟೀಲ, ಶ್ವೇತಾ ಕಾಂತ, ಭಾರತಿ ಕನ್ನೊಳ್ಳಿ, ಪಂಕಜಾ ಕುಲಕರ್ಣಿ, ಶೃತಿ ಬಿರಾದಾರ, ಪರಶುರಾಮ ಅಜಮನಿ, ಬಲರಾಮ ವಡ್ಡರ, ಸೇರಿದಂತೆ ಬೋಧಕರು, ಸಿಬ್ಬಂದಿಗಳು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಡಾ. ಸುರೇಂದ್ರ. ಕೆ, ಸ್ವಾಗತಿಸಿ, ವಂದಿಸಿದರು.
ಇಂಡಿ: ಪಟ್ಟಣದ ಶ್ರೀ ಶಾಂತೇಶ್ವರ ವಿದ್ಯಾವರ್ಧಕ ಸಂಘದ ಜಿ.ಆರ್. ಗಾಂದಿ, ಕಲಾ ಹಾಗೂ ವಾಯ್.ಎ. ಪಾಟೀಲ ವಾಣಿಜ್ಯ ಮತ್ತು ಎಮ್.ಪಿ. ದೋಶಿ ವಿಜ್ಞಾನ ಪದವಿ ಮಹಾವಿದ್ಯಾಲಯದಲ್ಲಿ ನಡೆದ ಸಾವಿತ್ರಿ ಬಾಯಿ ಫುಲೆರವರ ಜಯಂತಿ ಕಾರ್ಯಕ್ರಮದಲ್ಲಿ ವಿಶ್ವಾಸ ಕೋರವಾರ ಮಾತನಾಡಿದರು.