ಇಂಡಿ ಪ್ರತ್ಯೇಕ ಜಿಲ್ಲೆಗಾಗಿ ಆರ್ ಪಿ ಐ ಸಂಘಟನೆ ಪ್ರತಿಭಟನೆ..!
ಇಂಡಿ: ಇಂಡಿ-ರಿಪಬ್ಲಿಕನ ಪಾರ್ಟಿ ಆಪ್ ಇಂಡಿಯಾ (ಅಂಬೇಡ್ಕರ) ಘಟಕದ ಇಂಡಿ ತಾಲ್ಲೂಕಿನ ಸರ್ವ ಸದಸ್ಯರು ಹಾಗೂ ಸಾರ್ವಜನಿಕರು ಇಂಡಿ ಜಿಲ್ಲೆ ಆಗಬೇಕೆಂದು ಪ್ರತಿಭಟನೆ ನಡೆಸಿ ಕಂದಾಯ ಉಪ ವಿಭಾಗಾಧಿಕಾರಿ ಅಬೀದ್ ಗದ್ಯಾಳರವರಿಗೆ
ಮನವಿ ಸಲ್ಲಿಸಿದರು.
ತಾಲೂಕಾ ಅಧ್ಯಕ್ಷ ಚಂದ್ರಶೇಖರ ಮೇಲಿನಮನಿ
ಮಾತನಾಡಿ, ಇಂಡಿ ತಾಲೂಕು ಕರ್ನಾಟಕ ಮತ್ತು
ಮಹಾರಾಷ್ಟ್ರದ ಗಡಿ ಭಾಗದ ತೀರ ಹಿಂದುಳಿದ
ಪ್ರದೇಶಗಳಲ್ಲೊಂದಾಗಿದ್ದು, ಇಲ್ಲಿ ಶೈಕ್ಷಣಿಕವಾಗಿ,
ಸಾಮಾಜಿಕವಾಗಿ, ಆರ್ಥಿಕವಾಗಿ ಇನ್ನು ಪ್ರಗತಿ ಕಾಣಬೇಕಾಗಿದೆ. ಆಡಳಿತಾತ್ಮಕ ದೃಷ್ಟಿಯಿಂದ ಇಂಡಿ ಪ್ರತ್ಯೇಕ ಜಿಲ್ಲೆಯ ರಚನೆಗೆ ಸಂಭಂದಿಸಿದಂತೆ ಜಿಲ್ಲೆಗೆ ಬೇಕಾಗಿರುವ ಪೂರಕ ಅಂಶಗಳು ಸಾಕಷ್ಟು ಇರುತ್ತವೆ, ಅದರಂತೆ ಹಲವಾರು ವರ್ಷಗಳಿಂದ ಅಭಿವೃದಿ ಕಾಣದೆ ತಿರ ಹಿಂದುಳಿದ ಗಡಿ ಭಾಗವಾಗಿದು ಇಲ್ಲಿ ಪದವಿ ಕಾಲೇಜುಗಳು , ತಾಂತ್ರಿಕ ಇಂಜನಿಯರಿಂಗ, ಡಿಪ್ಲೊಮಾ ಕಾಲೇಜುಗಳು, ಪ್ಯಾರಾ ಮೇಡಿಕಲ, ನಸಿರ್ಂಗ ಕಾಲೇಜು ಹಾಗೂ ಸ್ನಾತಕೊತರ ಕಾಲೇಜುಗಳು ಹೀಗೆ ಹಲವಾರು ವೈವಿಧ್ಯಮಯ ಸ್ವರೂಪದ ಕಾಲೇಜುಗಳ ಸ್ಥಾಪನೆಗೆ ಹಾಗೂ ಅವುಗಳ ಸಂಭಂಧಿತ ಗಡಿನಾಡು ಅಭಿವೃದ್ಧಿಗಾಗಿ ಸದರ ಇಂಡಿಯನ್ನು ಪ್ರತ್ಯೇಕ ಜಿಲ್ಲಾ ಕೆಂದ್ರವಾಗಿ ಘೋಷಣೆ ಮಾಡಲು ಆಗ್ರಹಿಸುತ್ತದೆ ಹಾಗೂ ಸಂವಿಧಾನ ವಿಧಿ 371 (ಜೆ) ಗೆ ಸೆರ್ಪಡೆ ಹಕ್ಕೋತಾಯ ಮಾಡುತ್ತಾ ಸೂಕ್ತ ನಿರ್ಣಯ ಕೈಗೊಂಡು ಇಂಡಿಯನ್ನು ಜಿಲ್ಲೆಯನ್ನಾಗಿ ಘೋಷಣೆ ಮಾಡಬೇಕೆಂದು ಮಾನ್ಯ ಮುಖ್ಯ ಮಂತ್ರಿಯವರಿಗೆ ಉಪವಿಭಾಗಾಧಿಕಾರಿ ಅಬೀದ್ ಗದ್ಯಾಳ ಇಂಡಿ ಇವರ ಮುಖಾಂತರ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ರಾಮಚಂದ್ರ ಕಾಂಬಳೆ, ವಿಶ್ವನಾಥ ವಾಘ್ಮೋರೆ, ಸುರೇಶ ಕಾಂಬಳೆ, ಪರಶುರಾಮ ಭಾವಿಕಟ್ಟಿ, ವಿಕಾಸ ಗುಡಮಿ, ಎಸ್.ಬಿ.ಹರಿಜನ, ಪರಶುರಾಮ ಉಕ್ಕಲಿ, ಬಿ. ವೇಂಕಟೇಶ ಮತ್ತಿತರಿದ್ದರು.
ಇಂಡಿ: ಇಂಡಿ ಜಿಲ್ಲಾ ಆಗಬೇಕೆಂದು ಆಗ್ರಹಿಸಿ ಆರ್.ಪಿ.ಐ ಕಾರ್ಯಕರ್ತರು ಪ್ರತಿಭಟನೆ ನಡೆಸಿ ಕಂದಾಯ ಉಪ ವಿಭಾಗಾಧಿಕಾರಿ ಅಬೀದ್ ಗದ್ಯಾಳರವರಿಗೆ ಮನವಿ ಸಲ್ಲಿಸಿದರು.